ಪ್ರಾರಂಭ ಪದದ ಹುಡುಕು
ಹರಿ ಬೇಡೆ ಕವಚಮಂ ನೀನರಿದಿತ್ತಯ್ ಕೊಂತಿ ಬೇಡೆ ಬೆಚ್ಚದೆ ಕೊಟ್ಟಯ್ಪುರಿಗಣೆಯಂ ನಿನಗೆಣೆ ಕಸವರಗಲಿ ಮೆಯ್ಗಲಿಯುಮಾವನಂಗಾಧಿಪತಿ॥೩೩॥
ಹರಿಸಂಧಾನಕ್ಕೆ ವಂದಂದವಗಡಿಸಿದಹಂಕಾರಮೇನಾಯ್ತೊ ಕೃಷ್ಣಾಂಬರಕೇಶಾಕೃಷ್ಟಿಯಂ ಮಾಡಿಸಿದ ಮದಮದೇನಾಯ್ತೊ ಕೌಂತೇಯರಂ ಮಚ್ಚರದಿಂ ಕಾಂತಾರದೊಳ್ ತಿರ್ರನೆ ತಿರಿಪಿದ ಸೊರ್ಕೀಗಳೇನಾದುದೆಂದಾಕುರುವಂಶಾಧೀಶನಂ ಮೂದಲಿಸಿದನದಟಂ ಭೀಮನುದ್ದಾಮಭೀಮಂ॥೧೪॥
ಹಲಚಕ್ರಾಂಕುಶರೇಖಾವಿಲಸಿತ ಪದತಳಕೆ ಮಾಡೆ ಪುನರುಕ್ತತೆಯಂಹಲಚಕ್ರಾಂಕುಶಮಾಕುರುಕುಲಜಂ ಕುಸಿಕುಸಿದು॥೧೭॥