ಪ್ರಾರಂಭ ಪದದ ಹುಡುಕು

(20) (5) (10) (3) (1) (0) (0) (0) (8) (0) (0) (6) (1) (0) ಅಂ (1) ಅಃ (0) (20) (1) (10) (0) (0) (2) (0) (7) (0) (0) (0) (0) (0) (0) (0) (12) (0) (6) (3) (20) (19) (0) (8) (2) (10) (1) (2) (0) (0) (5) (2) (0) (6) (3) (0)
ಕೂರಿಸಿ ವೀರ ಶ್ರೀಯಂ ಕೂರದರಂ ಕೊಂದು ಸಮರಜಯಮಂ ಮಾಡಲ್ ಕೂರಸಿಯೊಳ್ ನೆಲಸುಗೆ ಕಂ ಠೀರವವಾಹನೆ ಚಳುಕ್ಯಕಂಠೀರವನಾ
--------------
ರನ್ನ
ಕೃತಿ ನೆಗಳ್ದ ಗದಾಯುದ್ಧಂ ಕೃತಿಗೀಶಂ ಚಕ್ರವರ್ತಿ ಸಾಹಸಭೀಮಂ ಕೃತಿಯಂ ವಿರಚಿಸಿದನಲಂ ಕೃತಿಯಂ ಕವಿರತ್ನನೆಂದೊಡೇವಣ್ಣಿಪುದೋ
--------------
ರನ್ನ
ಕೆಲರಂ ಕುರಿದರಿದರಿದಂ ಕೆಲಂಬರಂ ಸಂಧಿಸಂಧಿಯಂ ಪರಿಯೆಚ್ಚಂ ಕೆಲರಂ ದೆಸೆವಲಿಗೆಯ್ದಂ ಕೆಲರಂ ಭುಜಬಲದಿನರಿದು ಶಿಲೆಯೊಳ್ ಪೊಯ್ದಂ॥೧೦॥
--------------
ರನ್ನ
ಕೆಲರಂ ನುಣ್ಣನೆ ನೊಣೆದಂ ಕೆಲರಂ ಪಿಡಿದಡಸಿ ನುಂಗಿದಂ ಕುರುಕುಲರಂ ಕೆಲರಂ ಸೌಳನೆ ಸೀಳ್ದಂ ಕೆಲರಂ ಮಾರುತಿ ಜವಂಗೆ ಬಾಣಸುಗೆಯ್ದಂ॥೯॥
--------------
ರನ್ನ
ಕೆಳೆಯಂಗಾಯ್ತಸುಮೋಕ್ಷಮಾಗದೆನಗಂ ಬಾಷ್ಮಾಂಬು ಮೋಕ್ಷಂ ಧರಾ ತಳಮಂ ಕೊಟ್ಟನಿವಂ ಜಳಾಂಜಳಿಯುಮಂ ನಾಂ ಕೊಟ್ಟೆನಲ್ಲನ್ಯಮಂ ಡಳಮಂ ಸುಟ್ಟನಿವಂ ಪ್ರತಾಪ ಶಿಖಿಯಿಂದಾನೀತನಂ ಸತ್ಕ್ರಿಯಾ ನಳನಿಂ ಸುಟ್ಟೆನುಮಿಲ್ಲ ಮತ್ಪ್ರಿಯತಮಂ ಕರ್ಣಂಗಿದೇಂ ಕೂರ್ತೆನೋ॥೩೧॥
--------------
ರನ್ನ
-->