ಒಟ್ಟು 17 ಕಡೆಗಳಲ್ಲಿ , 1 ಕವಿಗಳು , 12 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಇಂದಾನಿದೆಂ ಮೇಣಿನನಂದನ ಕೇಳ್ ಪಾಂಡುತನಯರಾದರ್ ನಿನ್ನಂಕೊಂದುಂ ದುಶ್ಯಾಸನನಂಕೊಂದುಂ ಬರ್ದುಕುವರೆ ಬರ್ದುಕರಂಗಿಧಿಪತೀ॥೩೭॥
ಒಡವುಟ್ಟಿದರಂ ಕೊಂದವರಡಗಂ ತಿಂದವರ ನೆತ್ತರಂ ಬೆಲಗಸೆಯೊಳ್ಕುಡಿವೀ ನಿಸ್ತ್ರಿಂಶತೆಯಂಹಿಡಿಂಬಿಯಂ ಪೊರ್ದಿ ಕಲ್ತನಾಗನೆ ಭೀಮಂ॥೨೮॥
ಕರಿಯಂ ನುಂಗಿ ಕಳಿಂಗನಂ ನೊಣೆದ ದರ್ಪಕ್ಕೊಂದುಗೊಳ್ ಮತ್ಸಹೋದರರಂ ಕೋಪದೆ ತಿಂದುದರ್ಕೆರಡುಗೊಳ್ ದುಶ್ಯಾಸನೋರುಸ್ಸ್ಥಳಕ್ಷರದಸ್ರಾಂಬುವನಾರ್ದು ಪೀರ್ದ ಮುಳಿಸಿಂಗಂ ಮೂರುಗೊಳ್ಳೆಂದು ಮಚ್ಚರದಿಂದೋವದೆ ಪೊಯ್ದನೆತ್ತಿಗದೆಯಂ ದುರ್ಯೋಧನಂ ಭೀಮನಂ॥೧೮॥
ಕೂರಿಸಿ ವೀರ ಶ್ರೀಯಂಕೂರದರಂ ಕೊಂದು ಸಮರಜಯಮಂ ಮಾಡಲ್ಕೂರಸಿಯೊಳ್ ನೆಲಸುಗೆ ಕಂಠೀರವವಾಹನೆ ಚಳುಕ್ಯಕಂಠೀರವನಾ
ಗುರುವಂ ಪ್ರೋ ಜ್ಝಿತಚಾಪನಂ ಪುಸಿದುಕೊಂದಾ ಭೀರಮಂ ಭೀಷ್ಮರಂಶರಶಯ್ಯಾಗತರಂ ಕರುತ್ತು ಗುರಿಯೆಚ್ಚಾ ಪೊಚ್ಚರಂ ಕರ್ಣನಂವಿರಥಜ್ಯಾಯುಧನೆನ್ನದೆಚ್ಚು ತಲೆಗೊಂಡಾ ಶೌರ್ಯಮಂ ಪಾಂಡುಪುತ್ರರೆ ಬಲ್ಲರ್ ಮೆರೆಯಲ್ಕೆ ಸಾಹಸಧನಂ ಧುರ್ಯೋಧನಂ ಬಲ್ಲನೇ॥೩೩॥
ನಿನ್ನಂ ಕೊಂದ ಕಿರೀಟಿಯುಮೆನ್ನನುಜನನಿಕ್ಕಿಕೊಂದ ಭೀಮನುಮೊಳನಾನಿನ್ನುಮೊಳೆಂ ಗಡಿದಕ್ಕುಮೆನಿನ್ನಯ ಕೂರ್ಮೆಗಮದೆನ್ನ ಸೌಧರ್ಮಿಕೆಗಂ॥೨೫॥
ನಿನ್ನಂ ಕೊಂದಂ ಗಡಮೊಳನಿನ್ನುಂ ಕೊಂದವನನಿಕ್ಟಿ ಕೊಲ್ಲದೆ ಮಾಣ್ಬಾನಿನ್ನುಮೊಳೆಂ ಗಡಿದಕ್ಕುಮೆನಿನ್ನಯ ಕೂರ್ಮೆಗಮದೆನ್ನ ಸೌಧರ್ಮಿಕೆಗಂ॥೬॥
ಪರಶುಧರಂ ಚಕ್ರಧರಂಸುರಪತಿ ಭೂಕಾಂತೆಯೆಂದೀ ಪೇಳ್ದಯ್ವರೆ ಕೂಡಿ ನಿನ್ನ ಕೊಂದರ್ನರನೊರ್ವನೆ ಕೊಂದನಲ್ಲನಂಗಾಧಿಪತೀ॥೨೬॥
ಪಲರಿರ್ದು ಕಾದಿದರ್ ಮೆಯ್ಗಲಿಗಳ್ ನಿನ್ನೊಂದೆ ಮೆಯ್ಯೊಳಂ ತವೆ ಕೊಂದೈಪಲರಂ ನಿನ್ನಂ ಪೆತ್ತಳ್ಮೊಲೆವೆತ್ತಳೆ ವೀರಜನನಿವೆಸರಂ ಪೆತ್ತಳ್॥೫೬॥
ಬಂದಂ ಬಕಾಂತಕಂ ಪೋಕೊಂದಂಬಕವೆಸರ್ಗೆ ಮುನಿದು ನಮ್ಮುಮನಿನ್ನೆಂಬಂದದೊಳೆ ಪಾರಿಪೋದುವುನಿಂದಿರದುರವಣಿಸಿ ಬಕನಿಕಾಯಕಮದರೊಳ್॥೧೯॥
ಮುಳಿಸಿಂ ನಂಜಕ್ಕಿಕೊಂದಂದಿನ ಜತುಗೃಹದೊಳ್ ಸುಟ್ಟುಕೊಂದಂದಿನುರ್ವೀತಳಮಂ ಜೂದಾಡಿ ಗೆಲ್ದಂದಿನ ನಿಜಕಬರೀನೀವಿಬಂಧಂಗಳಂ ದೋರ್ವಳದಿಂದಂ ತಮ್ಮನಿಂದಂ ತೆಗೆಯಿಸಿ ನಡೆದಾ ನೀಚನಾ ದ್ರೋಹನಾ ಸಂಚಳನಾ ಚಂಡಾಲನಾ ಪಾತಕನಿರವನಿದಂ ನೋಡು ಪಂಕೇಜವಕ್ತ್ರೇ॥೪೫॥
ಸ್ಥಿರಸತ್ಯವ್ರತಿಯೆಂದು ಧರ್ಮರುಚಿಯೆಂದಾ ಧರ್ಮಪುತ್ರಂ ದಯಾಪರನೆಂದೆಲ್ಲರ ಪೇಳ್ದ ಮಾತು ಪುಸಿಯಾಯ್ತೀ ಕಾರ್ಮುಕಾಚಾರ್ಯನಂಗುರುವಂ ಬ್ರಾಹ್ಮಣನಂ ತೊದಳ್ನುಡಿದು ಕೊಂದದಾ ಮೃಷಾಪಾತಕಂಪರಮೆಂಬೀ ನುಡಿಯಿಂ ಪೃಥಾಪ್ರಿಯಸುತಂ ಪಾಪಕ್ಕೆ ಪಕ್ಕಾಗನೇ॥೨೩॥