ಒಟ್ಟು 1101 ಕಡೆಗಳಲ್ಲಿ , 1 ಕವಿಗಳು , 192 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೆರಪಂ ನಿಟ್ಟಿಸಿ ಕುರುಪತಿ ಬರಸಿಡಿಲೆರಗುವವೊಲೆರಗಿಪೊಯ್ಯಲೊಡಂ ಮೆ ಯ್ಯರಿದು ಪವನಜನು ಮೇನೆಂ ದರಿಯದೆ ಮತಿವಿಕಳನಾಗಿ ಮೂರ್ಚ್ಛೆಗೆ ಸಂದಂ॥೨೬॥
--------------
ರನ್ನ
ದರಹಾಸಪೇಶಲಂ ದಿ ಕ್ಕರಿಗಮನಂ ಕನಕಪರ್ವತ ಪ್ರಾಂಶುದಿನೇ ಶ್ವರಸುತನ ರೂಪು ಚಿತ್ರಂ ಬರೆದಂತಿರ್ದಪುದು ಚಿತಾತಭಿತ್ತಿಯೊಳೆನ್ನಾ॥೩೪
--------------
ರನ್ನ
ದಾಂಟುವೆನೊ ಕುಲನಗಂಗಳ ನೀಂಟುವೆನೊ ಚತುಸ್ಸಮುದ್ರಮಂ ರವಿ ಶಶಿಯಂ ಮೀಂಟುವೆನೊ ಗಗನತಳದಿಂ ಗಂಟಲನೊತ್ತುವೆನೊ ಸಕಲ ದಿಕ್ಪಾಲಕರಂ॥೧೯॥
--------------
ರನ್ನ
ದಿನಕರ ತನಯನ ದುಶ್ಯಾ ಸನನವಿಯೋಗದೊಳಮಿಂದುವರೆಗಂ ನೋವಿ ಲ್ಲೆನಗಹಿತರೊಡನೆ ಸಂಧಿಗು ಡೆನೆ ನೊಂದೆಂ ಸ್ವಜನಗುರುಜನಾಭಾಯರ್ಥನೆಯಿಂ॥೭॥
--------------
ರನ್ನ
ದಿವಿಜತನಯಂಗೆ ಮುಖ್ಯಂ ರವಿಜಂಜಯಕಾದನೆನಗೆ ಕಣ್ಣೊಳ್ ಕಾಣಂ ಕಿವಿಯೊಳ್ ಕೇಳಂ ಕಾಣ್ಬಂ ದವೆಂತು ಕೇಳ್ವಂದಮೆಂತು ತಲೆಯಿಲ್ಲದನಾ॥೩೬॥
--------------
ರನ್ನ
ದೊಣೆಯಿಂದಂ ತೆಗೆವಾಗಳೊಂದು ತುಡುವಾಗಳ್ ಪತ್ತುಬಾಣಂ ಧನು ರ್ಗುಣದಿಂದಂ ಬಿಡುವಲ್ಲಿ ನೂರು ಪರಿವಾಗಳ್ ಸಾಸಿರಂ ವೈರಿಮಾ ರ್ಗಣಮಂ ಛೇದಿಸುವಲ್ಲಿ ಲಕ್ಕೆ ನಡುವಾಗಳ್ ಕೋಟಿ ಸೇನಾಂಗದೊಳ್ ಗಣನಾತೀತಮಿದೆಂದೊಡೇವೊಗಳ್ವುದೋ ಬಿಲ್ಬಲ್ಮೆಯಂ ಪಾರ್ಥನಾ॥೩॥
--------------
ರನ್ನ
ದೊರೆ ಯಮಪುತ್ರನಿರ್ದಿರವು ವಾಯುಜನಿರ್ದಿರವಗ್ನಿಪುತ್ರಿಯಿಎ ರ್ದಿರವಮಳರ್ಕಳಿರ್ದಿರವು ಮತ್ಸ್ಯನಿವಾಸದೊಳೆಲ್ಲ‌ಮಂತೆ ಮೆ ಯ್ಗರೆದಿರೆ ಗಂಡುಗೆಟ್ಟುಬಳೆದೊಟ್ಟು ಬೃಹನ್ನಳೆಯಾಗಿ ಪಾರ್ಥನಿ ರ್ದಿರವುಮೆನಲ್ಕೆ ಪಾರ್ಥನದು ರಂಭೆಯ ಶಾಪಮೊ ತನ್ನ ಪಾಪಮೋ॥೩೦॥
--------------
ರನ್ನ
ಧವಳ ಗಜೇಂದ್ರಮುಂ ಧವಳಚಾಮರಮುಂ ಧವಳಾತಪತ್ರಮುಂ ಧವಳವಿಲೋಚನೋತ್ಪಲ ವಧೂಜನಮುಂ ಬೆಲಸಷ್ಟದಿಕ್ತಟಂ ಧವಳಿಸೆ ಕೀರ್ತಿಯಿಂ ಧವಳ ಮಂಗಳಗೇಯದಿನೊಪ್ಪಿ ಬರ್ಪ ಕೌ ರವಧವಳಂಗೆ ದೇಸಿಗನೆ ಬರ್ಪವೊಲೊರ್ವನೆ ಬರ್ಪುದಾದುದೆ॥೪೧॥
--------------
ರನ್ನ
ಧಾರಿಣಿಯೊಳ್ ನಿಜಸಂಯುಗ ಭಾರಮನಾಂತಿರ್ದ ವೀರಪುಂಗವರಿರೆ ತ ದ್ಭಾಲಮನಾಂತಭಿಮನ್ಯು ಕು ಮಾರಂ ಪುಗೆ ವೀರರಮಣನೆನಿಸಿದನಲ್ತೆ॥೫೮॥
--------------
ರನ್ನ
ಧೃತರಾಷ್ಟ್ರಂ ದ್ರುಮಮಾದುದು ಶತಶಾಖಂ ಪಂಚಶಾಖಮಾದುದು ಪಾಂಡು ಕ್ಷಿತಿರುಹಮಕ್ಷಯಮಾಯ್ತಾ ದ್ವಿತೀಯಮಾಯ್ತೇಕಶಾಖಮಿವನಿಂದಾದ್ಯಂ॥೨೯॥
--------------
ರನ್ನ
ನಡುವುಡಿವನ್ನಮೇರಿ ಬರಿಯೆಲ್ವುಡಿವನ್ನೆಗಮೊತ್ತಿ ಮೆಟ್ಟಿ ಮೆ ಯ್ಯಡಗಡಗಾಗೆ ಮುನ್ನುರಮನಿರ್ಬಗಿಯಾಗಿರೆ ಪೋಳ್ದು ನೆತ್ತರಂ ಕುಡಿಕುಡಿದಾರ್ದ ವೈರಿಯುಳಿದನ್ನೆಗಮೆನ್ನಳಲೆಂತು ಪೋಕುಮೆಂ ದಡಿಗಡಿಗಳ್ತು ತನ್ನಣುಗದಮ್ಮನನೀಕ್ಷಿಸಿದಂ ಸುಯೋಧನಂ॥೪॥
--------------
ರನ್ನ
ನಯನದೊಳಮೆರ್ದೆಯೊಳಂ ನಿ ನ್ನಯ ರೂಪಿರ್ದಪುದು ನಿನ್ನಮಾತಿರ್ದಪುದೆ ನ್ನಯ ಕಿವಿಯೊಳಗಿನನಂದನ ವಿಯೋಗಮೆಂತಾದುದರಿಯೆನಂಗಾಧಿಪತೀ॥೨೪॥
--------------
ರನ್ನ
ನರಲೋಕ‌ಮನನುಭೋಗಿಸಿ ಸುರಲೋಕದ ಸುಖಮನಾತ್ಮ ವಿಭವದೆ ತಳೆದಾ ಕುರುಪತಿ ವೈಶಂಪಾಯನ ಸರಮಂ ಪುಗುವಂತೆ ನಾಗಲೋಕವ ಪೊಕ್ಕಂ॥೧೪॥
--------------
ರನ್ನ
ನವಭೂತಭಾಷೆಯಿಂ ಕುರು ಪುವೇಳ್ದು ತಾಮಡ್ಡಗವಿತೆಯಂ ಮಾಡಿ ಮಹಾ ವ್ಯವಸಾಯಂಗೆಯ್ವ ಮರು ಳ್ಗವಿಗಳ್ ತಾವೇಂ ಗುಣಾಢ್ಯರಂ ಮಸುಳಿಸರೇ॥೪೨॥
--------------
ರನ್ನ
ನಿಜಜೀವಂ ಪರಲೋಕದೊಳ್ ನಿಜಮಹಾಮಾಂಸಂ ಪಿಶಾಚಾಸ್ಯದೊಳ್ ನಿಜರಕ್ತಂ ರಿಪುಕುಕ್ಷಿಯೊಳ್ ನಿಜಶಿರಂ ನಕ್ತಂಚರೀ ಹಸ್ತದೊಳ ನಿಜಕಾಯಂ ಕುರುಭೂಮಿಯೊಳ್ ನೆಲಸೆ ಗಾಂಧಾರೀಜ ದುರ್ಯೋಧನಾ ನುಜ ದುಶ್ಯಾಸನ ಭೀಮ ಭೀಮಗದೆಯಿಂ ಪಂಚತ್ವಮಂ ಪೋರ್ದಿದಯ್॥೫॥
--------------
ರನ್ನ
-->