ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಕುರುರಾಜಂ ವಿದ್ಯಾಧರಕರಣದೆ ನೆಗೆದಂಬರಕ್ಕೆ ಗದೆಯಂ ಕ್ರಮದಿಂತಿರುಪೆ ಧರಾಚಕ್ರಂ ಕೋವರಚಕ್ರಂ ತಿರಿವ ತೆರದಿ ತಿರಿದತ್ತೆನಸುಂ॥೨೪॥
ಗುರು ಕವಚಂ ಕರ್ಣಂ ಬಾಹುರಕ್ಕೆ ಸುರಸಿಂಧುನಂದನಂ ಸೀಸಕಮಾಗಿರೆ ಮೆಯ್ಗೆ ಮುಳಿಯಲರಿಯದೆಕುರುರಾಜನ ತೊಡೆಯನುಡಿವೆನೆಂದಂ ಭೀಮಂ॥೨೮॥
ಗುರುವಿನ ನೆತ್ತರಂ ಕುಡಿವೆನಪ್ಪೊಡೆ ದ್ವಿಜವಂಶಜಂ ನಿಜಾವರಜನ ನೆತ್ತರಂ ಕುಡಿವೆನಪ್ಪೊಡೆ ಭೀಮನೆ ಪೀರ್ದನೆಯ್ದೆ ಭೀಷ್ಮರ ಬಿಸುನೆತ್ತರಂ ಕುಡಿವೊಡಿನ್ನುಮೊಳಂ ಕುರುರಾಜ ನಿನ್ನ ನೆತ್ತರ ಸವಿನೋಳ್ಪೊಡಾಂ ಬಯಸಿ ಬಂದಪೆನೆಂದದೊಂದು ಪುಲ್ಮರುಳ್॥೪೩॥
ತುಂಗ ಕುರುವಂಶಮಯಶೋಭಂಗಂ ಛಿದ್ರಿತಮದೆನ್ನ ದೂಸರಿನಾಯ್ತಾನುಂ ಗಡ ಕುರುರಾಜನೆ ನೀಮುಂ ಗಡ ಸಂಧಾನವೇಳ್ದಿರೆನಗರಸು ಗಡಾ॥೩॥