ಒಟ್ಟು 524 ಕಡೆಗಳಲ್ಲಿ , 1 ಕವಿಗಳು , 174 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ನಿನ್ನ ಮಗಂ ವೃಷಸೇನಂತನ್ನ ಮಗಂ ಸತ್ತನಣ್ಮಿ ಲಕ್ಷಣನುಂ ನೀನೆನ್ನ ಸಂತೈಸುವುದಾಂನಿನ್ನಂ ಸಂತೈಸೆ ಬಂದೆನಂಗಾಧಿಪತೀ॥೧೩॥
ನಿನ್ನೀ ಕೆಳೆಯ ಸುಯೋಧನನನ್ನೋಡದೆ ನುಡಿಯದಪ್ಪಿಕೊಳ್ಳದೆ ಬೆಸನೇನೆನ್ನದೆ ಜೀಯೆನ್ನದೆ ದೇವೆನ್ನದದೇಕುಸಿರದಿರ್ಪೆಯಂಗಾಧಿಪತಿ॥೧೬॥
ನಿಮಗೆ ಪೊಡಮಟ್ಟು ಪೋಪೀಸಮಕಟ್ಟಿಂ ಬಂದೆನಹಿತರೊಳ್ ಸಂಧಿಯನೇಂಸಮಕೊಳಿಸಲೆಂದು ಬಂದೆನೆಸಮರದೊಳೆನಗಜ್ಜ ಪೇಳಿಮಾವುದು ಕಜ್ಜಂ॥೪೫॥
ನೀನಿಲ್ಲದರಸುಗೆಯ್ವೆನೆನೀನಿಲ್ಲದೆ ಬಾಳ್ವೆನೆಂದು ಬಗೆದಪ್ಪೆನೆ ಪೇಳ್ನೀನಿಲ್ಲದಹಿತರೊಳ್ ಸಂಧಾನಂ ಮಾಡುವೆನೆ ಕೂಡೆನಂಗಾಧಿಪತಿ॥೧೨॥
ನೀನುಳ್ಳೊಡುಂಟು ರಾಜ್ಯಂನೀನುಳ್ಳೊಡೆ ಪಟ್ಟಮುಂಟು ಬೆಳ್ಗೊಡೆಯುಂಟಯ್ನೀನುಳ್ಳೊಡುಂಟು ಪೀಳಿಗೆನೀನಿಲ್ಲದಿವೆಲ್ಲಮೊಳವೆ ಅಂಗಾಧಿಪತಿ॥೨೦॥
ನುಡಿಯದೆ ಪೋಗಲೀಯೆನೆಲೆ ಪೋದೊಡೆ ಧೂರ್ಜಟಿಯಾಣೆ ಮೀರಿ ಪೋದೊಡೆ ಕಲಿಭೀಮನಾಣೆ ಧೂರ್ಜಟಿಯಾಣೆಗೆ ನಿಂದು ಭೀಮನೆಂದೊಡೆ ಮುಳಿದಟ್ಟಿ ಕುಟ್ಟಲರಸಂ ಗದೆಗೊಂಡೊಡೆ ಭೂತಕೋಟಿಯುಂಬಡಿಗೊಳೆ ಸಂಜಯಂ ನಯದೆ ಬಗ್ಗಿಸಿದಂ ಫಣಿರಾಜಕೇತುವಂ॥೪೬॥
ನೆಗಪಿ ವರೂಥಮಂ ವಸುಧೆ ನುಂಗಿದುದುಂ ಸಮಪಾದ ಶೋಭೆಯುಂಬಗೆಗೊಳೆ ತನ್ನ ಮುಂ ತೆಗೆದ ದಕ್ಷಿಣ ಮುಷ್ಟಿಯೆ ಕರ್ಣಮೂಲದೊಳ್ಸೊಗಯಿಸೆ ಪಾಳಿಯಂ ನೆರಪದಾಳ್ದನ ಕಜ್ಜಮನೊಕ್ಕು ಸತ್ತರಂನಗುವವೊಲಿರ್ದನಂಗಪತಿ ನೆಮ್ಮಿ ನಿಜೋನ್ನತಕೇತುದಂಡಮಂ॥೧೦॥
ನೆಗಳ್ದಾಭಾರತಮಲ್ಲ ಶಕ್ರಸುತ ಬಾಣಾಘಾತದಿಂ ಭೀಮಭೀಮಗದಾದಂಡವಿಘಾತದಿಂ ಕುರುನೃಪಾನೀಕಂ ಪಡಲ್ವಟ್ಟು ಜೀರಿಗೆಯೋಕ್ಕಲ್ಗೆಣೆಯಾಗಿ ಬಿಳ್ದಭಟರಿಂ ಬಿಳ್ದಶ್ವದಿಂ ಬಿಳ್ದದಂತಿಗಳಿಂದಂ ಜವನುಂಡು ಕಾರಿದವೊಲಾಯ್ತೆತ್ತಂ ಕುರುಕ್ಷೇತ್ರದೊಳ್॥೨॥
ನೆಗಳ್ದೇಕಾದಶರುದ್ರನಿದಿಪುರುಷಂ ದೇವಂ ಲಲಾಟೇಕ್ಷಣಂನಗರಾಜಪ್ರಿಯನಂದನಾ ಪ್ರಿಯತಮಂ ದ್ರೋಣಂಗೆ ಕಾರ್ಯಾರ್ಥದಿಂಮಗನಾದಂ ಸ್ಮರಘಸ್ಮರಂ ದಯೆಯಿನಶ್ವತ್ಥಾಮನೆಂದೆಂದೊಡಾತ್ಮಗತಂ ಸತ್ತ್ವದಿನೇಂ ಪರೀಕ್ಷಿಪನೊ ಪಿಂಗಾಕ್ಷಂ ವಿರೂಪಾಕ್ಷನಂ॥೨೫॥
ನೆನೆ ಚಿತ್ರಾಂಗದನಿಂದಮಂದು ನಿನಗಾದಾಪತ್ತನಾ ಬನ್ನಮಂನೆನೆ ನೀಂ ಗೋಗ್ರಹಣ ಪ್ರಪಂಚದೊಳೆ ಮೆಯ್ವೆತ್ತಿರ್ದುದಂ ನಿನ್ನ ತಮ್ಮನ ಕೆನ್ನೆತ್ತರನೀಂಟುವಲ್ಲಿ ಭಯದಿಂದಳ್ಕುತ್ತೆ ಬೆನ್ನಿತ್ತುದಂನೆನೆ ಪಿಂತಿಕ್ಕಿದ ನಿನ್ನ ಮುನ್ನಿನ ಕವಲ್ಬನ್ನಂಗಳಂ ಕೌರವಾ॥೪೦॥
ನೆಲಕಿರಿವೆನೆಂದು ಬಗೆದಿರೆಚಲಕಿರಿವೆಂ ಪಾಂಡುಸುತರೊಳೀನೆಲನಿದು ಪಾಳ್ನೆಲನೆನಗೆ ದಿನಪಸುತನಂಕೊಲಿಸಿದ ನೆಲನೊಡನೆ ಪುದುವಾಳ್ದಪೆನೇ॥೪೭॥
ಪಗೆ ಚಿತ್ರಿಂಗದನುಯ್ಯಲ್ಗಗನದೊಳುರೆ ತನ್ನ ತಂದ ಬಾಂಧವಕೃತಮಂಬಗೆಯದಹಿತಮನೆ ಬಗೆದಂಪುಗದಿರ್ಕುಮೆ ಪೋಗಿ ಕೌರವಂ ರೌರವಮಂ॥೨೬॥
ಪಡೆಯೆಡೆಯ ಕಡೆಯ ಬಡವರ್ಕುಡೆ ಪಡೆದನೊ ಚಕ್ರವರ್ತಿಯೊಳ್ ತೈಲಪನೊಳ್ಪಡೆದಂ ಮಹಿಮೋನ್ನತಿಯಂಪಡೆದಂ ಕವಿಚಕ್ರವರ್ತಿವೆಸರಂ ರನ್ನಂ
ಪದಘಾತಕ್ಕಗಿದಳ್ಕಿ ಬಳ್ಕಿದುದಧೋಲೋಕಂ ಭಯಂಮರ್ತ್ಯಲೋಕದೊಳಂ ಪೊಣ್ಮಿದುದೂರ್ಧ್ವಲೋಕದೊಳೆ ಮತ್ತಾಯ್ತದ್ಭುತಭ್ರಾಂತಿಯೆಂಬುದನೆಂಬಂತಿರೆಯಂತದೇಂ ಭುವನಂ ಪರ್ಯಾಕುಲಂ ಮಾಡಲಾರ್ತುದೊ ದುರ್ಯೋಧನಭೀಮಸೇನರ ಗದಾಯುದ್ಧಂ ತ್ರಿಧಾಭ್ರಾಂತಿಯಂ॥೧೦॥
ಪದುಳಂ ಕುಳ್ಳಿರ್ದೆಮಗಾಯದ ಮಾತಂ ತಗುಳೆ ಗಳಪಿ ಪೋದಂ ಸಂಧಿರ್ದದಟರೊಳಿರಿದರಿಯಂ ತಪ್ಪದೆ ಕಮ್ಮರಿಯೋಜನೆನಿಸಿದಂ ಬಿಲ್ಲೋಜಂ ॥೧೩॥