ಒಟ್ಟು 524 ಕಡೆಗಳಲ್ಲಿ , 1 ಕವಿಗಳು , 174 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ತುರುವಂ ಕಳಿಸುವ ಕೃಷ್ಣೆಯನಿರಿಯಂ ಪಿಡಿದುರ್ಚವೇಳ್ವ ಕೊಳನಂ ಪಿಂದುಂಪೆರಗಾಗಿ ಪುಗುವ ದುರ್ನಯಮರಿಪವೆ ಕೌರವನ ರಾಜ್ಯದಾಯದ ಕುಂದಂ॥೧೦॥
ತೆರಪಂ ನಿಟ್ಟಿಸಿ ಕುರುಪತಿಬರಸಿಡಿಲೆರಗುವವೊಲೆರಗಿಪೊಯ್ಯಲೊಡಂ ಮೆಯ್ಯರಿದು ಪವನಜನು ಮೇನೆಂದರಿಯದೆ ಮತಿವಿಕಳನಾಗಿ ಮೂರ್ಚ್ಛೆಗೆ ಸಂದಂ॥೨೬॥
ದರಹಾಸಪೇಶಲಂ ದಿಕ್ಕರಿಗಮನಂ ಕನಕಪರ್ವತ ಪ್ರಾಂಶುದಿನೇಶ್ವರಸುತನ ರೂಪು ಚಿತ್ರಂಬರೆದಂತಿರ್ದಪುದು ಚಿತಾತಭಿತ್ತಿಯೊಳೆನ್ನಾ॥೩೪
ದಾಂಟುವೆನೊ ಕುಲನಗಂಗಳನೀಂಟುವೆನೊ ಚತುಸ್ಸಮುದ್ರಮಂ ರವಿ ಶಶಿಯಂಮೀಂಟುವೆನೊ ಗಗನತಳದಿಂಗಂಟಲನೊತ್ತುವೆನೊ ಸಕಲ ದಿಕ್ಪಾಲಕರಂ॥೧೯॥
ದೊಣೆಯಿಂದಂ ತೆಗೆವಾಗಳೊಂದು ತುಡುವಾಗಳ್ ಪತ್ತುಬಾಣಂ ಧನುರ್ಗುಣದಿಂದಂ ಬಿಡುವಲ್ಲಿ ನೂರು ಪರಿವಾಗಳ್ ಸಾಸಿರಂ ವೈರಿಮಾರ್ಗಣಮಂ ಛೇದಿಸುವಲ್ಲಿ ಲಕ್ಕೆ ನಡುವಾಗಳ್ ಕೋಟಿ ಸೇನಾಂಗದೊಳ್ಗಣನಾತೀತಮಿದೆಂದೊಡೇವೊಗಳ್ವುದೋ ಬಿಲ್ಬಲ್ಮೆಯಂ ಪಾರ್ಥನಾ॥೩॥
ದೊರೆ ಯಮಪುತ್ರನಿರ್ದಿರವು ವಾಯುಜನಿರ್ದಿರವಗ್ನಿಪುತ್ರಿಯಿಎರ್ದಿರವಮಳರ್ಕಳಿರ್ದಿರವು ಮತ್ಸ್ಯನಿವಾಸದೊಳೆಲ್ಲಮಂತೆ ಮೆಯ್ಗರೆದಿರೆ ಗಂಡುಗೆಟ್ಟುಬಳೆದೊಟ್ಟು ಬೃಹನ್ನಳೆಯಾಗಿ ಪಾರ್ಥನಿರ್ದಿರವುಮೆನಲ್ಕೆ ಪಾರ್ಥನದು ರಂಭೆಯ ಶಾಪಮೊ ತನ್ನ ಪಾಪಮೋ॥೩೦॥
ಧವಳ ಗಜೇಂದ್ರಮುಂ ಧವಳಚಾಮರಮುಂ ಧವಳಾತಪತ್ರಮುಂಧವಳವಿಲೋಚನೋತ್ಪಲ ವಧೂಜನಮುಂ ಬೆಲಸಷ್ಟದಿಕ್ತಟಂಧವಳಿಸೆ ಕೀರ್ತಿಯಿಂ ಧವಳ ಮಂಗಳಗೇಯದಿನೊಪ್ಪಿ ಬರ್ಪ ಕೌರವಧವಳಂಗೆ ದೇಸಿಗನೆ ಬರ್ಪವೊಲೊರ್ವನೆ ಬರ್ಪುದಾದುದೆ॥೪೧॥
ಧಾರಿಣಿಯೊಳ್ ನಿಜಸಂಯುಗಭಾರಮನಾಂತಿರ್ದ ವೀರಪುಂಗವರಿರೆ ತದ್ಭಾಲಮನಾಂತಭಿಮನ್ಯು ಕುಮಾರಂ ಪುಗೆ ವೀರರಮಣನೆನಿಸಿದನಲ್ತೆ॥೫೮॥
ಧೃತರಾಷ್ಟ್ರಂ ದ್ರುಮಮಾದುದುಶತಶಾಖಂ ಪಂಚಶಾಖಮಾದುದು ಪಾಂಡುಕ್ಷಿತಿರುಹಮಕ್ಷಯಮಾಯ್ತಾದ್ವಿತೀಯಮಾಯ್ತೇಕಶಾಖಮಿವನಿಂದಾದ್ಯಂ॥೨೯॥
ನಡುವುಡಿವನ್ನಮೇರಿ ಬರಿಯೆಲ್ವುಡಿವನ್ನೆಗಮೊತ್ತಿ ಮೆಟ್ಟಿ ಮೆಯ್ಯಡಗಡಗಾಗೆ ಮುನ್ನುರಮನಿರ್ಬಗಿಯಾಗಿರೆ ಪೋಳ್ದು ನೆತ್ತರಂಕುಡಿಕುಡಿದಾರ್ದ ವೈರಿಯುಳಿದನ್ನೆಗಮೆನ್ನಳಲೆಂತು ಪೋಕುಮೆಂದಡಿಗಡಿಗಳ್ತು ತನ್ನಣುಗದಮ್ಮನನೀಕ್ಷಿಸಿದಂ ಸುಯೋಧನಂ॥೪॥
ನಯನದೊಳಮೆರ್ದೆಯೊಳಂ ನಿನ್ನಯ ರೂಪಿರ್ದಪುದು ನಿನ್ನಮಾತಿರ್ದಪುದೆನ್ನಯ ಕಿವಿಯೊಳಗಿನನಂದನವಿಯೋಗಮೆಂತಾದುದರಿಯೆನಂಗಾಧಿಪತೀ॥೨೪॥
ನರಲೋಕಮನನುಭೋಗಿಸಿಸುರಲೋಕದ ಸುಖಮನಾತ್ಮ ವಿಭವದೆ ತಳೆದಾಕುರುಪತಿ ವೈಶಂಪಾಯನಸರಮಂ ಪುಗುವಂತೆ ನಾಗಲೋಕವ ಪೊಕ್ಕಂ॥೧೪॥
ನವಭೂತಭಾಷೆಯಿಂ ಕುರುಪುವೇಳ್ದು ತಾಮಡ್ಡಗವಿತೆಯಂ ಮಾಡಿ ಮಹಾವ್ಯವಸಾಯಂಗೆಯ್ವ ಮರುಳ್ಗವಿಗಳ್ ತಾವೇಂ ಗುಣಾಢ್ಯರಂ ಮಸುಳಿಸರೇ॥೪೨॥
ನಿಜಜೀವಂ ಪರಲೋಕದೊಳ್ ನಿಜಮಹಾಮಾಂಸಂ ಪಿಶಾಚಾಸ್ಯದೊಳ್ನಿಜರಕ್ತಂ ರಿಪುಕುಕ್ಷಿಯೊಳ್ ನಿಜಶಿರಂ ನಕ್ತಂಚರೀ ಹಸ್ತದೊಳನಿಜಕಾಯಂ ಕುರುಭೂಮಿಯೊಳ್ ನೆಲಸೆ ಗಾಂಧಾರೀಜ ದುರ್ಯೋಧನಾನುಜ ದುಶ್ಯಾಸನ ಭೀಮ ಭೀಮಗದೆಯಿಂ ಪಂಚತ್ವಮಂ ಪೋರ್ದಿದಯ್॥೫॥
ನಿಜಮಕುಟಸ್ಫುರನ್ಮಣಿಗಣಚ್ಛವಿಯಿಂ ಸುರಚಾಪಲೀಲೆ ಪಂಕಜವನದೊಳ್ ಮನಂಗೊಳಿಸೆ ತನ್ನಯ ಮೇಗೊಗೆದಿರ್ದ ನೀಲನೀರಜವನದಿಂ ಕರಂಗಿ ಕಮಲಾಕರದಿಂ ಪೊರಮಟ್ಟನಾಗಳಾಭುಜಯುಗತೋರಣಾಯಿತಗದಾಪರಿಘಂ ಫಣಿರಾಜಕೇತನಂ॥೨೭॥