ಒಟ್ಟು 524 ಕಡೆಗಳಲ್ಲಿ , 1 ಕವಿಗಳು , 174 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಕೂಡೆ ವಿರೋಧಿಯಂ ತರಿದು ತದ್ವಶಮಾಂಸದೆ ಭೂತಭೋಜನಂಮಾಡದೆ ವೈರಿವಾರವನಿತಾವದನಾಂಬುರುಹಕ್ಕೆ ಬೆಳರ್ಮಾಡದ ಬಂಧುಶೋಕದೊಳೆ ಪೊರ್ದಿದ ಬಂಧುಜನಕ್ಕೆ ಸಂತಸಂಮಾಡದೆ ಸಂಧಿಮಾಡುವನೆ ಪಾಂಡವರೊಳ್ ಫಣಿರಾಜಕೇತನಂ॥೪೯॥
ಕೃತಿ ನೆಗಳ್ದ ಗದಾಯುದ್ಧಂಕೃತಿಗೀಶಂ ಚಕ್ರವರ್ತಿ ಸಾಹಸಭೀಮಂಕೃತಿಯಂ ವಿರಚಿಸಿದನಲಂಕೃತಿಯಂ ಕವಿರತ್ನನೆಂದೊಡೇವಣ್ಣಿಪುದೋ
ಕೆಲರಂ ಕುರಿದರಿದರಿದಂಕೆಲಂಬರಂ ಸಂಧಿಸಂಧಿಯಂ ಪರಿಯೆಚ್ಚಂಕೆಲರಂ ದೆಸೆವಲಿಗೆಯ್ದಂಕೆಲರಂ ಭುಜಬಲದಿನರಿದು ಶಿಲೆಯೊಳ್ ಪೊಯ್ದಂ॥೧೦॥
ಕೆಲರಂ ನುಣ್ಣನೆ ನೊಣೆದಂಕೆಲರಂ ಪಿಡಿದಡಸಿ ನುಂಗಿದಂ ಕುರುಕುಲರಂಕೆಲರಂ ಸೌಳನೆ ಸೀಳ್ದಂಕೆಲರಂ ಮಾರುತಿ ಜವಂಗೆ ಬಾಣಸುಗೆಯ್ದಂ॥೯॥
ಕೆಳೆಯಂಗಾಯ್ತಸುಮೋಕ್ಷಮಾಗದೆನಗಂ ಬಾಷ್ಮಾಂಬು ಮೋಕ್ಷಂ ಧರಾತಳಮಂ ಕೊಟ್ಟನಿವಂ ಜಳಾಂಜಳಿಯುಮಂ ನಾಂ ಕೊಟ್ಟೆನಲ್ಲನ್ಯಮಂಡಳಮಂ ಸುಟ್ಟನಿವಂ ಪ್ರತಾಪ ಶಿಖಿಯಿಂದಾನೀತನಂ ಸತ್ಕ್ರಿಯಾನಳನಿಂ ಸುಟ್ಟೆನುಮಿಲ್ಲ ಮತ್ಪ್ರಿಯತಮಂ ಕರ್ಣಂಗಿದೇಂ ಕೂರ್ತೆನೋ॥೩೧॥
ಖಂಡಿತಮೆನಿಪ್ಪ ಪರಮಹಿಮಂಡಲಧವಳಾತಪತ್ರಸಂಪದ಼ಮೆನಗೇಭಂಡಮದನೊಲ್ವೆನೊಲ್ಲೆನಖಂಡಿತಮಭಿಮಾನಮದನೆ ಬಲ್ವಿಡಿವಿಡಿವೆಂ॥೫೩॥
ಗಗನಂ ಬಿಳ್ದುದೊ ಮೇಣ್ ನೆಲಕ್ಕೆ ನೆಲನೇಂಪತ್ತಿತ್ತೊ ಮೇಣಿಲ್ಲಿ ಪನ್ನಗವೃಂದಾರಕರೆಂದುಮಿರ್ಪ ಬಿಲನೋ ಮೇಣಿಲ್ಲಿ ದಿಙ್ನಾಗರಾಜಗೆ ಮೆಯ್ಗರ್ಚಿಕೊಳಲ್ಕಜ ಸಮೆದ ತೋಯೋದ್ದೇಶಮೋ ಸಂದೆಯಂಬಗೆಗಾದತ್ತೆನಿಸಿರ್ದುದೇಂ ಪಿರಿದೊ ವೈಶಂಪಾಯನಾಬ್ಜಾಕರಂ॥೧೧॥
ಗುಣಮನೆ ತೋರ್ಪಂ ದೋಷದಗುಣಂಗಳನೆ ನೆಗಳ್ದು ತೋರ್ಪ ದುರ್ಜನನುಮದೇಂಗುಣಗಣನೆಗೆ ತೋರ್ಪಂ ಕೃತಿಗುಣದೋಷ ಪರೀಕ್ಷೆಗಾರನಾರ್ ಬಾರಿಪರೋ
ಗುರುದೀಕ್ಷಾವಿಧಿಗಳ್ಗೆ ಮಂತ್ರಿ ಹಿತಕಾರ್ಯಾಳೋಚನಕ್ಕಾಳ್ದನುರ್ವರೆಯ ಕಾವ ಗುಣಕ್ಕೆ ನರ್ಮಸಚಿವಂ ಕ್ರೀರಸಕ್ಕಾನೆಯಾಳ್ಗುರುಭಾರಕ್ಕಿರಿವಾಳ್ ರಣಕ್ಕೆ ತುಳಿಲಾಳ್ ಕಟ್ಟಾಯದೊಳ್ ಮೇಳದಾಳ್ಪರಿಹಾಸಕ್ಕೆನಿಸಿರ್ದನೆಂತು ಮರೆವಂ ದುರ್ಯೋಧನಂ ಕರ್ಣನಂ॥೩೫॥
ಗುರುಪಣ್ಣಿದ ಚಕ್ರವ್ಯೂಹರಚನೆ ಪೆರರ್ಗರಿದು ಪುಗಲಿದಂ ಪೊಕ್ಕು ರಣಾಜಿರದೊಳರಿನೃಪರನಿಕ್ಕೀದನರಸುತ ನಿನ್ನೊರೆಗೆ ದೊರೆಗೆ ಗಂಡರುಮೋಳರೇ॥೫೫॥
ಗುರುವಂ ಪ್ರೋ ಜ್ಝಿತಚಾಪನಂ ಪುಸಿದುಕೊಂದಾ ಭೀರಮಂ ಭೀಷ್ಮರಂಶರಶಯ್ಯಾಗತರಂ ಕರುತ್ತು ಗುರಿಯೆಚ್ಚಾ ಪೊಚ್ಚರಂ ಕರ್ಣನಂವಿರಥಜ್ಯಾಯುಧನೆನ್ನದೆಚ್ಚು ತಲೆಗೊಂಡಾ ಶೌರ್ಯಮಂ ಪಾಂಡುಪುತ್ರರೆ ಬಲ್ಲರ್ ಮೆರೆಯಲ್ಕೆ ಸಾಹಸಧನಂ ಧುರ್ಯೋಧನಂ ಬಲ್ಲನೇ॥೩೩॥
ಗುರುವಿನ ನೆತ್ತರಂ ಕುಡಿವೆನಪ್ಪೊಡೆ ದ್ವಿಜವಂಶಜಂ ನಿಜಾವರಜನ ನೆತ್ತರಂ ಕುಡಿವೆನಪ್ಪೊಡೆ ಭೀಮನೆ ಪೀರ್ದನೆಯ್ದೆ ಭೀಷ್ಮರ ಬಿಸುನೆತ್ತರಂ ಕುಡಿವೊಡಿನ್ನುಮೊಳಂ ಕುರುರಾಜ ನಿನ್ನ ನೆತ್ತರ ಸವಿನೋಳ್ಪೊಡಾಂ ಬಯಸಿ ಬಂದಪೆನೆಂದದೊಂದು ಪುಲ್ಮರುಳ್॥೪೩॥
ಗೆಲಲಾರ್ಪೊಡಿರಿದು ಗೆಲ್ವುದುಗೆಲಲಾರದೊಡಣ್ಮಿ ಸಾವುದಾಳ್ಗಿನಿತೆ ಗುಣಂಗೆಲಲುಂ ಸಾಯಲುಮಾರದೆತೊಲಗಿದೊಡೆ ನೆಗಳ್ತೆ ತೊಲಗದಿರ್ಕುಮೆ ಮೈಯ್ಯಂ॥೨೧॥
ಚರಮಚರಮೆಂಬ ಜಗದಂತರದೊಳ್ ಖಳನೆಲ್ಲಿ ಪೊಕ್ಕೊಡಂ ತದ್ಭುಜಪಂಜರದೊಳ್ ಪೊಕ್ಕೊಡೆ ಹರಿಹರಹಿರಣ್ಯಗರ್ಭರ್ಕಳಾಂತೊಡಂ ಕೊಲ್ಲದಿರೆಂ॥೨೨॥
ಚಾತುರ್ವಣ್ ರ್ಣ್ಯದೊಳಂ ದ್ವಿಜಜಾತಿಗೆ ದರ್ಭಾಧಿಕಾರಮಲ್ಲದೆ ವಂಶೋದ್ಭೂತ ನೃಪೋಚಿತಮರಿಯಂಘಾತಿಪ ಶಸ್ತ್ರಾಸ್ತ್ರಮವರ್ಗೆ ಜಾತಿವಿರುದ್ಧಂ॥೧೭॥