ಒಟ್ಟು 7 ಕಡೆಗಳಲ್ಲಿ , 1 ಕವಿಗಳು , 7 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧಿಕಾರಿಗಳೆನೆ ಸೈರಿಸೆ ವಧಿಕಾಕಾರಿಗಳಾಗಿ ಬಾಳ್ಗೆ ಬಡುವುಗಳವರ್ಗಾ ಯುಧಭಾರಮೇಕೆ ಬಗೆಯ ಲ್ಕೆ ಧರ್ಮದಿಂ, ಕ್ಷತ್ರಧರ್ಮಮವರ್ಗೆ ವಿರುದ್ಧಂ॥೩೫॥
--------------
ರನ್ನ
ಒಳಪೊಕ್ಕು ನೋಡೆ ಭಾರತ ದೊಳಗಣ ಕಥೆಯೆಲ್ಲಮೀ ಗದಾಯುದ್ಧದೊಳಂ ತೊಳಕೊಂಡತ್ತೆನೆ ಸಿಂಹಾ ವಳೋಕನಕ್ರಮದಿನರಿಪಿದಂ ಕವಿರನ್ನಂ
--------------
ರನ್ನ
ಓಜಂ ಗಡ ಚಿಃ ಭಾರ ದ್ವಾಜಂ ಗಡ ಬಿಲ್ಲ ಬಲ್ಮೆಯುಂ ಕುಲಮುಂ ನಿ ರ್ವ್ಯಾಜಂ ಮಸುಳ್ದುವು ಪಾಂಡುತ ನೂಜರ ಪಕ್ಕದೊಳೆ ಪಾಳಿಗಿಡೆ ನೆಗ಼ಳ್ದುದರಿಂ॥೧೮॥
--------------
ರನ್ನ
ಗುರುದೀಕ್ಷಾವಿಧಿಗಳ್ಗೆ ಮಂತ್ರಿ ಹಿತಕಾರ್ಯಾಳೋಚನಕ್ಕಾಳ್ದನು ರ್ವರೆಯ ಕಾವ ಗುಣಕ್ಕೆ ನರ್ಮಸಚಿವಂ ಕ್ರೀರಸಕ್ಕಾನೆಯಾಳ್ ಗುರುಭಾರಕ್ಕಿರಿವಾಳ್ ರಣಕ್ಕೆ ತುಳಿಲಾಳ್ ಕಟ್ಟಾಯದೊಳ್ ಮೇಳದಾಳ್ ಪರಿಹಾಸಕ್ಕೆನಿಸಿರ್ದನೆಂತು ಮರೆವಂ ದುರ್ಯೋಧನಂ ಕರ್ಣನಂ॥೩೫॥
--------------
ರನ್ನ
ಧಾರಿಣಿಯೊಳ್ ನಿಜಸಂಯುಗ ಭಾರಮನಾಂತಿರ್ದ ವೀರಪುಂಗವರಿರೆ ತ ದ್ಭಾಲಮನಾಂತಭಿಮನ್ಯು ಕು ಮಾರಂ ಪುಗೆ ವೀರರಮಣನೆನಿಸಿದನಲ್ತೆ॥೫೮॥
--------------
ರನ್ನ
ನೆಗಳ್ದಾಭಾರತಮಲ್ಲ ಶಕ್ರಸುತ ಬಾಣಾಘಾತದಿಂ ಭೀಮಭೀ ಮಗದಾದಂಡವಿಘಾತದಿಂ ಕುರುನೃಪಾನೀಕಂ ಪಡಲ್ವಟ್ಟು ಜೀ ರಿಗೆಯೋಕ್ಕಲ್ಗೆಣೆಯಾಗಿ ಬಿಳ್ದಭಟರಿಂ ಬಿಳ್ದಶ್ವದಿಂ ಬಿಳ್ದದಂ ತಿಗಳಿಂದಂ ಜವನುಂಡು ಕಾರಿದವೊಲಾಯ್ತೆತ್ತಂ ಕುರುಕ್ಷೇತ್ರದೊಳ್॥೨॥
--------------
ರನ್ನ
ನೆಗಳ್ದುದು ರಾಮಾಯಣಮುಂ ನೆಗಳ್ದುದು ಭಾರತಮುಮಾಮಹಾ ಕವಿಗಳಿನಾ ನೆಗಳ್ದರ್ ವ್ಯಾಸರ್ ವಾಲ್ಮೀ ಕಿಗಳೆನೆ ನೆಗಳ್ದುಭಯ ಕವಿಗಳೆಮಗಭಿವಂದ್ಯರ್
--------------
ರನ್ನ
-->