ಒಟ್ಟು 30 ಕಡೆಗಳಲ್ಲಿ , 1 ಕವಿಗಳು , 25 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನೃತಂ ಲೋಭಂ ಭಯಮೆಂ ಬಿನಿತುಂ ನೀನಿರ್ದ ನಾಡೊಳಿರ್ಕುಮೆ ರವಿನಂ ದನ ನನ್ನಿ ಚಾಗಮಣ್ಮೆಂ ಬಿನಿತರ್ಕಂ ನೀನೆ ಮೊತ್ಮಮೊದಲಿಗನಾದಯ್॥೧೭॥
--------------
ರನ್ನ
ಅರಸಂ ದೀಕ್ಷಿತನಿಲ್ಲಿ ಋತ್ವಿಜರುಮೆಮ್ಮೀ ನಾಲ್ವರುಂ ಸಂಗರಾ ಧ್ವರದೊಳ್ ತಾನುಪದೇಶಕಂ ಮುರಹರಂ ನೀನುಂ ಗೃಹೀತವ್ರತಾ ಚರಣವ್ಯಾಪಿಕೆಯುಂ ಭವತ್ಪರಿಭವಂ ಸಂಚಾರಕಂ ಕೌರವೇ ಶ್ವರನೀತಂ ಪಶುವಾಗೆಬೇಳ್ದೆನಿವಂ ಕೋಪಾಗ್ನಿಯಿಂದಗ್ನಿಜೇ॥೪೬॥
--------------
ರನ್ನ
ಅರಸಂಗರಗಜ್ಜದೊಳಂ ಧುರದೊಳಮರಿಸೇನೆಗೆಂಬರದು ಪುಸಿಯಾಯ್ತಂ ತೆರಡರೊಳೊಂದರಫಲಮುಂ ಪರಿಣತಿಗಾಯ್ತಿಲ್ಲನರ್ಥಕಂ ವಾಕ್ಯಾರ್ಥಂ॥೧೪॥
--------------
ರನ್ನ
ಅರೆಮುಗಿದಿರ್ದ ಕಣ್ಗಳುಮಲರ್ದ ಮೊಗಂ ಕಡಿವೋದ ಕೆಯ್ಯುಮಾ ಸುರತರಮಾಗೆ ಕರ್ಚಿದವುಡುಂ ಬೆರಸನ್ಯಶರಪ್ರಹಾರ ಜ ರ್ಜರಿತಶರೀರನಾಗಿ ನವಲೋಹಿತವಾರ್ಧಿಯೊಳಳ್ದು ಬಿಳ್ದನಂ ಕುರುಪತಿ ನೋಡಿ ಕಂಡನಭಿಮನ್ಯುಕುಮಾರನನಾಜಿವೀರನಂ ॥೫೪॥
--------------
ರನ್ನ
ಆರವಮಂನಿರ್ಜಿತಕಂ ಠೀರವರವಮಂ ನಿರಸ್ತಘನರವಮಂ ಕೋ ಪಾರುಣನೇತ್ರಂ ಕೇಳ್ದಾ ನೀರೊಳಗಿರ್ದುಂ ಬೆಮರ್ತನುಲಗಪತಾಕಂ॥೨೨॥
--------------
ರನ್ನ
ಇನಸುತನಿರವಂ ದುಶ್ಯಾ ಸನನಿರವಂ ಕಂಡುಮಿನ್ನುಮೆನ್ನಸುವಿದು ನೆ ಟ್ಟನೆ ಪೋದುದಿಲ್ಲ ಕಲ್ಲೆರ್ದೆ ತನದಿಂದೆನ್ನಂತು ಬರ್ದನಾವನುಮೊಳನೇ॥೨೮॥
--------------
ರನ್ನ
ಇಭಶೈಲಂಗಳನೇರಿಯೇರಿ ರುಧಿರಸ್ರೋತಂಗಳಂ ದಾಂಟಿದಾಂ ಟಿಭದೋರನೀಲಲತಾ ಪ್ರತಾನವಿಪಿನ ವ್ರಾತಂಗಳೊಳ್ ಸಿಲ್ಕಿ ಸಿ ಲ್ಕಿ ಭರಂಗೆಯ್ದುರದೆಯ್ದಿ ಸಂಜಯ ಶಿರಸ್ಕಂಧಾವಲಂಬಂ ಕುರು ಪ್ರಭು ಕಂಡಂ ಶಲಜಾಲಜರ್ಜರಿತ ಗಾತ್ರತ್ರಾಣನಂ ದ್ರೋಣನಂ॥೪೮॥
--------------
ರನ್ನ
ಒಳಗಾದಂ ಪಗೆವಂ ಸರೋವರದೊಳಿರ್ದಿನ್ನೆತ್ತವೋಪಂ ಸರೋ ಜಳಮಂ ತವೆ ಪೀರ್ದು ಪೀರ್ವೆನಸುಹೃದ್ರಕ್ತಾಂಬುವಂ ತೋರ್ಪೆನೆ ನ್ನಳವಂ ಮತ್ಪತಿಗೆಂದು ಸಂತಸದೆ ಬಾಹಾಸ್ಭಾಲನಂಗೆಯ್ದು ದಿ ಗ್ವಳಯಂ ಮಾರ್ದನಿಯಿಟ್ಟವೊಲ್ ಗಜರಿದಂ ಚಾಳುಕ್ಯ ಕಂಠೀರವಂ॥೪೭॥
--------------
ರನ್ನ
ಕಲಿಗಂ ಶಂಕೆಯೆ ಚಾಗಿಗಂ ಬೆರಗೆ ಮೇಣ್ ಕಟ್ಟಾಳ್ ನೆರಂಬಾರ್ವನೇ ಕುಲಜಂಗಂ ಮರುವಾಳೆ ಸಜ್ಜನಿಕೆಗಂ ಕಲ್ವೋಜೆಯೇ ಧರ್ಮಿಗಂ ಕೊಲೆಯೇ ಮಂತ್ರಿಗಮಿಚ್ಚೆಕಾರತನಮೇ ತಕ್ಕಂ ಪಿಸುಣ್ಬೇಳ್ವನೇ ಚಲಮಂ ಗಂಡುಮನಪ್ಪುಕೆಯ್ವೆನಗಮಾ ಕೌಂತೇಯರೊಳ್ ಸಂಧಿಯೇ॥೪೬॥
--------------
ರನ್ನ
ಕೂರಿಸಿ ವೀರ ಶ್ರೀಯಂ ಕೂರದರಂ ಕೊಂದು ಸಮರಜಯಮಂ ಮಾಡಲ್ ಕೂರಸಿಯೊಳ್ ನೆಲಸುಗೆ ಕಂ ಠೀರವವಾಹನೆ ಚಳುಕ್ಯಕಂಠೀರವನಾ
--------------
ರನ್ನ
ಗಳಿತಶರಮಾಯ್ತು ಹಸ್ತಂ ಗಳಿತರಣೋತ್ಸಿಹಮಾಯ್ತು ಹೃದಯಂ ನಯನಂ ಗಳಿತಾಶ್ರುವಾಯ್ತು ಕೌರವ ಕುಲತಿಲಕಂಗೆ ಕುಮಾರನಂ ಕಾಣಲೊಡಂ॥೬೧॥
--------------
ರನ್ನ
ಜನಕಂಗೆ ಜಲಾಂಜಲಿಯಂ ತನೂಭವಂ ಕುಡುವುದುಚಿತಮದುಗೆಟ್ಟೀಗಳ್ ನಿನಗಾಂ ಕುಡುವಂತಾದುದೆ ತನೂಜ ನೀಂ ಕ್ರಮವಿಪರ್ಯಯಂ ಮಾಡುವುದೇ॥೬೨॥
--------------
ರನ್ನ
ಜಲಧಿಗಳೇಳುಂ ಭೂಭೃ ತ್ಕುಲಂಗಳಂ ರಿಪುಗೆ ಸಿರಿಯನೀವಂತೆತ್ತಂ ತಳಮಳವಿಗಳಿಯೆ ಕುರುಕುಲ ತಿಳಕಂ ರಿಪುಗೆಂತುಮೀವನಲ್ಲಂ ಶ್ರೀಯಂ॥೫೬॥
--------------
ರನ್ನ
ತರುಣೋತ್ತುಂಗಶಶಾಂಕಖಂಡಮೆ ಭುಜಂಗೇಂದ್ರನಂ ಕುರಮುನ್ಮೀಲಿತಮಟ್ಟಹಾಸಮೆ ದಳಾನೀಕಂ ವೃಷಂ ಪುಷ್ಪ ಮೀ ಶ್ವರಶೈಲಂ ಫಲಮಾಗೆ ಕೋಮಲಮುಖೀಗೌರೀಲತಾಶ್ಲಿಷ್ಟ ಶಂ ಕರಕಲ್ಪದ್ರುಮನೀಗಭೀಷ್ಟ ಫಲಮಂ ಚಾಳುಕ್ಯನಾರಾಯಣಂ
--------------
ರನ್ನ
ನರಲೋಕ‌ಮನನುಭೋಗಿಸಿ ಸುರಲೋಕದ ಸುಖಮನಾತ್ಮ ವಿಭವದೆ ತಳೆದಾ ಕುರುಪತಿ ವೈಶಂಪಾಯನ ಸರಮಂ ಪುಗುವಂತೆ ನಾಗಲೋಕವ ಪೊಕ್ಕಂ॥೧೪॥
--------------
ರನ್ನ
-->