ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 5 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಾನಿದೆಂ ಮೇಣಿನ ನಂದನ ಕೇಳ್ ಪಾಂಡುತನಯರಾದರ್ ನಿನ್ನಂ ಕೊಂದುಂ ದುಶ್ಯಾಸನನಂ ಕೊಂದುಂ ಬರ್ದುಕುವರೆ ಬರ್ದುಕರಂಗಿಧಿಪತೀ॥೩೭॥
--------------
ರನ್ನ
ನಿನ್ನ ಮಗಂ ವೃಷಸೇನಂ ತನ್ನ ಮಗಂ ಸತ್ತನಣ್ಮಿ ಲಕ್ಷಣನುಂ ನೀ ನೆನ್ನ ಸಂತೈಸುವುದಾಂ ನಿನ್ನಂ ಸಂತೈಸೆ ಬಂದೆನಂಗಾಧಿಪತೀ॥೧೩॥
--------------
ರನ್ನ
ನಿನ್ನಂ ಕೊಂದ ಕಿರೀಟಿಯು ಮೆನ್ನನುಜನನಿಕ್ಕಿಕೊಂದ ಭೀಮನುಮೊಳನಾ ನಿನ್ನುಮೊಳೆಂ ಗಡಿದಕ್ಕುಮೆ ನಿನ್ನಯ ಕೂರ್ಮೆಗಮದೆನ್ನ ಸೌಧರ್ಮಿಕೆಗಂ॥೨೫॥
--------------
ರನ್ನ
ನಿನ್ನಂ ಕೊಂದಂ ಗಡಮೊಳ ನಿನ್ನುಂ ಕೊಂದವನನಿಕ್ಟಿ ಕೊಲ್ಲದೆ ಮಾಣ್ಬಾ ನಿನ್ನುಮೊಳೆಂ ಗಡಿದಕ್ಕುಮೆ ನಿನ್ನಯ ಕೂರ್ಮೆಗಮದೆನ್ನ ಸೌಧರ್ಮಿಕೆಗಂ॥೬॥
--------------
ರನ್ನ
ಪಲರಿರ್ದು ಕಾದಿದರ್ ಮೆ ಯ್ಗಲಿಗಳ್ ನಿನ್ನೊಂದೆ ಮೆಯ್ಯೊಳಂ ತವೆ ಕೊಂದೈ ಪಲರಂ ನಿನ್ನಂ ಪೆತ್ತಳ್ ಮೊಲೆವೆತ್ತಳೆ ವೀರಜನನಿವೆಸರಂ ಪೆತ್ತಳ್॥೫೬॥
--------------
ರನ್ನ
-->