ಒಟ್ಟು 2 ಕಡೆಗಳಲ್ಲಿ , 1 ಕವಿಗಳು , 2 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾರ್ಯಸಖಂ ಶಕುನಿ ಗಡಾ ಶೌರ್ಯಸಖಂ ಸೂತಜಂ ಗಡಾ ಭೀಷ್ಮ ಶರಾ ಚಾರ್ಯರ ನುಡಿ ಕಯ್ಪೆ ಗಡಮ ಕಾರ್ಯಂಗಹಿಕೇತನಂಗೆ ವಿಧಿವಿಳಸನದಿಂ॥೨೭॥
--------------
ರನ್ನ
ಶರಸಂಧಾನಮನನ್ಯಸೈನ್ಯದೊಡಲೊಳ್ ಬಿಲ್ಬಲ್ಮೆಯಂ ತನ್ನ ಶಿ ಷ್ಯರ ಮೈಯೊಳ್ ನಿಜಕೀರ್ತಿಯಂ ನಿಖಿಳದಿಕ್ಚಕ್ರಂಗಳೊಳ್ ಚಿತ್ತಮಂ ಹರ ಪಾದಾಂಬುಜಯುಗ್ಮದೊಳ್ ನಿರಿಸಿದಂ ಚಾಪಾಗಮಾಚಾರ್ಯರೊಳ್ ದೊರೆಯಾರೆಂಬಿನಮಣ್ಮಿ ಸತ್ತಳವಿದೇಂ ದ್ರೋಣಂಗೆ ಮೈವೆತ್ತುದೋ॥೫೨॥
--------------
ರನ್ನ
-->