ಒಟ್ಟು 69 ಕಡೆಗಳಲ್ಲಿ , 1 ಕವಿಗಳು , 56 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅನಿಮೇಷಾದ್ಯವತಾರಂತನಗಾಗೆ ದಶಾವತಾರಮನಿತರೊಳಿರದರ್ಜುನನ ರಥಮೆಸಗಿ ಪಪನ್ನೊಂದನೆಯದು ಸೂತಾವತಾರಮುಂ ಹರಿಗಾಯ್ತೆ॥೪೪॥
ಅನೃತಂ ಲೋಭಂ ಭಯಮೆಂಬಿನಿತುಂ ನೀನಿರ್ದ ನಾಡೊಳಿರ್ಕುಮೆ ರವಿನಂದನ ನನ್ನಿ ಚಾಗಮಣ್ಮೆಂಬಿನಿತರ್ಕಂ ನೀನೆ ಮೊತ್ಮಮೊದಲಿಗನಾದಯ್॥೧೭॥
ಅರಿಗಳ್ ಪಾಂಡವರೊಳ್ವಿರೋಧಮಂ ಬಿಸುಟು ಸಂಧಿಯಂ ಮಾಡುವುದೆಂಬರಮಾತಂ ಕೇಳಿಸಲೆನ್ನೆರಡುಂ ಕಿವಿಗಳನದೇಕೆ ಬಿದಿ ಮಿಡಿದನೋ॥೮॥
ಅರೆಮುಗಿದಿರ್ದ ಕಣ್ಗಳುಮಲರ್ದ ಮೊಗಂ ಕಡಿವೋದ ಕೆಯ್ಯುಮಾಸುರತರಮಾಗೆ ಕರ್ಚಿದವುಡುಂ ಬೆರಸನ್ಯಶರಪ್ರಹಾರ ಜರ್ಜರಿತಶರೀರನಾಗಿ ನವಲೋಹಿತವಾರ್ಧಿಯೊಳಳ್ದು ಬಿಳ್ದನಂಕುರುಪತಿ ನೋಡಿ ಕಂಡನಭಿಮನ್ಯುಕುಮಾರನನಾಜಿವೀರನಂ ॥೫೪॥
ಇಂದಾನಿದೆಂ ಮೇಣಿನನಂದನ ಕೇಳ್ ಪಾಂಡುತನಯರಾದರ್ ನಿನ್ನಂಕೊಂದುಂ ದುಶ್ಯಾಸನನಂಕೊಂದುಂ ಬರ್ದುಕುವರೆ ಬರ್ದುಕರಂಗಿಧಿಪತೀ॥೩೭॥
ಇಡೆ ತೊಡೆಯನುಡಿದು ನೆಟ್ಟನೆಕೆಡೆಯುತ್ತುಂ ಕರ್ಚಿ ನೆಲನನಾನಿದನೆಂತುಂಬಿಡೆನೆಂಬ ತೆರದೆ ಕುಲಗಿರಿಕೆಡೆವಂದದೆ ಕೌರವೇಂದ್ರನಾಗಳ್ ಕೆಡೆದಂ॥೩೭॥
ಇದರೊಳ್ ಮೂರ್ಧಾಭಿಷಿಕ್ತರ್ ಮಣಿಮಕುಟಧರರ್ ಕೃಷ್ಣೆ ಬಾಹಾಬಳಾಗ್ರ್ಯರ್ಕದನಪ್ರೋಚ್ಚಂಡದಂಡಕ್ರಮವಿಜಿತರಿಪುಕ್ಷತ್ರಿಯರ್ ವೀರಲಕ್ಷ್ಮೀಸದನರ್ಸೋಮಾಮೃತಾಸ್ವಾದನಶುಚಿವದನರ್ ಮುನ್ಮಳ್ಕಾಡಿದರ್ ನೋಡಿದು ನಿನ್ನೀ ಕೇಶಪಾಶಂ ಕುರುಕುಲಪತಿಗಾಯ್ತಲ್ತೆ ಕೀನಾಶಪಾಶಂ॥೪೯॥
ಇನಸುತ ಗಾಂಡಿವಿ ಸಂಮೋಹನಾಸ್ತ್ರದಿಂದೆಚ್ಚು ನಿದ್ರೆಯಂ ಮಾಡಿದನಂದಿನ ಗೋಗ್ರಹಣದೊಳೀಗಳ್ನಿನಗಿಂತೀ ದೀರ್ಘನಿದ್ರೆಯಂ ಮಾಡಿದನೇ॥೨೧॥
ಇನಸುತನಿರವಂ ದುಶ್ಯಾಸನನಿರವಂ ಕಂಡುಮಿನ್ನುಮೆನ್ನಸುವಿದು ನೆಟ್ಟನೆ ಪೋದುದಿಲ್ಲ ಕಲ್ಲೆರ್ದೆತನದಿಂದೆನ್ನಂತು ಬರ್ದನಾವನುಮೊಳನೇ॥೨೮॥
ಇರಿಯೆಂ ಬಿಳ್ದನನೆಂಬೀಬಿರುಬಿಂದಂ ಬೀಸೆ ಗದೆಯ ಗಾಳಿಯ ಕೋಳೆಳ್ಚರಿಸಿದುದು ಭೀಮನಂ ಮೆಯ್ಮರೆದವನಂ ತಂದೆ ಸುತರ್ಗೆ ಕೂರದರೊಳರೇ॥೩೨॥
ಈ ದೊರೆಯರಮಗನುಂ ಮೃಷವಾದಂ ನೋಡೆಂದು ಧರ್ಮನಂ ಮೂದಲಿಸಲ್ಪೋದಂ ಪುತ್ರನನಲಸಲ್ಪೋದನೆ ಯಮಪುರಕೆ ಮುಕ್ಥಬಾಣಂ ದ್ರೋಣಂ॥೨೫॥
ಎನಗಾಜೂದಿನೊಳಗ್ರಜಾನುಜಸಮೇತಂ ಗಂಡುದೊಳ್ತಾಗಿ ಕಾನನದೊಳ್ ವಲ್ಕಲಧಾರಿಯಾಗಿ ಹರನೊಳ್ ದಿವ್ಯಾಸ್ತ್ರಮಂ ಬೇಡೆ ಬೆ,ಳ್ತನದಿಂ ತಾಪಸನಾಗಿ ಪೇಡಿಯೆನೆ ಮತ್ಸ್ಯಾವಾಸದೊಳ್ ವಾಸುದೇವನನಂಟಂ ನಟನಾಗಿ ಬಾರದ ಭವಂ ಬಂದಂ ಪೃಥಾನಂದನಂ॥೨೯॥
ಎನಗಿದಯುಕ್ತಮೆಂದಿರದೆ ಪೆರ್ಬುಸಿಯೊಳ್ ಪುದಿದಿರ್ದ ಧರ್ಮನಂದನನನೆ ಧರ್ಮನಂದನನೆನಲ್ ದೊರೆ ದಿಗ್ಗಜಮೊತ್ತೆ ಬಿರ್ದು ಬಿರ್ದಿನಿಸಗಿದಿರ್ದ ಭೀಮನನೆ ಭೀಮನೆನಲ್ ದೊರೆ ಪೇಡಿಯಾಗಿ ಮತ್ಸ್ಯನ ಮನೆವೊಕ್ಕ ಪಾರ್ಥನನೆ ಪಾರ್ಥನೆನಲ್ ದೊರೆ ಗಂಡರೆಂಬರೇ॥೩೨॥
ಒಡವುಟ್ಟಿದನೆಂದರಿದೊಡೆಕುಡುಗುಂ ರಾಜ್ಯಮನೆ ಧರ್ಮತನಯಂ ನಿನಗಾಂಕುಡಲಾರ್ತೆನಿಲ್ಲ ರಾಜ್ಯಕ್ಕೊಡೆಯನನರಿಯುತ್ತುಮಿರ್ದೆನಂಗಾಧಿಪತಿ॥೧೯॥
ಒಳಗಾದಂ ಪಗೆವಂ ಸರೋವರದೊಳಿರ್ದಿನ್ನೆತ್ತವೋಪಂ ಸರೋಜಳಮಂ ತವೆ ಪೀರ್ದು ಪೀರ್ವೆನಸುಹೃದ್ರಕ್ತಾಂಬುವಂ ತೋರ್ಪೆನೆನ್ನಳವಂ ಮತ್ಪತಿಗೆಂದು ಸಂತಸದೆ ಬಾಹಾಸ್ಭಾಲನಂಗೆಯ್ದು ದಿಗ್ವಳಯಂ ಮಾರ್ದನಿಯಿಟ್ಟವೊಲ್ ಗಜರಿದಂ ಚಾಳುಕ್ಯ ಕಂಠೀರವಂ॥೪೭॥