ಒಟ್ಟು 8 ಕಡೆಗಳಲ್ಲಿ , 1 ಕವಿಗಳು , 6 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರೆಮುಗಿದಿರ್ದ ಕಣ್ಗಳುಮಲರ್ದ ಮೊಗಂ ಕಡಿವೋದ ಕೆಯ್ಯುಮಾ ಸುರತರಮಾಗೆ ಕರ್ಚಿದವುಡುಂ ಬೆರಸನ್ಯಶರಪ್ರಹಾರ ಜ ರ್ಜರಿತಶರೀರನಾಗಿ ನವಲೋಹಿತವಾರ್ಧಿಯೊಳಳ್ದು ಬಿಳ್ದನಂ ಕುರುಪತಿ ನೋಡಿ ಕಂಡನಭಿಮನ್ಯುಕುಮಾರನನಾಜಿವೀರನಂ ॥೫೪॥
--------------
ರನ್ನ
ಇರಿಯೆಂ ಬಿಳ್ದನನೆಂಬೀ ಬಿರುಬಿಂದಂ ಬೀಸೆ ಗದೆಯ ಗಾಳಿಯ ಕೋಳೆ ಳ್ಚರಿಸಿದುದು ಭೀಮನಂ ಮೆ ಯ್ಮರೆದವನಂ ತಂದೆ ಸುತರ್ಗೆ ಕೂರದರೊಳರೇ॥೩೨॥
--------------
ರನ್ನ
ಗಗನಂ ಬಿಳ್ದುದೊ ಮೇಣ್ ನೆಲಕ್ಕೆ ನೆಲನೇಂಪತ್ತಿತ್ತೊ ಮೇಣಿಲ್ಲಿ ಪ ನ್ನಗವೃಂದಾರಕರೆಂದುಮಿರ್ಪ ಬಿಲನೋ ಮೇಣಿಲ್ಲಿ ದಿಙ್ನಾಗರಾ ಜಗೆ ಮೆಯ್ಗರ್ಚಿಕೊಳಲ್ಕಜ ಸಮೆದ ತೋಯೋದ್ದೇಶಮೋ ಸಂದೆಯಂ ಬಗೆಗಾದತ್ತೆನಿಸಿರ್ದುದೇಂ ಪಿರಿದೊ ವೈಶಂಪಾಯನಾಬ್ಜಾಕರಂ॥೧೧॥
--------------
ರನ್ನ
ನೆಗಳ್ದಾಭಾರತಮಲ್ಲ ಶಕ್ರಸುತ ಬಾಣಾಘಾತದಿಂ ಭೀಮಭೀ ಮಗದಾದಂಡವಿಘಾತದಿಂ ಕುರುನೃಪಾನೀಕಂ ಪಡಲ್ವಟ್ಟು ಜೀ ರಿಗೆಯೋಕ್ಕಲ್ಗೆಣೆಯಾಗಿ ಬಿಳ್ದಭಟರಿಂ ಬಿಳ್ದಶ್ವದಿಂ ಬಿಳ್ದದಂ ತಿಗಳಿಂದಂ ಜವನುಂಡು ಕಾರಿದವೊಲಾಯ್ತೆತ್ತಂ ಕುರುಕ್ಷೇತ್ರದೊಳ್॥೨॥
--------------
ರನ್ನ
ಪೆಣದಿನಿಗಳ ತಂಡಂ ಬ ಲ್ವೆಣಗಳನರಸುತ್ತುಮಲ್ಲಿ ಬರೆವರೆ ಸಾರ ಲ್ಕಣಮೀಯದೆ ತಮ್ಮಾಳ್ದನ ಪೆಣನಂ ಕಾದಿರ್ದರಲ್ಲಿ ಬಿಳ್ದ ಭಟರ್ಕಳ್॥೧೫॥
--------------
ರನ್ನ
ಪೆಣದಿನಿಗಳ ತಂಡಂ ಬ ಲ್ವೆಣಗಳನರಸುತ್ತುಮಲ್ಲಿ ಬರೆವರೆ ಸಾರ ಲ್ಕಣಮೀಯದೆ ತಮ್ಮಾಳ್ದನ ಪೆಣನಂ ಕಾದಿರ್ದರಲ್ಲಿ ಬಿಳ್ದ ಭಟರ್ಕಳ್॥೧೫॥
--------------
ರನ್ನ
-->