ಒಟ್ಟು 1101 ಕಡೆಗಳಲ್ಲಿ , 1 ಕವಿಗಳು , 192 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜನನೀ ಸ್ತನ್ಯಮನುಂಡೆನಾಂ ಬಳಿಕೆ ನೀಂ ಸೋಮಾಮೃತಂ ದಿವ್ಯ ಭೋ ಜನಮೆಂಬಿಂತಿವನುಂಡೆನಾಂ ಬಳಿಕ ನೀಂ ಬಾಲತ್ವದಿಂದೆಲ್ಲಿಯುಂ ವಿನಯೋಲ್ಲಂಘನಮಾದುದಿಲ್ವ ಮರಣಕ್ಕನ್ನಿಂದೆ ನೀಂ ಮುಂಚಿದಯ್ ಮೊನೆಯೊಳ್ ಸೂಳ್ ತಡಮಾಯ್ತಿದೊಂದೆಡೆಯೊಳಂ ಹಾ ವತ್ಸ ದುಶ್ಯಾಸನಾ॥೭॥
--------------
ರನ್ನ
ಜಲದಾನಕ್ರಿಯೆಯಂ ವಾ ಗ್ಜಲದಿಂ ಕೋಪಾಗ್ನಿಯಿಂದೆ ದಹನಕ್ರಿಯೆಯಂ ಕೆಳೆಯಂಗೆ ಮಾಡಿದಯ್ ಕುರು ಕುಲದರ್ಪಣ ಮರೆವುದಿನ್ನಹರ್ಪತಿಸುತನಂ॥೩೨॥
--------------
ರನ್ನ
ಜಲಧಿಗಳೇಳುಂ ಭೂಭೃ ತ್ಕುಲಂಗಳಂ ರಿಪುಗೆ ಸಿರಿಯನೀವಂತೆತ್ತಂ ತಳಮಳವಿಗಳಿಯೆ ಕುರುಕುಲ ತಿಳಕಂ ರಿಪುಗೆಂತುಮೀವನಲ್ಲಂ ಶ್ರೀಯಂ॥೫೬॥
--------------
ರನ್ನ
ಜಳದೊಳ್ ಮೀನಿರ್ಪವೊಲ್ ನೀಂ ಕೊಳದೊಳೆ ಮುಳುಗಿರ್ದಕಟಾ ಕೋಡಸೇಡಿಂ ಗೊಳಗಾದಯ್ ನಿನ್ನ ದುರ್ಯೋಧನವೆಸರ್ಗಿದು ಲಜ್ಜಾಕರಂ ತೋರಿದಯ್ ನಿ ನ್ನಳವಂ ಚಿಃ ಸತ್ತರೇಂ ಪುಟ್ಟರೆ ಪೊರಮಡು ನೀಂ ಕಯ್ದುಗೊಳ್ ಕೌರವೇಂದ್ರಾ ಚಳವಜ್ರಂ ಬಂದನೀಗಳ್ ಕುರುಕುಲಮಥನೋದ್ಭೀಕರಂ ಭೀಮಸೇನಂ॥೧೩॥
--------------
ರನ್ನ
ತನಗೆ ಹತೋಶ್ವತ್ಥಾಮೋ ಯೆನಲಕ್ಕು‌ಮೆ ಯಮಪುರಕ್ಕೆ ಗುರು ಪೋಪೆಡೆಯೊಳ್ ಘನಕುಂಜರ ಎಂದೆಂಗುಮೇ ಜನರಂಜನೆಗರಿಯಲಾದುದಿಲ್ಲಲಮಗನಂ
--------------
ರನ್ನ
ತನಯನೆನಗೆಂದು ಮನ್ನಿಸಿ ತನಗುರುಗಜ್ಜಕ್ಕೆ ಪಾಕಶಾಸನನರ್ಧಾ ಸನಮೇರಿಸಿ ನೀರೇರಿಸಿ ಮನುಜಂಗಂ ಮಾನ್ಯ ಪದವಿಯಂ ಮಾಡಿದನೇ॥೪೦॥
--------------
ರನ್ನ
ತನುಜಾನುಜರ ವಿಯೋಗದ ಮನಃಕ್ಷತಂ ನೋಯಿಸಲ್ಕೆ ನೆರೆಯದೆ ಸಮರಾ ವನಿಜಾತ ಚರಣಕ್ಷತ ಮಿನಿಸು ನೋಯಿಕುಮೆ ವಜ್ರಮನನಪ್ಪೆನ್ನಂ॥೧೯॥
--------------
ರನ್ನ
ತನ್ನೊಡವುಟ್ಟಿದರ್ ಪೆಸರ ನಾಲ್ವರೊಳೊರ್ವರುಮಿಲ್ಲದಿರ್ದೊಡಂ ತನ್ನಸುವಂ ನಿವೇದಿಸುವನಗ್ನಿಗೆ ಧರ್ಮತನೂಜನೆಂದೊಡಾ ನೆನ್ನೊಡವುಟ್ಟಿದರ್ ಪೆಸರ ನೂರ್ವರೊಳೊರ್ವರುಮಿಲ್ಲ ಬಾಳ್ವೆನೆಂ ಬೆನ್ನಳಿಯಾಸೆಯಂ ಬಿಸುಟೆನಿನ್ನವರಾದುದನಾಗದಿರ್ಪೆನೇ॥೯॥
--------------
ರನ್ನ
ತಪನಸುತಂ ಬೇರಾಂ ಬೇ ರೆ ಪೊಲ್ಲದಂ ನುಡಿದನಾವಗಂ ರ ಕ್ಷಿಪ ಕಯ್ದುವನೆನಲಾ ಮರೆ ಯಪಾಂಡವಂ ಬಗೆದು ನೋಳ್ಪೊಡಶ್ವತ್ಥಾಮಂ॥೨೦॥
--------------
ರನ್ನ
ತರಣಿತನಯಾನನೇಂದು ಸ್ಮರಣದೆ ಕಯ್ಗಣ್ಮುವೆನ್ನ ಶೋಕಮಹಾಸಾ ಗರಮಂ ತವೆಪೀರ್ದುದು ಭೀ ಕರಮತ್ಕೋಪಾಗ್ನಿ ಬಾಡಬಾಗ್ನಿ ತೆರದಿಂ॥೩೭॥
--------------
ರನ್ನ
ತರುಣ ಯುವ ವೃದ್ಧ ವಿಕ್ರಮ ಪರಿಣತರುರದಿಕ್ಕಿ ಸಿಂಹಾಸಾಹಸನಿವನುಂ ತರುಣನೆ ಆನುಂ ಯುವನೆನೆ ಸುರಪಗಾನಂದನಂ ಮಹಾಜರ್ಜರನೇ॥೫೯॥
--------------
ರನ್ನ
ತರುಣೋತ್ತುಂಗಶಶಾಂಕಖಂಡಮೆ ಭುಜಂಗೇಂದ್ರನಂ ಕುರಮುನ್ಮೀಲಿತಮಟ್ಟಹಾಸಮೆ ದಳಾನೀಕಂ ವೃಷಂ ಪುಷ್ಪ ಮೀ ಶ್ವರಶೈಲಂ ಫಲಮಾಗೆ ಕೋಮಲಮುಖೀಗೌರೀಲತಾಶ್ಲಿಷ್ಟ ಶಂ ಕರಕಲ್ಪದ್ರುಮನೀಗಭೀಷ್ಟ ಫಲಮಂ ಚಾಳುಕ್ಯನಾರಾಯಣಂ
--------------
ರನ್ನ
ತುಂಗ ಕುರುವಂಶಮಯಶೋ ಭಂಗಂ ಛಿದ್ರಿತಮದೆನ್ನ ದೂಸರಿನಾಯ್ತಾ ನುಂ ಗಡ ಕುರುರಾಜನೆ ನೀ ಮುಂ ಗಡ ಸಂಧಾನವೇಳ್ದಿರೆನಗರಸು ಗಡಾ॥೩॥
--------------
ರನ್ನ
ತುರುಗೋಳೊಳ್ ಪೆಣ್ಬುಯ್ಯಲೊ ಳರಿವೆಸದೊಳ್ ನಂಟನೆಡರೊಳೂರಳಿವಿನೊಳಂ ತರಿಸಂದು ಗಂಡುತನಮನೆ ನೆರಪದವಂ ಗಂಡನಲ್ಲನೆಂತುಂ ಷಂಡಂ॥೨೪॥
--------------
ರನ್ನ
ತುರುವಂ ಕಳಿಸುವ ಕೃಷ್ಣೆಯ ನಿರಿಯಂ ಪಿಡಿದುರ್ಚವೇಳ್ವ ಕೊಳನಂ ಪಿಂದುಂ ಪೆರಗಾಗಿ ಪುಗುವ ದುರ್ನಯ ಮರಿಪವೆ ಕೌರವನ ರಾಜ್ಯದಾಯದ ಕುಂದಂ॥೧೦॥
--------------
ರನ್ನ
-->