ಒಟ್ಟು 13 ಕಡೆಗಳಲ್ಲಿ , 1 ಕವಿಗಳು , 11 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನುಂ ದುಶ್ಯಾಸನನುಂ ನೀನುಂ ಮೂವರೆ ದಲಾತನುಂ ಕಳಿದ ಬಳಿ ಕ್ಕಾನುಂ ನೀನೆ ದಲೀಗಳ್ ನೀನುಮಗಲ್ದೆತ್ತವೋದೆಯಂಗಾಧಿಪತಿ॥೧೧॥
--------------
ರನ್ನ
ಇದರೊಳ್ ಮೂರ್ಧಾಭಿಷಿಕ್ತರ್ ಮಣಿಮಕುಟಧರರ್ ಕೃಷ್ಣೆ ಬಾಹಾಬಳಾಗ್ರ್ಯರ್ ಕದನಪ್ರೋಚ್ಚಂಡದಂಡಕ್ರಮವಿಜಿತರಿಪುಕ್ಷತ್ರಿಯರ್ ವೀರಲಕ್ಷ್ಮೀ ಸದನರ್ಸೋಮಾಮೃತಾಸ್ವಾದನಶುಚಿವದನರ್ ಮುನ್ಮಳ್ಕಾಡಿದರ್ ನೋ ಡಿದು ನಿನ್ನೀ ಕೇಶಪಾಶಂ ಕುರುಕುಲಪತಿಗಾಯ್ತಲ್ತೆ ಕೀನಾಶಪಾಶಂ॥೪೯॥
--------------
ರನ್ನ
ಇರಲಿಂತೀಮಾದ್ರಿಪುತ್ರರ್ ಬಡವುಗಳವರೇಗೆಯ್ವರಿಂ ಧರ್ಮಪುತ್ರಂ ಬೆರಸೀಗಳ್ ಬರ್ಕೆ ಭೀಮಂ ಹರಿಸುತನೊಡನೀ ಮೂವರುಂ ಬರ್ಕೆ ಮೇಣ ಯ್ವರುಮಿಂಬರ್ಕೀ ಕೃತಾಂತಾತ್ಮಜಪವನಜಗಾಂಡೀವಧನ್ವರ್ಕಳೀಮೂ ವರೊಳೊರ್ವಂ ಕೃಷ್ಣ ಬರ್ಕಿಂ ಪೊಣರಲನಿಬರುಂ ಬರ್ಕೆ ಮೇಣ್ ಬನ್ನಮೀವೆಂ॥೪೨॥
--------------
ರನ್ನ
ಈ ದೊರೆಯರಮಗನುಂ ಮೃಷ ವಾದಂ ನೋಡೆಂದು ಧರ್ಮನಂ ಮೂದಲಿಸಲ್ ಪೋದಂ ಪುತ್ರನನಲಸಲ್ ಪೋದನೆ ಯಮಪುರಕೆ ಮುಕ್ಥಬಾಣಂ ದ್ರೋಣಂ॥೨೫॥
--------------
ರನ್ನ
ಕರಿಯಂ ನುಂಗಿ ಕಳಿಂಗನಂ ನೊಣೆದ ದರ್ಪಕ್ಕೊಂದುಗೊಳ್ ಮತ್ಸಹೋ ದರರಂ ಕೋಪದೆ ತಿಂದುದರ್ಕೆರಡುಗೊಳ್ ದುಶ್ಯಾಸನೋರುಸ್ಸ್ಥಳ ಕ್ಷರದಸ್ರಾಂಬುವನಾರ್ದು ಪೀರ್ದ ಮುಳಿಸಿಂಗಂ ಮೂರುಗೊಳ್ಳೆಂದು ಮ ಚ್ಚರದಿಂದೋವದೆ ಪೊಯ್ದನೆತ್ತಿಗದೆಯಂ ದುರ್ಯೋಧನಂ ಭೀಮನಂ॥೧೮॥
--------------
ರನ್ನ
ತೆರಪಂ ನಿಟ್ಟಿಸಿ ಕುರುಪತಿ ಬರಸಿಡಿಲೆರಗುವವೊಲೆರಗಿಪೊಯ್ಯಲೊಡಂ ಮೆ ಯ್ಯರಿದು ಪವನಜನು ಮೇನೆಂ ದರಿಯದೆ ಮತಿವಿಕಳನಾಗಿ ಮೂರ್ಚ್ಛೆಗೆ ಸಂದಂ॥೨೬॥
--------------
ರನ್ನ
ನೆಗಪಿ ವರೂಥಮಂ ವಸುಧೆ ನುಂಗಿದುದುಂ ಸಮಪಾದ ಶೋಭೆಯುಂ ಬಗೆಗೊಳೆ ತನ್ನ ಮುಂ ತೆಗೆದ ದಕ್ಷಿಣ ಮುಷ್ಟಿಯೆ ಕರ್ಣಮೂಲದೊಳ್ ಸೊಗಯಿಸೆ ಪಾಳಿಯಂ ನೆರಪದಾಳ್ದನ ಕಜ್ಜಮನೊಕ್ಕು ಸತ್ತರಂ ನಗುವವೊಲಿರ್ದನಂಗಪತಿ ನೆಮ್ಮಿ ನಿಜೋನ್ನತಕೇತುದಂಡಮಂ॥೧೦॥
--------------
ರನ್ನ
ಪುರುಷರ್ ಮೂವರೊಳೊರ್ವನೆಂಬರಸುರಪ್ರಧ್ವಂಸಿಯೆಂಬರ್ ಜಗ ದ್ಗುರುವೆಂಬರ್ ಪೆರರ್ಗೇಕೆ ತೇರನೆಸಪಂ ಧರ್ಮಾನುಜಂಗೇಕೆ ಕಿಂ ಕರನಾದಂ ಕರವೇರಿಯಾದನದರಿಂ ಸೂತಂ ಭಟಂ ಪೇಳಿ ಯೆಂ ಬರಮಾತೊಪ್ಪುಗುಮಾದಿ ದೇವನೆನಿಸಲ್ ಕೃಷ್ಣಂಗದೆಂತೊಪ್ಪುಗುಂ॥೪೩॥
--------------
ರನ್ನ
ಭವದಹಿತನಿಲ್ಲಿದಂ ಕೌ ರವಾರಿ ನೋಡೆಂದು ಮೂಡಿ‌ಮುಳ್ಕಾಡಿಯೆ ತೋ ರ್ಪವೋಲಲ್ಲಿ ಮೂಡಿ ಮುಳ್ಕಾ ಡುವ ವಿಹಗಾವಳಿಗಳೇಂ ಮನಂಗೊಳಿಸಿದುವೋ॥೪೪॥
--------------
ರನ್ನ
ವನರುಹವಿಷ್ಟರಂ ರುಚಿರಂ ರೇಚಕ ಪೂರಕ ಕುಂಭಕಕ್ರಿಯಾ ಮನಮಿರೆ ನೆತ್ತಿಯೊಳ್ ದರನಿಮೀಲಿತ ದೃಷ್ಷಿ ನಿವಿಷ್ಟ ಮಾಗೆ ಮೂ ಗಿನತುದಿಯೊಳ್ ನೀರುದ್ಧ ಮಂತ್ರ ಪದಾಕ್ಷರಂಗಳಂ ಜಿನುಗುತಲಿರ್ದನಾ ಪರಮಯೋಗಿಯವೊಲ್ ಫಣಿರಾಜಕೇತನಂ॥೧೫॥
--------------
ರನ್ನ
ಹರಿಸಂಧಾನಕ್ಕೆ ವಂದಂದವಗಡಿಸಿದಹಂಕಾರಮೇನಾಯ್ತೊ ಕೃಷ್ಣಾಂ ಬರಕೇಶಾಕೃಷ್ಟಿಯಂ ಮಾಡಿಸಿದ ಮದಮದೇನಾಯ್ತೊ ಕೌಂತೇಯರಂ ಮ ಚ್ಚರದಿಂ ಕಾಂತಾರದೊಳ್ ತಿರ್ರನೆ ತಿರಿಪಿದ ಸೊರ್ಕೀಗಳೇನಾದುದೆಂದಾ ಕುರುವಂಶಾಧೀಶನಂ ಮೂದಲಿಸಿದನದಟಂ ಭೀಮನುದ್ದಾಮಭೀಮಂ॥೧೪॥
--------------
ರನ್ನ
-->