ಪ್ರಾರಂಭ ಪದದ ಹುಡುಕು
ದರಹಾಸಪೇಶಲಂ ದಿಕ್ಕರಿಗಮನಂ ಕನಕಪರ್ವತ ಪ್ರಾಂಶುದಿನೇಶ್ವರಸುತನ ರೂಪು ಚಿತ್ರಂಬರೆದಂತಿರ್ದಪುದು ಚಿತಾತಭಿತ್ತಿಯೊಳೆನ್ನಾ॥೩೪
ದಾಂಟುವೆನೊ ಕುಲನಗಂಗಳನೀಂಟುವೆನೊ ಚತುಸ್ಸಮುದ್ರಮಂ ರವಿ ಶಶಿಯಂಮೀಂಟುವೆನೊ ಗಗನತಳದಿಂಗಂಟಲನೊತ್ತುವೆನೊ ಸಕಲ ದಿಕ್ಪಾಲಕರಂ॥೧೯॥
ದಿನಕರ ತನಯನ ದುಶ್ಯಾಸನನವಿಯೋಗದೊಳಮಿಂದುವರೆಗಂ ನೋವಿಲ್ಲೆನಗಹಿತರೊಡನೆ ಸಂಧಿಗುಡೆನೆ ನೊಂದೆಂ ಸ್ವಜನಗುರುಜನಾಭಾಯರ್ಥನೆಯಿಂ॥೭॥
ದಿವಿಜತನಯಂಗೆ ಮುಖ್ಯಂರವಿಜಂಜಯಕಾದನೆನಗೆ ಕಣ್ಣೊಳ್ ಕಾಣಂಕಿವಿಯೊಳ್ ಕೇಳಂ ಕಾಣ್ಬಂದವೆಂತು ಕೇಳ್ವಂದಮೆಂತು ತಲೆಯಿಲ್ಲದನಾ॥೩೬॥
ದೊಣೆಯಿಂದಂ ತೆಗೆವಾಗಳೊಂದು ತುಡುವಾಗಳ್ ಪತ್ತುಬಾಣಂ ಧನುರ್ಗುಣದಿಂದಂ ಬಿಡುವಲ್ಲಿ ನೂರು ಪರಿವಾಗಳ್ ಸಾಸಿರಂ ವೈರಿಮಾರ್ಗಣಮಂ ಛೇದಿಸುವಲ್ಲಿ ಲಕ್ಕೆ ನಡುವಾಗಳ್ ಕೋಟಿ ಸೇನಾಂಗದೊಳ್ಗಣನಾತೀತಮಿದೆಂದೊಡೇವೊಗಳ್ವುದೋ ಬಿಲ್ಬಲ್ಮೆಯಂ ಪಾರ್ಥನಾ॥೩॥
ದೊರೆ ಯಮಪುತ್ರನಿರ್ದಿರವು ವಾಯುಜನಿರ್ದಿರವಗ್ನಿಪುತ್ರಿಯಿಎರ್ದಿರವಮಳರ್ಕಳಿರ್ದಿರವು ಮತ್ಸ್ಯನಿವಾಸದೊಳೆಲ್ಲಮಂತೆ ಮೆಯ್ಗರೆದಿರೆ ಗಂಡುಗೆಟ್ಟುಬಳೆದೊಟ್ಟು ಬೃಹನ್ನಳೆಯಾಗಿ ಪಾರ್ಥನಿರ್ದಿರವುಮೆನಲ್ಕೆ ಪಾರ್ಥನದು ರಂಭೆಯ ಶಾಪಮೊ ತನ್ನ ಪಾಪಮೋ॥೩೦॥