ಒಟ್ಟು 19 ಕಡೆಗಳಲ್ಲಿ , 1 ಕವಿಗಳು , 16 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಲಾಕ್ಷಾಗೇಹದಾಹಕ್ಕಿದು ವಿಷಮವಿಷಾನ್ನಕ್ಕಿದಾ ನಾಡ ಜೂದಿಂ ಗಿದು ಪಾಂಚಾಲೀಪ್ರಪಂಚಕ್ಕಿದು ಕೃತಕಸಭಾಲೋಕನಭ್ರಾಂತಿಗೆಂದೋ ವದೆ ಪೊಯ್ದಂ ತೋಳ್ಗ಼ಳನಗಲ್ದುರಮಂ ಕೆನ್ನೆಯಂ ನೆತ್ತಿಯಂ ಕೋ ಪದೊಳಯ್ದಂ ದುರ್ನಯಕ್ಕಯ್ದೆಡೆಯನುರು ಗದಾದಂಡದಿಂ ಭೀಮಸೇನಂ॥೧೯॥
--------------
ರನ್ನ
ಎಲ್ಲಿದಳೊ ಭಾನುಮತಿ ತಾ ನೆಲ್ಲಿತ್ತೋಲಗದ ಸೂಳೆಯರ್ಕಳ ತಂಡಂ ಎಲ್ಲಿತ್ತೊ ಗೀತವಾದ್ಯಂ ಸಲ್ಲಲಿತವಧೂಜನಪ್ರವೃತ್ತಂ ನೃತ್ತಂ॥೪೩॥
--------------
ರನ್ನ
ಒಳಗಾದಂ ಪಗೆವಂ ಸರೋವರದೊಳಿರ್ದಿನ್ನೆತ್ತವೋಪಂ ಸರೋ ಜಳಮಂ ತವೆ ಪೀರ್ದು ಪೀರ್ವೆನಸುಹೃದ್ರಕ್ತಾಂಬುವಂ ತೋರ್ಪೆನೆ ನ್ನಳವಂ ಮತ್ಪತಿಗೆಂದು ಸಂತಸದೆ ಬಾಹಾಸ್ಭಾಲನಂಗೆಯ್ದು ದಿ ಗ್ವಳಯಂ ಮಾರ್ದನಿಯಿಟ್ಟವೊಲ್ ಗಜರಿದಂ ಚಾಳುಕ್ಯ ಕಂಠೀರವಂ॥೪೭॥
--------------
ರನ್ನ
ಕರವಾಳಂ ಮಸೆವಂದದೆ ಮರವಾಳಂ ಮಸೆಯೆ ಕೂರಿತಕ್ಕುಮೆ ಕಲಿಯಂ ಪೊರೆದೊಡೆ ಕೂರ್ಪಂ ತೋರ್ಪಂ ತಿರೆ ತೋರ್ಕುಮೆ ಪಂದೆ ಪತಿಗೆ ಸಂಗರದೆಡೆಯೊಳ್॥೨೩॥
--------------
ರನ್ನ
ಕಸವರಮಂ ದ್ವಿಜದಾನಕೆ ಪೂಸಜೌವನಮಂ ಸ್ವದಾರ ಸಂತೋಷಕೆ ನಿ ನ್ನಸುವಂ ಪತಿಕಾರ್ಯಕೆ ವೆ ಚ್ಚಿಸಿದಯ್ ನಿನ್ನನ್ನನಾವನಂಗಾಧಿಪತಿ॥೨೨॥
--------------
ರನ್ನ
ಗಗನಂ ಬಿಳ್ದುದೊ ಮೇಣ್ ನೆಲಕ್ಕೆ ನೆಲನೇಂಪತ್ತಿತ್ತೊ ಮೇಣಿಲ್ಲಿ ಪ ನ್ನಗವೃಂದಾರಕರೆಂದುಮಿರ್ಪ ಬಿಲನೋ ಮೇಣಿಲ್ಲಿ ದಿಙ್ನಾಗರಾ ಜಗೆ ಮೆಯ್ಗರ್ಚಿಕೊಳಲ್ಕಜ ಸಮೆದ ತೋಯೋದ್ದೇಶಮೋ ಸಂದೆಯಂ ಬಗೆಗಾದತ್ತೆನಿಸಿರ್ದುದೇಂ ಪಿರಿದೊ ವೈಶಂಪಾಯನಾಬ್ಜಾಕರಂ॥೧೧॥
--------------
ರನ್ನ
ಗುಣಮನೆ ತೋರ್ಪಂ ದೋಷದ ಗುಣಂಗಳನೆ ನೆಗಳ್ದು ತೋರ್ಪ ದುರ್ಜನನುಮದೇಂ ಗುಣಗಣನೆಗೆ ತೋರ್ಪಂ ಕೃತಿ ಗುಣದೋಷ ಪರೀಕ್ಷೆಗಾರನಾರ್ ಬಾರಿಪರೋ
--------------
ರನ್ನ
ಜಳದೊಳ್ ಮೀನಿರ್ಪವೊಲ್ ನೀಂ ಕೊಳದೊಳೆ ಮುಳುಗಿರ್ದಕಟಾ ಕೋಡಸೇಡಿಂ ಗೊಳಗಾದಯ್ ನಿನ್ನ ದುರ್ಯೋಧನವೆಸರ್ಗಿದು ಲಜ್ಜಾಕರಂ ತೋರಿದಯ್ ನಿ ನ್ನಳವಂ ಚಿಃ ಸತ್ತರೇಂ ಪುಟ್ಟರೆ ಪೊರಮಡು ನೀಂ ಕಯ್ದುಗೊಳ್ ಕೌರವೇಂದ್ರಾ ಚಳವಜ್ರಂ ಬಂದನೀಗಳ್ ಕುರುಕುಲಮಥನೋದ್ಭೀಕರಂ ಭೀಮಸೇನಂ॥೧೩॥
--------------
ರನ್ನ
ತನಗೆ ಹತೋಶ್ವತ್ಥಾಮೋ ಯೆನಲಕ್ಕು‌ಮೆ ಯಮಪುರಕ್ಕೆ ಗುರು ಪೋಪೆಡೆಯೊಳ್ ಘನಕುಂಜರ ಎಂದೆಂಗುಮೇ ಜನರಂಜನೆಗರಿಯಲಾದುದಿಲ್ಲಲಮಗನಂ
--------------
ರನ್ನ
ನಿಜಮಕುಟಸ್ಫುರನ್ಮಣಿಗಣಚ್ಛವಿಯಿಂ ಸುರಚಾಪಲೀಲೆ ಪಂ ಕಜವನದೊಳ್ ಮನಂಗೊಳಿಸೆ ತನ್ನಯ ಮೇಗೊಗೆದಿರ್ದ ನೀಲನೀ ರಜವನದಿಂ ಕರಂಗಿ ಕಮಲಾಕರದಿಂ ಪೊರಮಟ್ಟನಾಗಳಾ ಭುಜಯುಗತೋರಣಾಯಿತಗದಾಪರಿಘಂ ಫಣಿರಾಜಕೇತನಂ॥೨೭॥
--------------
ರನ್ನ
ಪುದುವಾಳಲ್ಕಣಮಾಗದೆಂತುಮವರೊಳ್ ಸಂಧಾನಮಂ ಮಿಡಲಾ ಗದು ನೀಮಿಲ್ಲದೇಯಜ್ಜ ಬಿಲ್ಲಗುರುಗಳ್ ತಾಮಿಲ್ಲದಾ ಕರ್ಣನಿ ಲ್ಲದೆ ದುಶ್ಯಾಸನನಿಲ್ಲದಾರೊಡನೆ ರಾಜ್ಯಂಗೆಯ್ವೆನಾರ್ಗೆನ್ನ ಸಂ ಪದಮಂ ತೋರುವೆನಾರ್ಗೆತೋರಿ ಮೆರೆವೆಂ ನಾನಾ ವಿನೋದಂಗಳಂ॥೫೨॥
--------------
ರನ್ನ
ಭವದಹಿತನಿಲ್ಲಿದಂ ಕೌ ರವಾರಿ ನೋಡೆಂದು ಮೂಡಿ‌ಮುಳ್ಕಾಡಿಯೆ ತೋ ರ್ಪವೋಲಲ್ಲಿ ಮೂಡಿ ಮುಳ್ಕಾ ಡುವ ವಿಹಗಾವಳಿಗಳೇಂ ಮನಂಗೊಳಿಸಿದುವೋ॥೪೪॥
--------------
ರನ್ನ
ಮರುದಾಂದೋಳಿತ ಜಂಬೂ ತರುಶಾಖಾಹಸ್ತಕಿಸಲಯಂ ಮಿಳಿಮಿಳಿರು ತ್ತಿರೆ ಸನ್ನೆಗೆಯ್ದು ತೋರ್ಪಂ ತಿರಲೆಸೆದುವು ಪವನಜಂಗೆ ದುರ್ಯೋಧನನಂ॥
--------------
ರನ್ನ
ಮಲುದಾತ್ಮಜ ನಿಜರಿಪು ತಲೆ ಗರೆದಿರ್ದಪನಿಲ್ಲಿ ನೋಡು ಕೊಳದೊಳಗೆಂಬಂ ತಿರೆ ಪೊಳೆದು ತೋರ್ಪ ಜಲಚರ ಪರಿಕರಮರಿಪಿದುವು ತಾಮೆ ದುರ್ಯೋಧನನಂ॥೪೬॥
--------------
ರನ್ನ
ಮೀಂಗುಲಿಗವಕ್ಕಿ ಕೊಳನೊಳ್ ಮೀಂಗೆರಗುವ ತೆರದಿನೆರಗಿ ನೋಡಿಲ್ಲಿರ್ದಂ ಪಿಂಗಾಕ್ಷನೆಂದು ಪವನಸು ತಂಗರಿಪುವ ತೆರದಿನಂತದೇಂ ಸೊಗಯಿಸಿತೋ॥೪೫||
--------------
ರನ್ನ
-->