ಒಟ್ಟು 84 ಕಡೆಗಳಲ್ಲಿ , 1 ಕವಿಗಳು , 61 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಾತೀಯ ಕವೀಶ್ವರ ರಾರುಂ ಮುನ್ನಾರ್ತರಿಲ್ಲ ವಾಗ್ದೇವಿಯ ಭಂ ಡಾರದ ಮುದ್ರೆಯನೊಡೆದಂ ಸಾರಸ್ವತಮೆನಿಪ ಕವಿತೆಯೊಳ್ ಕವಿರತ್ನಂ
--------------
ರನ್ನ
ಅರಿಯೆಮೆ ಬಿಲ್ಲಬಿನ್ನಣಕೆ ಗಾಂಡಿವಿಯಲ್ತು ಪಿನಾಕಪಾಣಿಯುಂ ನೆರೆಯನಿದಿರ್ಚಿ ನಿಮ್ಮೊಡನೆ ಕಾದಿ ಗೆಲಲ್ಕದು ನಿಮ್ಮುಪೇಕ್ಷೆಯೆಂ ದರಿಯೆನಿದೆನ್ನ ಕರ್ಮವಶಮೆಂದರಿಯೆಂ ನಿಮಗಿಂತು ಸಾವುಮೇ ತೆರದಿನಕಾಲಣಂ ನೆರೆಯೆ ಸಂಭವಿಸಿರ್ದುದೊ ಕುಂಭಸಂಭವಾ॥೫೦॥
--------------
ರನ್ನ
ಅರೆಮುಗಿದಿರ್ದ ಕಣ್ಗಳುಮಲರ್ದ ಮೊಗಂ ಕಡಿವೋದ ಕೆಯ್ಯುಮಾ ಸುರತರಮಾಗೆ ಕರ್ಚಿದವುಡುಂ ಬೆರಸನ್ಯಶರಪ್ರಹಾರ ಜ ರ್ಜರಿತಶರೀರನಾಗಿ ನವಲೋಹಿತವಾರ್ಧಿಯೊಳಳ್ದು ಬಿಳ್ದನಂ ಕುರುಪತಿ ನೋಡಿ ಕಂಡನಭಿಮನ್ಯುಕುಮಾರನನಾಜಿವೀರನಂ ॥೫೪॥
--------------
ರನ್ನ
ಅರೆಸೀದುವು ತಾವರೆ ಖಗ ಮರೆಬೆಂದುವು ಭೀಮಕೋಪಶಿಖಿ ಮುಟ್ಟೆ ಸರೋ ವರದ ಮಳಲ್ ಪುರಿಗಡಲೆಗೆ ಪುರಿದ ಮಳಲ್ ಕಾಯ್ವ ತೆರದೆ ಕಾಯ್ದತ್ತೆತ್ತಂ॥೧೮॥
--------------
ರನ್ನ
ಅಸುಹೃತ್ಸೇನೆಗೆ ಸಾಲ್ವನೊರ್ವನೆ ಗಡಂ ಲುದ್ರಾವತಾರಂ ಗಡಂ ನೊಸಲೊಳ್ ಕಣ್ಗಡಮೆಂದು ನಚ್ಚಿ ಪೊರೆದೆಂ ತಾನಕ್ಕೆ ತಮ್ಮಮ್ಮನ ಕ್ಕಿಸಲಂಬಂ ತಿರುವಾಯ್ಗೆ ತಂದರಿವರೇ ತಾಮಿರ್ವರುಂ ಕಯ್ದುವಂ ಬಿಸುಟರ್ ಜೋಳದ ಪಾಳಿಯಂ ಬಗೆದರಿಲ್ಲಾದ್ರೌಣಿಯುಂ ದ್ರೋಣನುಂ
--------------
ರನ್ನ
ಆನುಂ ದುಶ್ಯಾಸನನುಂ ನೀನುಂ ಮೂವರೆ ದಲಾತನುಂ ಕಳಿದ ಬಳಿ ಕ್ಕಾನುಂ ನೀನೆ ದಲೀಗಳ್ ನೀನುಮಗಲ್ದೆತ್ತವೋದೆಯಂಗಾಧಿಪತಿ॥೧೧॥
--------------
ರನ್ನ
ಇಂದಾನಿದೆಂ ಮೇಣಿನ ನಂದನ ಕೇಳ್ ಪಾಂಡುತನಯರಾದರ್ ನಿನ್ನಂ ಕೊಂದುಂ ದುಶ್ಯಾಸನನಂ ಕೊಂದುಂ ಬರ್ದುಕುವರೆ ಬರ್ದುಕರಂಗಿಧಿಪತೀ॥೩೭॥
--------------
ರನ್ನ
ಇನಸುತ ಗಾಂಡಿವಿ ಸಂಮೋ ಹನಾಸ್ತ್ರದಿಂದೆಚ್ಚು ನಿದ್ರೆಯಂ ಮಾಡಿದನಂ ದಿನ ಗೋಗ್ರಹಣದೊಳೀಗಳ್ ನಿನಗಿಂತೀ ದೀರ್ಘನಿದ್ರೆಯಂ ಮಾಡಿದನೇ॥೨೧॥
--------------
ರನ್ನ
ಇರಿಯೆಂ ಬಿಳ್ದನನೆಂಬೀ ಬಿರುಬಿಂದಂ ಬೀಸೆ ಗದೆಯ ಗಾಳಿಯ ಕೋಳೆ ಳ್ಚರಿಸಿದುದು ಭೀಮನಂ ಮೆ ಯ್ಮರೆದವನಂ ತಂದೆ ಸುತರ್ಗೆ ಕೂರದರೊಳರೇ॥೩೨॥
--------------
ರನ್ನ
ಈ ದೊರೆಯರಮಗನುಂ ಮೃಷ ವಾದಂ ನೋಡೆಂದು ಧರ್ಮನಂ ಮೂದಲಿಸಲ್ ಪೋದಂ ಪುತ್ರನನಲಸಲ್ ಪೋದನೆ ಯಮಪುರಕೆ ಮುಕ್ಥಬಾಣಂ ದ್ರೋಣಂ॥೨೫॥
--------------
ರನ್ನ
ಈಯಲಿರಿಯಲ್ ಶರಣ್ಬುಗೆ ಕಾಯಲ್ ಕ್ಷತ್ರಿಯರೆ ಬಲ್ಲರಬ್ರಹ್ಮಣ್ಯಂ ಭೋಯೆನಲುಂ ಬ್ರಾಹ್ಮಣರವಿ ಧಾಯೆನಲುಂ ಬಲ್ಲರಿರಿರಲವರೆಂತರಿವರ್॥೧೬॥,
--------------
ರನ್ನ
ಈಯೆರಡುಮೆನ್ನ ನಿಡುದೋ ಳಾಯತ್ತಂ ವೀರವೃತ್ತಿ ಜಯಮೆಂಬುದು ದೈ ವಾಯತ್ತಮಜ್ಜ ಭರತಾ ನ್ವಾಯಕ್ಕೆ ಕಲಂಕಮಾಗದಂತಿರೆ ನೆಗಳ್ವೆಂ॥೪॥
--------------
ರನ್ನ
ಉಡಿದಿರ್ದ ಕಯ್ದು ನೆತ್ತರ ಕಡಲೊಳಗಡಿಗಡಿಗೆ ತಳಮನುರ್ಚುತ್ಥಿರೆ ಕಾ ಲಿಡಲೆಡೆವಡೆಯದೆ ಕುರುಪತಿ ದಡಿಗವೆಣಂಗಳನೆ ಮೆಟ್ಟಿ ನಡೆಯುತ್ತಿರ್ದಂ॥೧೪॥
--------------
ರನ್ನ
ಎನಗಿದಯುಕ್ತಮೆಂದಿರದೆ ಪೆರ್ಬುಸಿಯೊಳ್ ಪುದಿದಿರ್ದ ಧರ್ಮನಂ ದನನನೆ ಧರ್ಮನಂದನನೆನಲ್ ದೊರೆ ದಿಗ್ಗಜಮೊತ್ತೆ ಬಿರ್ದು ಬಿ ರ್ದಿನಿಸಗಿದಿರ್ದ ಭೀಮನನೆ ಭೀಮನೆನಲ್ ದೊರೆ ಪೇಡಿಯಾಗಿ ಮ ತ್ಸ್ಯನ ಮನೆವೊಕ್ಕ ಪಾರ್ಥನನೆ ಪಾರ್ಥನೆನಲ್ ದೊರೆ ಗಂಡರೆಂಬರೇ॥೩೨॥
--------------
ರನ್ನ
ಕರವಾಳಂ ಮಸೆವಂದದೆ ಮರವಾಳಂ ಮಸೆಯೆ ಕೂರಿತಕ್ಕುಮೆ ಕಲಿಯಂ ಪೊರೆದೊಡೆ ಕೂರ್ಪಂ ತೋರ್ಪಂ ತಿರೆ ತೋರ್ಕುಮೆ ಪಂದೆ ಪತಿಗೆ ಸಂಗರದೆಡೆಯೊಳ್॥೨೩॥
--------------
ರನ್ನ
-->