ಒಟ್ಟು 207 ಕಡೆಗಳಲ್ಲಿ , 1 ಕವಿಗಳು , 115 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಧನೃಪಸುತನೆಯೋ ಜಾ ತ್ಯಂಧನೆಯೋ ಮೆಟ್ಟದಗಲ್ದು ಪೋಗೆನುತುಂ ಕೋ ಪಾಂಧರ್ ಜಡಿದರ್ ಪತಿಯ ಕ ಬಂಧಮನೆಡಗಲಿಸಿ ಪೋಪ ದುರ್ಯೋಧನನಂ॥೧೬॥
--------------
ರನ್ನ
ಅದಟಿನ ಪಾರ್ಥನೆಚ್ಚು ಕೊಲೆ ಜಾತಬಲಂ ದ್ರುಪದಾತ್ಮಜಾಥನೋ ವದೆ ಪುಡಿಯೊಳ್ ಪೊರಳ್ಚಿ ತಲೆಯಂ ತೆಗೆವಲ್ಲಿ ಪಿನಾಕವೆತ್ತವೋ ದುದೊ ಶರವೆತ್ತವೋದುದೊ ಲಲಾಟದಿನಿಂಗಳಣ್ಣದೆತ್ತವೋ ದುದೊ ಗುರುಸೂನು ತಾನುಮಣಮಮ್ಮನಲಂಪುಮದೆತ್ತವೋದುದೋ॥೫೧॥
--------------
ರನ್ನ
ಅನಿಮೇಷಾದ್ಯವತಾರಂ ತನಗಾಗೆ ದಶಾವತಾರಮನಿತರೊಳಿರದ ರ್ಜುನನ ರಥಮೆಸಗಿ ಪಪನ್ನೊಂ ದನೆಯದು ಸೂತಾವತಾರಮುಂ ಹರಿಗಾಯ್ತೆ॥೪೪॥
--------------
ರನ್ನ
ಅನಿಲತನೂಜನ ಸಿಂಹ ಧ್ವನಿಯಂ ಕೇಳ್ದಳ್ಕಿ ತತ್ಸರೋವರದೆರ್ದೆ ಪ ವ್ವನೆ ಪಾರುವಂತೆ ಪಾರಿದು ವನಾಕುಳಂ ಕೊಳದೊಳಿರ್ದ ತದ್ವಿಹಗಕುಳಂ॥೧೭॥
--------------
ರನ್ನ
ಅನುಜನ ನೆತ್ತರನೀಂಟಿದ ವನನಿಂದಾಪ್ರಾಣಸಹಿತಮೀಂಟದೆ ದುರ್ಯೋ ಧನನೆಂಬ ಪೆಸರ್ಗೆ ಮುಯ್ಯಾಂ ಪೆನೆ ದುಶ್ಯಾಸನನ ಬನ್ನಮಂ ನೀಗುವೆನೇ॥೮॥
--------------
ರನ್ನ
ಅನುಜಸ‌ಮೇತನೊಳಂತಕ ತನಯನೊಳನುಜವ್ಯಪೇತನೀಗಳ್ ದುರ್ಯೋ ಧನನಳಿಪಿ ಸಂಧಿಗೆಯ್ದೊಡೆ ಮುನಿವರ ಮೆಚ್ಚುವರ ನುಡಿಗೆ ಪಕ್ಕಾಗಿರನೇ॥೪೮॥
--------------
ರನ್ನ
ಅನುಜೇಯನಿತ್ತು ನರಂಗಾ ತನ ತನಯಂಗಿತ್ತು ತನ್ನ ಮಗಳಂ ತಾನಾ ತನ ರದಮನೆಸಗಿ ಧರ್ಮಜ ನನುಜನ ನೆವದಿಂದ‌ಮರಸುಗೆಯ್ವಂ ಕೃಷ್ಣಂ॥೪೨॥
--------------
ರನ್ನ
ಅರಗಿನಮಾಡದೊಳ್ ವಿಷದ ಲಡ್ಡುಗೆಯೊಳ್ ಕೊಲಲೆಂದು ಬಂಧುಮ ತ್ಸರದೊಳೆ ವೈರಮಂ ಪದೆದು ಭೀಮನನಿನ್ನಿನಿತರ್ಕೆ ತಂದ ನೀಂ ಮರುಳಯೊ ನೋಳ್ಪಮಿರ್ವರ ಮರುಳ್ತನಮಂ ಫಣಿರಾಜಕೇತನಾ॥೪೫॥
--------------
ರನ್ನ
ಅರಸಂ ದೀಕ್ಷಿತನಿಲ್ಲಿ ಋತ್ವಿಜರುಮೆಮ್ಮೀ ನಾಲ್ವರುಂ ಸಂಗರಾ ಧ್ವರದೊಳ್ ತಾನುಪದೇಶಕಂ ಮುರಹರಂ ನೀನುಂ ಗೃಹೀತವ್ರತಾ ಚರಣವ್ಯಾಪಿಕೆಯುಂ ಭವತ್ಪರಿಭವಂ ಸಂಚಾರಕಂ ಕೌರವೇ ಶ್ವರನೀತಂ ಪಶುವಾಗೆಬೇಳ್ದೆನಿವಂ ಕೋಪಾಗ್ನಿಯಿಂದಗ್ನಿಜೇ॥೪೬॥
--------------
ರನ್ನ
ಅರಸಂಗರಗಜ್ಜದೊಳಂ ಧುರದೊಳಮರಿಸೇನೆಗೆಂಬರದು ಪುಸಿಯಾಯ್ತಂ ತೆರಡರೊಳೊಂದರಫಲಮುಂ ಪರಿಣತಿಗಾಯ್ತಿಲ್ಲನರ್ಥಕಂ ವಾಕ್ಯಾರ್ಥಂ॥೧೪॥
--------------
ರನ್ನ
ಅರೆಮುಗಿದಿರ್ದ ಕಣ್ಗಳುಮಲರ್ದ ಮೊಗಂ ಕಡಿವೋದ ಕೆಯ್ಯುಮಾ ಸುರತರಮಾಗೆ ಕರ್ಚಿದವುಡುಂ ಬೆರಸನ್ಯಶರಪ್ರಹಾರ ಜ ರ್ಜರಿತಶರೀರನಾಗಿ ನವಲೋಹಿತವಾರ್ಧಿಯೊಳಳ್ದು ಬಿಳ್ದನಂ ಕುರುಪತಿ ನೋಡಿ ಕಂಡನಭಿಮನ್ಯುಕುಮಾರನನಾಜಿವೀರನಂ ॥೫೪॥
--------------
ರನ್ನ
ಅಸ಼ಮಬಲ ಭವದ್ವಿಕ್ರಮ ಮಸಂಭವಂ ಪೆರರ್ಗೆ ನಿನ್ನನಾನಿನಿತಂ ಪ್ರಾ ರ್ಥಿಸುವೆನಭಿಮನ್ಯು ನಿಜ ಸಾ ಹಸೈಕದೇಶಾನುಮರಣಮೆಮಗಕ್ಕೆ ಗಡಾ॥೫೭॥
--------------
ರನ್ನ
ಅಸುಹೃತ್ಸೇನೆಗೆ ಸಾಲ್ವನೊರ್ವನೆ ಗಡಂ ಲುದ್ರಾವತಾರಂ ಗಡಂ ನೊಸಲೊಳ್ ಕಣ್ಗಡಮೆಂದು ನಚ್ಚಿ ಪೊರೆದೆಂ ತಾನಕ್ಕೆ ತಮ್ಮಮ್ಮನ ಕ್ಕಿಸಲಂಬಂ ತಿರುವಾಯ್ಗೆ ತಂದರಿವರೇ ತಾಮಿರ್ವರುಂ ಕಯ್ದುವಂ ಬಿಸುಟರ್ ಜೋಳದ ಪಾಳಿಯಂ ಬಗೆದರಿಲ್ಲಾದ್ರೌಣಿಯುಂ ದ್ರೋಣನುಂ
--------------
ರನ್ನ
ಆನರಿವೆಂ ಪೃಥೆಯರಿವಳ್ ದಾನವರಿಪುವರಿವನರ್ಕನರಿವಂ ದಿವ್ಯ ಜ್ಞಾನಿಸಹದೇವನರಿವಂ ನೀನಾರ್ಗೆಂದಾರುಮರಿಯರಂಗಾಧಿಪತಿ॥೧೮॥
--------------
ರನ್ನ
ಆಮ್ಮಗನೆನಾಗೆ ಧರ್ಮಜ ನೇಮ್ಮಗನಲ್ಲನೆ ಬಳಿಕ್ಕೆ ನೀಮುಂ ತಾಮುಂ ನಿಮ್ಮೊಳ್ ನೇರ್ಪಡುಗಿಡದೆ ಸು ಖಮ್ಮುನ್ನಿನ ತೆರದೆ ಬಾಳ್ವುದಾಂ ಬೆಸಕೆಯ್ಯೆಂ॥೧೨॥
--------------
ರನ್ನ
-->