ಒಟ್ಟು 13 ಕಡೆಗಳಲ್ಲಿ , 1 ಕವಿಗಳು , 13 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುಜನ ನೆತ್ತರನೀಂಟಿದ ವನನಿಂದಾಪ್ರಾಣಸಹಿತಮೀಂಟದೆ ದುರ್ಯೋ ಧನನೆಂಬ ಪೆಸರ್ಗೆ ಮುಯ್ಯಾಂ ಪೆನೆ ದುಶ್ಯಾಸನನ ಬನ್ನಮಂ ನೀಗುವೆನೇ॥೮॥
--------------
ರನ್ನ
ಆನುಂ ದುಶ್ಯಾಸನನುಂ ನೀನುಂ ಮೂವರೆ ದಲಾತನುಂ ಕಳಿದ ಬಳಿ ಕ್ಕಾನುಂ ನೀನೆ ದಲೀಗಳ್ ನೀನುಮಗಲ್ದೆತ್ತವೋದೆಯಂಗಾಧಿಪತಿ॥೧೧॥
--------------
ರನ್ನ
ಇಂದಾನಿದೆಂ ಮೇಣಿನ ನಂದನ ಕೇಳ್ ಪಾಂಡುತನಯರಾದರ್ ನಿನ್ನಂ ಕೊಂದುಂ ದುಶ್ಯಾಸನನಂ ಕೊಂದುಂ ಬರ್ದುಕುವರೆ ಬರ್ದುಕರಂಗಿಧಿಪತೀ॥೩೭॥
--------------
ರನ್ನ
ಇನಸುತನಿರವಂ ದುಶ್ಯಾ ಸನನಿರವಂ ಕಂಡುಮಿನ್ನುಮೆನ್ನಸುವಿದು ನೆ ಟ್ಟನೆ ಪೋದುದಿಲ್ಲ ಕಲ್ಲೆರ್ದೆ ತನದಿಂದೆನ್ನಂತು ಬರ್ದನಾವನುಮೊಳನೇ॥೨೮॥
--------------
ರನ್ನ
ಎನಗೆ ಮನಮಿಂದು ಶೂನ್ಯಂ ಮನೆ ಶೂನ್ಯಂ ಬೀಡು ಶೂನ್ಯಮಾದುದು ಸಕಲಾ ವನಿ ಶೂನ್ಯಮಾಯ್ತು ದುಶ್ಯಾ ಸನನಿಲ್ಲದೆ ಕರ್ಣನಿಲ್ಲದಾನೆಂತಿರ್ಪೆಂ॥೬೯॥
--------------
ರನ್ನ
ಎನಿತುಂ ಪೊಕ್ಕಿರ್ದಪಯ್ ನೀಂ ಪೊರಮಡು ಕೊಳದಿಂ ದ್ರೌಷದೀದ್ರೋಹದುಶ್ಯಾ ಸನದುಷ್ಟಜ್ಯೇಷ್ಠ ಭೀಷ್ಮಪ್ರಮುಖನಿಖಿಲಬಂಧುಕ್ಷಯೋತ್ಪನ್ನದುಃಖ ಧ್ವನಿವಾರಿಚ್ಛಿನ್ನಧೈರ್ಯದ್ರುಮ ಯಮಸುತ ನಿಷ್ಕರಣ ದ್ವೇಷಿ ಭೀಮ ಧ್ವನಿಯಂ ಕೇಳ್ದಿನ್ನುಮಿರ್ದಯ್ ಕುರುಕುಲವಿಲಯೋತ್ಪಾತನೋತ್ಪಾತಕೇತೂ॥೧೫॥
--------------
ರನ್ನ
ಕರಿಯಂ ನುಂಗಿ ಕಳಿಂಗನಂ ನೊಣೆದ ದರ್ಪಕ್ಕೊಂದುಗೊಳ್ ಮತ್ಸಹೋ ದರರಂ ಕೋಪದೆ ತಿಂದುದರ್ಕೆರಡುಗೊಳ್ ದುಶ್ಯಾಸನೋರುಸ್ಸ್ಥಳ ಕ್ಷರದಸ್ರಾಂಬುವನಾರ್ದು ಪೀರ್ದ ಮುಳಿಸಿಂಗಂ ಮೂರುಗೊಳ್ಳೆಂದು ಮ ಚ್ಚರದಿಂದೋವದೆ ಪೊಯ್ದನೆತ್ತಿಗದೆಯಂ ದುರ್ಯೋಧನಂ ಭೀಮನಂ॥೧೮॥
--------------
ರನ್ನ
ಜನನೀ ಸ್ತನ್ಯಮನುಂಡೆನಾಂ ಬಳಿಕೆ ನೀಂ ಸೋಮಾಮೃತಂ ದಿವ್ಯ ಭೋ ಜನಮೆಂಬಿಂತಿವನುಂಡೆನಾಂ ಬಳಿಕ ನೀಂ ಬಾಲತ್ವದಿಂದೆಲ್ಲಿಯುಂ ವಿನಯೋಲ್ಲಂಘನಮಾದುದಿಲ್ವ ಮರಣಕ್ಕನ್ನಿಂದೆ ನೀಂ ಮುಂಚಿದಯ್ ಮೊನೆಯೊಳ್ ಸೂಳ್ ತಡಮಾಯ್ತಿದೊಂದೆಡೆಯೊಳಂ ಹಾ ವತ್ಸ ದುಶ್ಯಾಸನಾ॥೭॥
--------------
ರನ್ನ
ದಿನಕರ ತನಯನ ದುಶ್ಯಾ ಸನನವಿಯೋಗದೊಳಮಿಂದುವರೆಗಂ ನೋವಿ ಲ್ಲೆನಗಹಿತರೊಡನೆ ಸಂಧಿಗು ಡೆನೆ ನೊಂದೆಂ ಸ್ವಜನಗುರುಜನಾಭಾಯರ್ಥನೆಯಿಂ॥೭॥
--------------
ರನ್ನ
ನಿಜಜೀವಂ ಪರಲೋಕದೊಳ್ ನಿಜಮಹಾಮಾಂಸಂ ಪಿಶಾಚಾಸ್ಯದೊಳ್ ನಿಜರಕ್ತಂ ರಿಪುಕುಕ್ಷಿಯೊಳ್ ನಿಜಶಿರಂ ನಕ್ತಂಚರೀ ಹಸ್ತದೊಳ ನಿಜಕಾಯಂ ಕುರುಭೂಮಿಯೊಳ್ ನೆಲಸೆ ಗಾಂಧಾರೀಜ ದುರ್ಯೋಧನಾ ನುಜ ದುಶ್ಯಾಸನ ಭೀಮ ಭೀಮಗದೆಯಿಂ ಪಂಚತ್ವಮಂ ಪೋರ್ದಿದಯ್॥೫॥
--------------
ರನ್ನ
ಪುಡಿಯೊಳ್ ಪೊರಳ್ಚಿಯುಂ ಮೆ ಯ್ಯಡಗಂ ತಿರಿತರಿದು ಕೊರೆದು ತಿಂದುಂ ಗೊಟ್ಟಂ ಗುಡಿದುಂನೆತ್ತರನೆಂತುಂ ಹಿಡಿಂಬರಿಪು ತಣಿದನಿಲ್ಲ ದುಶ್ಯಾಸನನಂ॥೩॥
--------------
ರನ್ನ
ಪುದುವಾಳಲ್ಕಣಮಾಗದೆಂತುಮವರೊಳ್ ಸಂಧಾನಮಂ ಮಿಡಲಾ ಗದು ನೀಮಿಲ್ಲದೇಯಜ್ಜ ಬಿಲ್ಲಗುರುಗಳ್ ತಾಮಿಲ್ಲದಾ ಕರ್ಣನಿ ಲ್ಲದೆ ದುಶ್ಯಾಸನನಿಲ್ಲದಾರೊಡನೆ ರಾಜ್ಯಂಗೆಯ್ವೆನಾರ್ಗೆನ್ನ ಸಂ ಪದಮಂ ತೋರುವೆನಾರ್ಗೆತೋರಿ ಮೆರೆವೆಂ ನಾನಾ ವಿನೋದಂಗಳಂ॥೫೨॥
--------------
ರನ್ನ
ಸಾಧಿಸುವೆಂ ಫಲ್ಗುಣನಂ ಸಾಧಿಸುವೆಂ ಪವನಸುತನ ಬಸಿರಿಂ ಹಾ ಕ ರ್ಣಾ ದುಶ್ಯಾಸನ ತೆಗೆವೆಂ ಸಾಧಿಸಿದಿಂ ಬಳಿಕೆ ಯಮಜನೊಳ್ ಪುದುವಾಳ್ವೆಂ॥೧೦॥
--------------
ರನ್ನ
-->