ಒಟ್ಟು 6 ಕಡೆಗಳಲ್ಲಿ , 1 ಕವಿಗಳು , 6 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಜತುಗೇಹಾನಲಬೀಜಮುಗ್ರವಿಷಸಂಜತಾಂಕುರಂ ಕ್ರೀಡನೋದ್ದತಿಕೃದ್ದ್ಯೂತವಿನೋದಪಲ್ಲವಚಯಂ ಪಾಂಚಾಲರಾಜಾತ್ಮಜಾಯತಕೇಶಗ್ರಹಪುಷ್ಪಮಾಗೆ ಬೆಳೆದಾ ವೈರದ್ರುಮಂ ಕೌರವಕ್ಷಿತಿಪಾಲೋರು ಕಿರೀಟಭಂಗ ಫಲಮಂ ಪೇಳ್ ಮಾಡದೇಂ ಪೋಕುಮೇ॥೫೭॥
ನೀನಿಲ್ಲದರಸುಗೆಯ್ವೆನೆನೀನಿಲ್ಲದೆ ಬಾಳ್ವೆನೆಂದು ಬಗೆದಪ್ಪೆನೆ ಪೇಳ್ನೀನಿಲ್ಲದಹಿತರೊಳ್ ಸಂಧಾನಂ ಮಾಡುವೆನೆ ಕೂಡೆನಂಗಾಧಿಪತಿ॥೧೨॥
ಪರಶುಧರಂ ಚಕ್ರಧರಂಸುರಪತಿ ಭೂಕಾಂತೆಯೆಂದೀ ಪೇಳ್ದಯ್ವರೆ ಕೂಡಿ ನಿನ್ನ ಕೊಂದರ್ನರನೊರ್ವನೆ ಕೊಂದನಲ್ಲನಂಗಾಧಿಪತೀ॥೨೬॥
ಪಳಿಯಂ ಕೇಳ್ದೆನೊ ಮೇಣ್ನಡೆವಳಿಯಂ ತಪ್ಪಿದೆನೊ ಕಾಣೆನಣ್ಮಿಂದಂ ಕೂರ್ತಳಿದಿವರಂ ಪಗದೆನೊ ಪಚ್ಛಳಿದೆನೊ ಪೇಳ್ ಕೂಡಿ ನಿನ್ನೊಳಂಗಾಧಿಪತಿ॥೧೪॥
ರತ್ನಪರೀಕ್ಷಕನಾಂ ಕೃತಿರತ್ನಪರೀಕ್ಷಕನೆನೆಂದು ಫಣಿಪತಿಯ ಫಣಾರತ್ನಮುಮಂ ರನ್ನನ ಕೃತಿರತ್ನಮುಮಂ ಪೇಳ್ ಪರೀಕ್ಷಿಪಂಗೆಂಟೆರ್ದೆಯೇ
ಸ್ಥಿರಸತ್ಯವ್ರತಿಯೆಂದು ಧರ್ಮರುಚಿಯೆಂದಾ ಧರ್ಮಪುತ್ರಂ ದಯಾಪರನೆಂದೆಲ್ಲರ ಪೇಳ್ದ ಮಾತು ಪುಸಿಯಾಯ್ತೀ ಕಾರ್ಮುಕಾಚಾರ್ಯನಂಗುರುವಂ ಬ್ರಾಹ್ಮಣನಂ ತೊದಳ್ನುಡಿದು ಕೊಂದದಾ ಮೃಷಾಪಾತಕಂಪರಮೆಂಬೀ ನುಡಿಯಿಂ ಪೃಥಾಪ್ರಿಯಸುತಂ ಪಾಪಕ್ಕೆ ಪಕ್ಕಾಗನೇ॥೨೩॥