ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 5 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅನಿಲತನೂಜನ ಸಿಂಹಧ್ವನಿಯಂ ಕೇಳ್ದಳ್ಕಿ ತತ್ಸರೋವರದೆರ್ದೆ ಪವ್ವನೆ ಪಾರುವಂತೆ ಪಾರಿದುವನಾಕುಳಂ ಕೊಳದೊಳಿರ್ದ ತದ್ವಿಹಗಕುಳಂ॥೧೭॥
ಅರಸಂ ದೀಕ್ಷಿತನಿಲ್ಲಿ ಋತ್ವಿಜರುಮೆಮ್ಮೀ ನಾಲ್ವರುಂ ಸಂಗರಾಧ್ವರದೊಳ್ ತಾನುಪದೇಶಕಂ ಮುರಹರಂ ನೀನುಂ ಗೃಹೀತವ್ರತಾಚರಣವ್ಯಾಪಿಕೆಯುಂ ಭವತ್ಪರಿಭವಂ ಸಂಚಾರಕಂ ಕೌರವೇಶ್ವರನೀತಂ ಪಶುವಾಗೆಬೇಳ್ದೆನಿವಂ ಕೋಪಾಗ್ನಿಯಿಂದಗ್ನಿಜೇ॥೪೬॥
ಅರೆಸೀದುವು ತಾವರೆ ಖಗಮರೆಬೆಂದುವು ಭೀಮಕೋಪಶಿಖಿ ಮುಟ್ಟೆ ಸರೋವರದ ಮಳಲ್ ಪುರಿಗಡಲೆಗೆಪುರಿದ ಮಳಲ್ ಕಾಯ್ವ ತೆರದೆ ಕಾಯ್ದತ್ತೆತ್ತಂ॥೧೮॥
ಒಳಗಾದಂ ಪಗೆವಂ ಸರೋವರದೊಳಿರ್ದಿನ್ನೆತ್ತವೋಪಂ ಸರೋಜಳಮಂ ತವೆ ಪೀರ್ದು ಪೀರ್ವೆನಸುಹೃದ್ರಕ್ತಾಂಬುವಂ ತೋರ್ಪೆನೆನ್ನಳವಂ ಮತ್ಪತಿಗೆಂದು ಸಂತಸದೆ ಬಾಹಾಸ್ಭಾಲನಂಗೆಯ್ದು ದಿಗ್ವಳಯಂ ಮಾರ್ದನಿಯಿಟ್ಟವೊಲ್ ಗಜರಿದಂ ಚಾಳುಕ್ಯ ಕಂಠೀರವಂ॥೪೭॥
ಮದಮಣಮಿಲ್ಲ ದಾನಗುಣದಿಂ ನೆಗಳ್ದ್ದುಂ ನೃಪಸಿಂಹನಾಗಿಯುಂವಿದಿತವಿಶುದ್ಧಭದ್ರಗುಣನಂತೆ ವಿರುದ್ಧಮಿದೆಂಬಿನಂ ನಿಜಾಭ್ಯುದಯನಿವೇದದೀರ್ಘಕರಮೊಪ್ಪೆ ಜಗತ್ಪ್ರಿಯವಾದ ದೇವನಂಕದ ಗಣನಾಯಕಂ ವರದನಕ್ಕಮಗಮ್ಮನಗಂಧವಾರಣಂ