ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಯನದೊಳಮೆರ್ದೆಯೊಳಂ ನಿ ನ್ನಯ ರೂಪಿರ್ದಪುದು ನಿನ್ನಮಾತಿರ್ದಪುದೆ ನ್ನಯ ಕಿವಿಯೊಳಗಿನನಂದನ ವಿಯೋಗಮೆಂತಾದುದರಿಯೆನಂಗಾಧಿಪತೀ॥೨೪॥
--------------
ರನ್ನ
ನಿಜಮಕುಟಸ್ಫುರನ್ಮಣಿಗಣಚ್ಛವಿಯಿಂ ಸುರಚಾಪಲೀಲೆ ಪಂ ಕಜವನದೊಳ್ ಮನಂಗೊಳಿಸೆ ತನ್ನಯ ಮೇಗೊಗೆದಿರ್ದ ನೀಲನೀ ರಜವನದಿಂ ಕರಂಗಿ ಕಮಲಾಕರದಿಂ ಪೊರಮಟ್ಟನಾಗಳಾ ಭುಜಯುಗತೋರಣಾಯಿತಗದಾಪರಿಘಂ ಫಣಿರಾಜಕೇತನಂ॥೨೭॥
--------------
ರನ್ನ
ನಿನ್ನಂ ಕೊಂದ ಕಿರೀಟಿಯು ಮೆನ್ನನುಜನನಿಕ್ಕಿಕೊಂದ ಭೀಮನುಮೊಳನಾ ನಿನ್ನುಮೊಳೆಂ ಗಡಿದಕ್ಕುಮೆ ನಿನ್ನಯ ಕೂರ್ಮೆಗಮದೆನ್ನ ಸೌಧರ್ಮಿಕೆಗಂ॥೨೫॥
--------------
ರನ್ನ
ನಿನ್ನಂ ಕೊಂದಂ ಗಡಮೊಳ ನಿನ್ನುಂ ಕೊಂದವನನಿಕ್ಟಿ ಕೊಲ್ಲದೆ ಮಾಣ್ಬಾ ನಿನ್ನುಮೊಳೆಂ ಗಡಿದಕ್ಕುಮೆ ನಿನ್ನಯ ಕೂರ್ಮೆಗಮದೆನ್ನ ಸೌಧರ್ಮಿಕೆಗಂ॥೬॥
--------------
ರನ್ನ
-->