ಒಟ್ಟು 524 ಕಡೆಗಳಲ್ಲಿ , 1 ಕವಿಗಳು , 174 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಪರಶುಧರಂ ಚಕ್ರಧರಂಸುರಪತಿ ಭೂಕಾಂತೆಯೆಂದೀ ಪೇಳ್ದಯ್ವರೆ ಕೂಡಿ ನಿನ್ನ ಕೊಂದರ್ನರನೊರ್ವನೆ ಕೊಂದನಲ್ಲನಂಗಾಧಿಪತೀ॥೨೬॥
ಪಲರಿರ್ದು ಕಾದಿದರ್ ಮೆಯ್ಗಲಿಗಳ್ ನಿನ್ನೊಂದೆ ಮೆಯ್ಯೊಳಂ ತವೆ ಕೊಂದೈಪಲರಂ ನಿನ್ನಂ ಪೆತ್ತಳ್ಮೊಲೆವೆತ್ತಳೆ ವೀರಜನನಿವೆಸರಂ ಪೆತ್ತಳ್॥೫೬॥
ಪಳಿಯಂ ಕೇಳ್ದೆನೊ ಮೇಣ್ನಡೆವಳಿಯಂ ತಪ್ಪಿದೆನೊ ಕಾಣೆನಣ್ಮಿಂದಂ ಕೂರ್ತಳಿದಿವರಂ ಪಗದೆನೊ ಪಚ್ಛಳಿದೆನೊ ಪೇಳ್ ಕೂಡಿ ನಿನ್ನೊಳಂಗಾಧಿಪತಿ॥೧೪॥
ಪವನಂಗೆ ಪುಟ್ಟಿದಂ ರಾಘವನಣುಗಾಳ್ ತ್ರಿಣಯನಾಂಶಮೆನಿಪಣುವಂ ಪಾಂಡವಕೇತುದಂಡದೊಳ್ ನೆಲಸುವುದಾವಗ್ಗಳಿಕೆ ಕಪಿಗೆ ಚಪಲತೆ ಸಹಜಂ॥೪೧॥
ಪಸಿವಿನೊಳನ್ನಮಂ ಪಸಿದು ಬಂದವರ್ಗಿಕ್ಕುವ ಯುದ್ಧರಂಗದೊಳ್ಕುಸಿಯದೆ ಸೂರೆಗೊಳ್ಳದೆ ರಣಕ್ಕೆ ಶುಚಿತ್ವಮನಪ್ಪುಕೆಯ್ವ ಮಾನಸಿಕೆಯ ನಾಲ್ವರುಂ ನಮಗೆ ವಂದ್ಯರವಂದೀರೊಳೀತನಲ್ತೆ ಸಾಹಸಧನನೆಂದು ಕೆಯ್ಮುಗಿದನಂದಭಿಮನ್ಯುಗೆ ಕೌರವೇಶ್ವರಂ॥೬೦॥
ಪಸೆಯೊಳ್ ಪಸುರ್ವಂದರೊಳಗ್ನಿಸಾಕ್ಷಿಯೊಳ್ ಕೊಂಡ ಪಾಂಡುಪತಿಯಿರೆ ದೋಷಾವಸಥರ್ ಪಾದರದಿಂ ಜನಿಯಿಸಿದರ್ ಪಾಂಡವರೊಳಲ್ಲದೆಮ್ಮೊಳಮುಂಟೆ॥೩೮॥
ಪುಟ್ಟಿದ ನೂರ್ವರುಮೆನ್ನೊಡವುಟ್ಟಿದ ನೂರ್ವರುಮಿದಿರ್ಚಿ ಸತ್ತೊಡೆ ಕೋಪಂಪುಟ್ಟಿ ಪೊದಳ್ದುದು ಸತ್ತರ್ಪುಟ್ಟರೆ ಪಾಂಡವರೊಳಿರಿದು ಛಲಮನೆ ಮೆರೆವೆಂ॥೫೪॥
ಪುಡಿಯೊಳ್ ಪೊರಳ್ಚಿಯುಂ ಮೆಯ್ಯಡಗಂ ತಿರಿತರಿದು ಕೊರೆದು ತಿಂದುಂ ಗೊಟ್ಟಂಗುಡಿದುಂನೆತ್ತರನೆಂತುಂಹಿಡಿಂಬರಿಪು ತಣಿದನಿಲ್ಲ ದುಶ್ಯಾಸನನಂ॥೩॥
ಪುದುವಾಳಲ್ಕಣಮಾಗದೆಂತುಮವರೊಳ್ ಸಂಧಾನಮಂ ಮಿಡಲಾಗದು ನೀಮಿಲ್ಲದೇಯಜ್ಜ ಬಿಲ್ಲಗುರುಗಳ್ ತಾಮಿಲ್ಲದಾ ಕರ್ಣನಿಲ್ಲದೆ ದುಶ್ಯಾಸನನಿಲ್ಲದಾರೊಡನೆ ರಾಜ್ಯಂಗೆಯ್ವೆನಾರ್ಗೆನ್ನ ಸಂಪದಮಂ ತೋರುವೆನಾರ್ಗೆತೋರಿ ಮೆರೆವೆಂ ನಾನಾ ವಿನೋದಂಗಳಂ॥೫೨॥
ಪುರುಷರ್ ಮೂವರೊಳೊರ್ವನೆಂಬರಸುರಪ್ರಧ್ವಂಸಿಯೆಂಬರ್ ಜಗದ್ಗುರುವೆಂಬರ್ ಪೆರರ್ಗೇಕೆ ತೇರನೆಸಪಂ ಧರ್ಮಾನುಜಂಗೇಕೆ ಕಿಂಕರನಾದಂ ಕರವೇರಿಯಾದನದರಿಂ ಸೂತಂ ಭಟಂ ಪೇಳಿ ಯೆಂಬರಮಾತೊಪ್ಪುಗುಮಾದಿ ದೇವನೆನಿಸಲ್ ಕೃಷ್ಣಂಗದೆಂತೊಪ್ಪುಗುಂ॥೪೩॥
ಪೆಂಡಿರ್ ಪಳಯಿಸುವಂದದೆಗಂಡರ್ ಪಳಯಿಸಿದೊಡಾಯಮಂ ಛಲಮಂ ಕಯ್ಕೊಂಡೆಸೆಪರಾರೊ ಕುರುಕುಲಮಂಡನ ನೀನೆತ್ತಿಕೊಂಡ ಛಲಮನೆ ಮೆರೆಯಾ॥೩೩॥
ಪೆಣದಿನಿಗಳ ತಂಡಂ ಬಲ್ವೆಣಗಳನರಸುತ್ತುಮಲ್ಲಿ ಬರೆವರೆ ಸಾರಲ್ಕಣಮೀಯದೆ ತಮ್ಮಾಳ್ದನಪೆಣನಂ ಕಾದಿರ್ದರಲ್ಲಿ ಬಿಳ್ದ ಭಟರ್ಕಳ್॥೧೫॥
ಪ್ರತಿಕೂಲದೈವನೈ ನೀಂಪ್ರತಿನೃಪನುಕೂಲದೈವರಸಹಾಯನೆ ನೀಂಪ್ರತಿನೃಪರಸಹಾಯರ್ ನೀಂಪ್ರತಿಬಲನದರಿಂದನರ್ಥಕಂ ವಾಕ್ಯಾರ್ಥಂ॥೪೫॥
ಪ್ರಿಯಮಿತ್ರನೆನಗೆ ಕಮಲಪ್ರಿಯನಂದನನವನನೆನ್ನ ಪಕ್ಕದೆ ಪಳಿದಪ್ರಿಯಮಂ ಮಾಡಿದನಾ ಕಳಶಯೋನಿ ನೆಗ಼ಳ್ದಿಂದ್ರಸುತನಿನೇಗುಂದಿದನೋ॥೧೯॥