ಒಟ್ಟು 16 ಕಡೆಗಳಲ್ಲಿ , 1 ಕವಿಗಳು , 15 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಂಧನೃಪಸುತನೆಯೋ ಜಾತ್ಯಂಧನೆಯೋ ಮೆಟ್ಟದಗಲ್ದು ಪೋಗೆನುತುಂ ಕೋಪಾಂಧರ್ ಜಡಿದರ್ ಪತಿಯ ಕಬಂಧಮನೆಡಗಲಿಸಿ ಪೋಪ ದುರ್ಯೋಧನನಂ॥೧೬॥
ಅನುಜೇಯನಿತ್ತು ನರಂಗಾತನ ತನಯಂಗಿತ್ತು ತನ್ನ ಮಗಳಂ ತಾನಾತನ ರದಮನೆಸಗಿ ಧರ್ಮಜನನುಜನ ನೆವದಿಂದಮರಸುಗೆಯ್ವಂ ಕೃಷ್ಣಂ॥೪೨॥
ಎನಗಿದಯುಕ್ತಮೆಂದಿರದೆ ಪೆರ್ಬುಸಿಯೊಳ್ ಪುದಿದಿರ್ದ ಧರ್ಮನಂದನನನೆ ಧರ್ಮನಂದನನೆನಲ್ ದೊರೆ ದಿಗ್ಗಜಮೊತ್ತೆ ಬಿರ್ದು ಬಿರ್ದಿನಿಸಗಿದಿರ್ದ ಭೀಮನನೆ ಭೀಮನೆನಲ್ ದೊರೆ ಪೇಡಿಯಾಗಿ ಮತ್ಸ್ಯನ ಮನೆವೊಕ್ಕ ಪಾರ್ಥನನೆ ಪಾರ್ಥನೆನಲ್ ದೊರೆ ಗಂಡರೆಂಬರೇ॥೩೨॥
ಎನಗೆ ಮನಮಿಂದು ಶೂನ್ಯಂಮನೆ ಶೂನ್ಯಂ ಬೀಡು ಶೂನ್ಯಮಾದುದು ಸಕಲಾವನಿ ಶೂನ್ಯಮಾಯ್ತು ದುಶ್ಯಾಸನನಿಲ್ಲದೆ ಕರ್ಣನಿಲ್ಲದಾನೆಂತಿರ್ಪೆಂ॥೬೯॥
ಒಡವುಟ್ಟಿದನೆಂದರಿದೊಡೆಕುಡುಗುಂ ರಾಜ್ಯಮನೆ ಧರ್ಮತನಯಂ ನಿನಗಾಂಕುಡಲಾರ್ತೆನಿಲ್ಲ ರಾಜ್ಯಕ್ಕೊಡೆಯನನರಿಯುತ್ತುಮಿರ್ದೆನಂಗಾಧಿಪತಿ॥೧೯॥
ಕುರುಪತಿ ನಿನ್ನ ಪೊಕ್ಕತೊರೆಗಳ್ ಮೊದಲಾಗಿಯೆ ಬತ್ತುತಿರ್ಪುವೀದೊರೆಯ ದುರಾತ್ಮನಂ ಖಳನನಾನೊಳಕೊಂಡೊಡೆ ಭೀಮನೀ ಸರೋವರಮುಮನೆಮ್ಮುಮಂ ಕದಡುಗುಂ ಪುಗದಿರ್ ತೊಲಗೆಂದು ಬಗ್ಗಿಪಂತಿರೆ ನೆಗೆದತ್ತನೇಕಬಕಕೋಕಮರಾಳವಿಹಂಗಮಸ್ವನಂ॥೧೨॥
ಗುಣಮನೆ ತೋರ್ಪಂ ದೋಷದಗುಣಂಗಳನೆ ನೆಗಳ್ದು ತೋರ್ಪ ದುರ್ಜನನುಮದೇಂಗುಣಗಣನೆಗೆ ತೋರ್ಪಂ ಕೃತಿಗುಣದೋಷ ಪರೀಕ್ಷೆಗಾರನಾರ್ ಬಾರಿಪರೋ
ಗುರುವಿನ ನೆತ್ತರಂ ಕುಡಿವೆನಪ್ಪೊಡೆ ದ್ವಿಜವಂಶಜಂ ನಿಜಾವರಜನ ನೆತ್ತರಂ ಕುಡಿವೆನಪ್ಪೊಡೆ ಭೀಮನೆ ಪೀರ್ದನೆಯ್ದೆ ಭೀಷ್ಮರ ಬಿಸುನೆತ್ತರಂ ಕುಡಿವೊಡಿನ್ನುಮೊಳಂ ಕುರುರಾಜ ನಿನ್ನ ನೆತ್ತರ ಸವಿನೋಳ್ಪೊಡಾಂ ಬಯಸಿ ಬಂದಪೆನೆಂದದೊಂದು ಪುಲ್ಮರುಳ್॥೪೩॥
ತುರುಗೋಳೊಳ್ ಪೆಣ್ಬುಯ್ಯಲೊಳರಿವೆಸದೊಳ್ ನಂಟನೆಡರೊಳೂರಳಿವಿನೊಳಂತರಿಸಂದು ಗಂಡುತನಮನೆನೆರಪದವಂ ಗಂಡನಲ್ಲನೆಂತುಂ ಷಂಡಂ॥೨೪॥
ನುಡಿಯದೆ ಪೋಗಲೀಯೆನೆಲೆ ಪೋದೊಡೆ ಧೂರ್ಜಟಿಯಾಣೆ ಮೀರಿ ಪೋದೊಡೆ ಕಲಿಭೀಮನಾಣೆ ಧೂರ್ಜಟಿಯಾಣೆಗೆ ನಿಂದು ಭೀಮನೆಂದೊಡೆ ಮುಳಿದಟ್ಟಿ ಕುಟ್ಟಲರಸಂ ಗದೆಗೊಂಡೊಡೆ ಭೂತಕೋಟಿಯುಂಬಡಿಗೊಳೆ ಸಂಜಯಂ ನಯದೆ ಬಗ್ಗಿಸಿದಂ ಫಣಿರಾಜಕೇತುವಂ॥೪೬॥
ನೆಗಳ್ದೇಕಾದಶರುದ್ರನಿದಿಪುರುಷಂ ದೇವಂ ಲಲಾಟೇಕ್ಷಣಂನಗರಾಜಪ್ರಿಯನಂದನಾ ಪ್ರಿಯತಮಂ ದ್ರೋಣಂಗೆ ಕಾರ್ಯಾರ್ಥದಿಂಮಗನಾದಂ ಸ್ಮರಘಸ್ಮರಂ ದಯೆಯಿನಶ್ವತ್ಥಾಮನೆಂದೆಂದೊಡಾತ್ಮಗತಂ ಸತ್ತ್ವದಿನೇಂ ಪರೀಕ್ಷಿಪನೊ ಪಿಂಗಾಕ್ಷಂ ವಿರೂಪಾಕ್ಷನಂ॥೨೫॥
ಪಗೆ ಚಿತ್ರಿಂಗದನುಯ್ಯಲ್ಗಗನದೊಳುರೆ ತನ್ನ ತಂದ ಬಾಂಧವಕೃತಮಂಬಗೆಯದಹಿತಮನೆ ಬಗೆದಂಪುಗದಿರ್ಕುಮೆ ಪೋಗಿ ಕೌರವಂ ರೌರವಮಂ॥೨೬॥
ಪುಟ್ಟಿದ ನೂರ್ವರುಮೆನ್ನೊಡವುಟ್ಟಿದ ನೂರ್ವರುಮಿದಿರ್ಚಿ ಸತ್ತೊಡೆ ಕೋಪಂಪುಟ್ಟಿ ಪೊದಳ್ದುದು ಸತ್ತರ್ಪುಟ್ಟರೆ ಪಾಂಡವರೊಳಿರಿದು ಛಲಮನೆ ಮೆರೆವೆಂ॥೫೪॥
ಪೆಂಡಿರ್ ಪಳಯಿಸುವಂದದೆಗಂಡರ್ ಪಳಯಿಸಿದೊಡಾಯಮಂ ಛಲಮಂ ಕಯ್ಕೊಂಡೆಸೆಪರಾರೊ ಕುರುಕುಲಮಂಡನ ನೀನೆತ್ತಿಕೊಂಡ ಛಲಮನೆ ಮೆರೆಯಾ॥೩೩॥
ಬಿಡದಾರಾಧಿಸೆ ಮುನ್ನಮೆಕುಡಲಾರದೆ ಬಳಿಕೆ ಗಂಟಲಂ ಮೆಟ್ಟಿದೊಡಿಟ್ಟೆಡೆಯೊಳ್ ಕೊಟ್ಟಂ ಗೆಲ್ಲಂಗುಡುವಂತೆ ನರಂಗೆ ಪಾಶುಪತಮನೆ ರುದ್ರಂ॥೩೯॥