ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 5 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅನೃತಂ ಲೋಭಂ ಭಯಮೆಂಬಿನಿತುಂ ನೀನಿರ್ದ ನಾಡೊಳಿರ್ಕುಮೆ ರವಿನಂದನ ನನ್ನಿ ಚಾಗಮಣ್ಮೆಂಬಿನಿತರ್ಕಂ ನೀನೆ ಮೊತ್ಮಮೊದಲಿಗನಾದಯ್॥೧೭॥
ಅರಿಯೆನಿದಂ ನಿನ್ನಿಂದಿನತೆರನಂ ನೀನೆನಗದೇಕೆ ಮುಳಿದಿರ್ಪೆಯೊ ಮೇಣ್ಮರುವಾತುಗುಡದೆ ರವಿಸುತಮರಸುಂದಿರ್ದಪೆಯೊ ಮೇಣ್ಬಳಲ್ದಿರ್ದಪೆಯೋ॥೧೫॥
ಆನುಂ ದುಶ್ಯಾಸನನುಂನೀನುಂ ಮೂವರೆ ದಲಾತನುಂ ಕಳಿದ ಬಳಿಕ್ಕಾನುಂ ನೀನೆ ದಲೀಗಳ್ನೀನುಮಗಲ್ದೆತ್ತವೋದೆಯಂಗಾಧಿಪತಿ॥೧೧॥
ಪೆಂಡಿರ್ ಪಳಯಿಸುವಂದದೆಗಂಡರ್ ಪಳಯಿಸಿದೊಡಾಯಮಂ ಛಲಮಂ ಕಯ್ಕೊಂಡೆಸೆಪರಾರೊ ಕುರುಕುಲಮಂಡನ ನೀನೆತ್ತಿಕೊಂಡ ಛಲಮನೆ ಮೆರೆಯಾ॥೩೩॥
ಸೂನುಗಳಳಿವಂ ಪ್ರಿಯಮಿತ್ರಾನುಜರರಿವಂ ವಿಧಾತ್ರ ನೀಂ ಕಾಣಿಸಿ ಮುಂದೇನಂ ಕಾಣಿಸಲಿರ್ದಪೆನೀನೆನ್ನಂ ಪಾಪಕರ್ಮನಂ ನಿರ್ಗುಣನಂ॥೨೯॥