ಒಟ್ಟು 8 ಕಡೆಗಳಲ್ಲಿ , 1 ಕವಿಗಳು , 8 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಇರಲಿಂತೀಮಾದ್ರಿಪುತ್ರರ್ ಬಡವುಗಳವರೇಗೆಯ್ವರಿಂ ಧರ್ಮಪುತ್ರಂಬೆರಸೀಗಳ್ ಬರ್ಕೆ ಭೀಮಂ ಹರಿಸುತನೊಡನೀ ಮೂವರುಂ ಬರ್ಕೆ ಮೇಣಯ್ವರುಮಿಂಬರ್ಕೀ ಕೃತಾಂತಾತ್ಮಜಪವನಜಗಾಂಡೀವಧನ್ವರ್ಕಳೀಮೂವರೊಳೊರ್ವಂ ಕೃಷ್ಣ ಬರ್ಕಿಂ ಪೊಣರಲನಿಬರುಂ ಬರ್ಕೆ ಮೇಣ್ ಬನ್ನಮೀವೆಂ॥೪೨॥
ಕದನದೊಳುಣ್ಮಿದೊಳ್ಮಿದುಳ ಕರ್ದಮದೊಳ್ ಜಗುಳ್ದಂಘ್ರಿ ಜಾರಿ ಪೋಪುದುಮೊಡನಿರ್ದ ಸಂಜಯನಿಳೇಶ್ವರನಂ ಪಿಡಿದೂರುಭಂಗಮಾಗದೆ ವಲಮೆಂದೊಡಾಗದೆನೆ ಪುಲ್ಮರುಳೊಂದೆಡೆವೋಗಿ ಭೀಮ ಕೋಪದೆ ನಿನಗೂರುಭಂಗಭಯಮಾಗದೆ ಪೋಕುಮೆ ಕೌರವೇಶ್ವರಾ॥೪೪॥
ಗಗನಂ ಬಿಳ್ದುದೊ ಮೇಣ್ ನೆಲಕ್ಕೆ ನೆಲನೇಂಪತ್ತಿತ್ತೊ ಮೇಣಿಲ್ಲಿ ಪನ್ನಗವೃಂದಾರಕರೆಂದುಮಿರ್ಪ ಬಿಲನೋ ಮೇಣಿಲ್ಲಿ ದಿಙ್ನಾಗರಾಜಗೆ ಮೆಯ್ಗರ್ಚಿಕೊಳಲ್ಕಜ ಸಮೆದ ತೋಯೋದ್ದೇಶಮೋ ಸಂದೆಯಂಬಗೆಗಾದತ್ತೆನಿಸಿರ್ದುದೇಂ ಪಿರಿದೊ ವೈಶಂಪಾಯನಾಬ್ಜಾಕರಂ॥೧೧॥
ಚರಮಚರಮೆಂಬ ಜಗದಂತರದೊಳ್ ಖಳನೆಲ್ಲಿ ಪೊಕ್ಕೊಡಂ ತದ್ಭುಜಪಂಜರದೊಳ್ ಪೊಕ್ಕೊಡೆ ಹರಿಹರಹಿರಣ್ಯಗರ್ಭರ್ಕಳಾಂತೊಡಂ ಕೊಲ್ಲದಿರೆಂ॥೨೨॥
ಪುರುಷರ್ ಮೂವರೊಳೊರ್ವನೆಂಬರಸುರಪ್ರಧ್ವಂಸಿಯೆಂಬರ್ ಜಗದ್ಗುರುವೆಂಬರ್ ಪೆರರ್ಗೇಕೆ ತೇರನೆಸಪಂ ಧರ್ಮಾನುಜಂಗೇಕೆ ಕಿಂಕರನಾದಂ ಕರವೇರಿಯಾದನದರಿಂ ಸೂತಂ ಭಟಂ ಪೇಳಿ ಯೆಂಬರಮಾತೊಪ್ಪುಗುಮಾದಿ ದೇವನೆನಿಸಲ್ ಕೃಷ್ಣಂಗದೆಂತೊಪ್ಪುಗುಂ॥೪೩॥
ಬೆಳಗುವ ಸೊಡರೊಳ್ ಸೊಡರಂಬೆಳಗಿ ಪಲರ್ ಕೊಂಡುಪೋಗೆಯುಂ ಕುಂದದೆ ಪಜ್ಜಳಿಸುವವೊಲ್ ಜಗಮೆಲ್ಲಂಕೊಳಲುಂ ತವದಿತ್ತು ಮೆರೆವನಿರಿವ ಬೆಡಂಗಂ
ಮದಮಣಮಿಲ್ಲ ದಾನಗುಣದಿಂ ನೆಗಳ್ದ್ದುಂ ನೃಪಸಿಂಹನಾಗಿಯುಂವಿದಿತವಿಶುದ್ಧಭದ್ರಗುಣನಂತೆ ವಿರುದ್ಧಮಿದೆಂಬಿನಂ ನಿಜಾಭ್ಯುದಯನಿವೇದದೀರ್ಘಕರಮೊಪ್ಪೆ ಜಗತ್ಪ್ರಿಯವಾದ ದೇವನಂಕದ ಗಣನಾಯಕಂ ವರದನಕ್ಕಮಗಮ್ಮನಗಂಧವಾರಣಂ
ವರಪದ್ಮಾಸನದೊಳ್ ಕನನ್ಮಣಿಮಯಂ ಸಿಂಹಾಸನಂ ಬ್ರಾಹ್ಮಿಯೊಳ್ಪರಮಶ್ರೀ ಗಣನಾಕ್ಷಸೂತ್ರಮಣಿಯೊಳ್ ರತ್ನೋಜ್ವಲಂ ಭೂಷಣಂದೊರೆಯಿಗಿರ್ಪಿನಮೊಂದುಗುಂದದಖಿಲಂ ವಿಜ್ಞಾನದಿಂದಂ ಜಗದ್ಗುರುವಾದಂ ನಮಗೀಗೆ ಬೇಳ್ಪವರಮಂ ಶ್ರೀರಾಜಕಂಜಾಸನಂ