ಪ್ರಾರಂಭ ಪದದ ಹುಡುಕು
ವನರುಹವಿಷ್ಟರಂ ರುಚಿರಂ ರೇಚಕ ಪೂರಕ ಕುಂಭಕಕ್ರಿಯಾಮನಮಿರೆ ನೆತ್ತಿಯೊಳ್ ದರನಿಮೀಲಿತ ದೃಷ್ಷಿ ನಿವಿಷ್ಟ ಮಾಗೆ ಮೂಗಿನತುದಿಯೊಳ್ ನೀರುದ್ಧ ಮಂತ್ರ ಪದಾಕ್ಷರಂಗಳಂಜಿನುಗುತಲಿರ್ದನಾ ಪರಮಯೋಗಿಯವೊಲ್ ಫಣಿರಾಜಕೇತನಂ॥೧೫॥
ವನಿತೆಯ ಕೇಶಮಂ ಸಭೆಯೊಳೆನ್ನನುಜಂ ತೆಗೆವಲ್ಲಿ ಗಂಡನಾಗನೆ ಭಗದತ್ತನಾನೆ ಬರಿಯೆಲ್ವುಡಿವನ್ನೆಗಮೊತ್ತೆ ಗಂಡನಾಗನೆ ಕೊಲಲೊಲ್ಲದಂಗಪತಿ ಬಿಲ್ಲೊಳೆ ಕೊಂಡೆಳೆವಲ್ಲಿ ಗಂಡನಾಗನೆ ಕುರುಬಾಲಸಂಹರಣ ಮಾತ್ರದೆ ಮಾರುತಿ ಗಂಡನಾದನೇ॥೨೭॥
ವರಪದ್ಮಾಸನದೊಳ್ ಕನನ್ಮಣಿಮಯಂ ಸಿಂಹಾಸನಂ ಬ್ರಾಹ್ಮಿಯೊಳ್ಪರಮಶ್ರೀ ಗಣನಾಕ್ಷಸೂತ್ರಮಣಿಯೊಳ್ ರತ್ನೋಜ್ವಲಂ ಭೂಷಣಂದೊರೆಯಿಗಿರ್ಪಿನಮೊಂದುಗುಂದದಖಿಲಂ ವಿಜ್ಞಾನದಿಂದಂ ಜಗದ್ಗುರುವಾದಂ ನಮಗೀಗೆ ಬೇಳ್ಪವರಮಂ ಶ್ರೀರಾಜಕಂಜಾಸನಂ
ವಳಿತಶಿಳೀಮುಖಮುತ್ಪಳದಳನಯನಂ ಕಂಜರಂಜಿತ ಜಯಲಕ್ಷ್ಮೀವಿಳಸಿತಮೆನೆ ದಿಟ್ಟಿಗೆ ಕೊಳುಗುಳಮಂ ಪೋಲ್ದತ್ತು ಪೂಗೊಳಂ ಕೌರವನಾ॥೧೩॥
ವಿನುತವಿರೋಧಿಮಂಡಳಿಕಮೌಳಿ ವಿರಾಜಿತ ಪಾದಪೀಠ ಕಾಂಚನಕಮಳಾಯಮಾನಮಿವು ನಿಮ್ಮಯ ಮೆಲ್ಲಡಿ ಭಿಂಡಿವಾಳದಂಬಿನ ಕರವಾಳ ಕಕ್ಕಡೆಯ ಕೊಂತದ ಧಾರೆಗಳುರ್ಚೆ ಸಂಯುಗಾವನಿತಳದೊಳ್ ವಿಧಾತ್ರವಶದಿಂ ನಿಮಗಂ ನಡೆವಂತುಟಾದುದೇ॥೧೮॥