ಒಟ್ಟು 90 ಕಡೆಗಳಲ್ಲಿ , 1 ಕವಿಗಳು , 73 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಂಧನೃಪಸುತನೆಯೋ ಜಾತ್ಯಂಧನೆಯೋ ಮೆಟ್ಟದಗಲ್ದು ಪೋಗೆನುತುಂ ಕೋಪಾಂಧರ್ ಜಡಿದರ್ ಪತಿಯ ಕಬಂಧಮನೆಡಗಲಿಸಿ ಪೋಪ ದುರ್ಯೋಧನನಂ॥೧೬॥
ಅನುಜೇಯನಿತ್ತು ನರಂಗಾತನ ತನಯಂಗಿತ್ತು ತನ್ನ ಮಗಳಂ ತಾನಾತನ ರದಮನೆಸಗಿ ಧರ್ಮಜನನುಜನ ನೆವದಿಂದಮರಸುಗೆಯ್ವಂ ಕೃಷ್ಣಂ॥೪೨॥
ಅರಿಗಳ್ ಪಾಂಡವರೊಳ್ವಿರೋಧಮಂ ಬಿಸುಟು ಸಂಧಿಯಂ ಮಾಡುವುದೆಂಬರಮಾತಂ ಕೇಳಿಸಲೆನ್ನೆರಡುಂ ಕಿವಿಗಳನದೇಕೆ ಬಿದಿ ಮಿಡಿದನೋ॥೮॥
ಅರಿಯೆನಿದಂ ನಿನ್ನಿಂದಿನತೆರನಂ ನೀನೆನಗದೇಕೆ ಮುಳಿದಿರ್ಪೆಯೊ ಮೇಣ್ಮರುವಾತುಗುಡದೆ ರವಿಸುತಮರಸುಂದಿರ್ದಪೆಯೊ ಮೇಣ್ಬಳಲ್ದಿರ್ದಪೆಯೋ॥೧೫॥
ಅರೆಮುಗಿದಿರ್ದ ಕಣ್ಗಳುಮಲರ್ದ ಮೊಗಂ ಕಡಿವೋದ ಕೆಯ್ಯುಮಾಸುರತರಮಾಗೆ ಕರ್ಚಿದವುಡುಂ ಬೆರಸನ್ಯಶರಪ್ರಹಾರ ಜರ್ಜರಿತಶರೀರನಾಗಿ ನವಲೋಹಿತವಾರ್ಧಿಯೊಳಳ್ದು ಬಿಳ್ದನಂಕುರುಪತಿ ನೋಡಿ ಕಂಡನಭಿಮನ್ಯುಕುಮಾರನನಾಜಿವೀರನಂ ॥೫೪॥
ಅಸ಼ಮಬಲ ಭವದ್ವಿಕ್ರಮಮಸಂಭವಂ ಪೆರರ್ಗೆ ನಿನ್ನನಾನಿನಿತಂ ಪ್ರಾರ್ಥಿಸುವೆನಭಿಮನ್ಯು ನಿಜ ಸಾಹಸೈಕದೇಶಾನುಮರಣಮೆಮಗಕ್ಕೆ ಗಡಾ॥೫೭॥
ಅಸುಹೃತ್ಸೇನೆಗೆ ಸಾಲ್ವನೊರ್ವನೆ ಗಡಂ ಲುದ್ರಾವತಾರಂ ಗಡಂನೊಸಲೊಳ್ ಕಣ್ಗಡಮೆಂದು ನಚ್ಚಿ ಪೊರೆದೆಂ ತಾನಕ್ಕೆ ತಮ್ಮಮ್ಮನಕ್ಕಿಸಲಂಬಂ ತಿರುವಾಯ್ಗೆ ತಂದರಿವರೇ ತಾಮಿರ್ವರುಂ ಕಯ್ದುವಂಬಿಸುಟರ್ ಜೋಳದ ಪಾಳಿಯಂ ಬಗೆದರಿಲ್ಲಾದ್ರೌಣಿಯುಂ ದ್ರೋಣನುಂ
ಆಮ್ಮಗನೆನಾಗೆ ಧರ್ಮಜನೇಮ್ಮಗನಲ್ಲನೆ ಬಳಿಕ್ಕೆ ನೀಮುಂ ತಾಮುಂನಿಮ್ಮೊಳ್ ನೇರ್ಪಡುಗಿಡದೆ ಸುಖಮ್ಮುನ್ನಿನ ತೆರದೆ ಬಾಳ್ವುದಾಂ ಬೆಸಕೆಯ್ಯೆಂ॥೧೨॥
ಇನಸುತ ಗಾಂಡಿವಿ ಸಂಮೋಹನಾಸ್ತ್ರದಿಂದೆಚ್ಚು ನಿದ್ರೆಯಂ ಮಾಡಿದನಂದಿನ ಗೋಗ್ರಹಣದೊಳೀಗಳ್ನಿನಗಿಂತೀ ದೀರ್ಘನಿದ್ರೆಯಂ ಮಾಡಿದನೇ॥೨೧॥
ಇನಸುತನಿರವಂ ದುಶ್ಯಾಸನನಿರವಂ ಕಂಡುಮಿನ್ನುಮೆನ್ನಸುವಿದು ನೆಟ್ಟನೆ ಪೋದುದಿಲ್ಲ ಕಲ್ಲೆರ್ದೆತನದಿಂದೆನ್ನಂತು ಬರ್ದನಾವನುಮೊಳನೇ॥೨೮॥
ಇನಿಸಿನಿಸುತಿಂಬೆವೊರ್ಮೆಯೆತಿನೆ ತವುಗುಮಿದೆಂದು ತಾಯುಮಾನೆಯ ಪೆಣನಂತಿನಲಾರದೆ ಪೆರರ್ಗಿಕ್ಕದೆಮನಮಂ ಪಸುತಿರ್ದುವಲ್ಲಿ ಲೋಭಿಮರುಳ್ಗಳ್॥೩೮॥
ಇರಲಿಂತೀಮಾದ್ರಿಪುತ್ರರ್ ಬಡವುಗಳವರೇಗೆಯ್ವರಿಂ ಧರ್ಮಪುತ್ರಂಬೆರಸೀಗಳ್ ಬರ್ಕೆ ಭೀಮಂ ಹರಿಸುತನೊಡನೀ ಮೂವರುಂ ಬರ್ಕೆ ಮೇಣಯ್ವರುಮಿಂಬರ್ಕೀ ಕೃತಾಂತಾತ್ಮಜಪವನಜಗಾಂಡೀವಧನ್ವರ್ಕಳೀಮೂವರೊಳೊರ್ವಂ ಕೃಷ್ಣ ಬರ್ಕಿಂ ಪೊಣರಲನಿಬರುಂ ಬರ್ಕೆ ಮೇಣ್ ಬನ್ನಮೀವೆಂ॥೪೨॥
ಇರಿಯೆಂ ಬಿಳ್ದನನೆಂಬೀಬಿರುಬಿಂದಂ ಬೀಸೆ ಗದೆಯ ಗಾಳಿಯ ಕೋಳೆಳ್ಚರಿಸಿದುದು ಭೀಮನಂ ಮೆಯ್ಮರೆದವನಂ ತಂದೆ ಸುತರ್ಗೆ ಕೂರದರೊಳರೇ॥೩೨॥
ಎನಗಾಜೂದಿನೊಳಗ್ರಜಾನುಜಸಮೇತಂ ಗಂಡುದೊಳ್ತಾಗಿ ಕಾನನದೊಳ್ ವಲ್ಕಲಧಾರಿಯಾಗಿ ಹರನೊಳ್ ದಿವ್ಯಾಸ್ತ್ರಮಂ ಬೇಡೆ ಬೆ,ಳ್ತನದಿಂ ತಾಪಸನಾಗಿ ಪೇಡಿಯೆನೆ ಮತ್ಸ್ಯಾವಾಸದೊಳ್ ವಾಸುದೇವನನಂಟಂ ನಟನಾಗಿ ಬಾರದ ಭವಂ ಬಂದಂ ಪೃಥಾನಂದನಂ॥೨೯॥
ಎನಿತುಂ ಪೊಕ್ಕಿರ್ದಪಯ್ ನೀಂ ಪೊರಮಡು ಕೊಳದಿಂ ದ್ರೌಷದೀದ್ರೋಹದುಶ್ಯಾಸನದುಷ್ಟಜ್ಯೇಷ್ಠ ಭೀಷ್ಮಪ್ರಮುಖನಿಖಿಲಬಂಧುಕ್ಷಯೋತ್ಪನ್ನದುಃಖಧ್ವನಿವಾರಿಚ್ಛಿನ್ನಧೈರ್ಯದ್ರುಮ ಯಮಸುತ ನಿಷ್ಕರಣ ದ್ವೇಷಿ ಭೀಮ ಧ್ವನಿಯಂಕೇಳ್ದಿನ್ನುಮಿರ್ದಯ್ ಕುರುಕುಲವಿಲಯೋತ್ಪಾತನೋತ್ಪಾತಕೇತೂ॥೧೫॥