ಒಟ್ಟು 8 ಕಡೆಗಳಲ್ಲಿ , 1 ಕವಿಗಳು , 6 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅನುಜಸಮೇತನೊಳಂತಕತನಯನೊಳನುಜವ್ಯಪೇತನೀಗಳ್ ದುರ್ಯೋಧನನಳಿಪಿ ಸಂಧಿಗೆಯ್ದೊಡೆಮುನಿವರ ಮೆಚ್ಚುವರ ನುಡಿಗೆ ಪಕ್ಕಾಗಿರನೇ॥೪೮॥
ಒಡವುಟ್ಟಿದನೆಂದರಿದೊಡೆಕುಡುಗುಂ ರಾಜ್ಯಮನೆ ಧರ್ಮತನಯಂ ನಿನಗಾಂಕುಡಲಾರ್ತೆನಿಲ್ಲ ರಾಜ್ಯಕ್ಕೊಡೆಯನನರಿಯುತ್ತುಮಿರ್ದೆನಂಗಾಧಿಪತಿ॥೧೯॥
ಕರವಾಳಂ ಮಸೆವಂದದೆಮರವಾಳಂ ಮಸೆಯೆ ಕೂರಿತಕ್ಕುಮೆ ಕಲಿಯಂಪೊರೆದೊಡೆ ಕೂರ್ಪಂ ತೋರ್ಪಂತಿರೆ ತೋರ್ಕುಮೆ ಪಂದೆ ಪತಿಗೆ ಸಂಗರದೆಡೆಯೊಳ್॥೨೩॥
ಗೆಲಲಾರ್ಪೊಡಿರಿದು ಗೆಲ್ವುದುಗೆಲಲಾರದೊಡಣ್ಮಿ ಸಾವುದಾಳ್ಗಿನಿತೆ ಗುಣಂಗೆಲಲುಂ ಸಾಯಲುಮಾರದೆತೊಲಗಿದೊಡೆ ನೆಗಳ್ತೆ ತೊಲಗದಿರ್ಕುಮೆ ಮೈಯ್ಯಂ॥೨೧॥
ನುಡಿಯದೆ ಪೋಗಲೀಯೆನೆಲೆ ಪೋದೊಡೆ ಧೂರ್ಜಟಿಯಾಣೆ ಮೀರಿ ಪೋದೊಡೆ ಕಲಿಭೀಮನಾಣೆ ಧೂರ್ಜಟಿಯಾಣೆಗೆ ನಿಂದು ಭೀಮನೆಂದೊಡೆ ಮುಳಿದಟ್ಟಿ ಕುಟ್ಟಲರಸಂ ಗದೆಗೊಂಡೊಡೆ ಭೂತಕೋಟಿಯುಂಬಡಿಗೊಳೆ ಸಂಜಯಂ ನಯದೆ ಬಗ್ಗಿಸಿದಂ ಫಣಿರಾಜಕೇತುವಂ॥೪೬॥
ಯಮವಾಯುತ್ರಿದಶಾಶ್ವಿನನೀತನಯರುಂ ತಾವಾದರೀಯಯ್ವರುಂಹಿಮಕೃದ್ವಂಶಕಳಂಕರಂತವರ್ಗಮಾ ಪಾಂಚಾಲ ಭೂಪಾಲ ಪುತ್ರಿಮನೋವಲ್ಲಭೆಯಾದಳೆಂದೊಡೆ ಗಡಂ ಕೇಳಲ್ಕದೇಂ ಕ್ಷತ್ರಧರ್ಮಮೊ ಭೂಲೋಕಕೆ ಪೇಳಿಮೀ ದೊರೆಯ ಚಾರಿತ್ರಂ ಪೃಥಾಪುತ್ರರಾ॥೩೭॥