ಒಟ್ಟು 524 ಕಡೆಗಳಲ್ಲಿ , 1 ಕವಿಗಳು , 174 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಓಜಂ ಗಡ ಚಿಃ ಭಾರದ್ವಾಜಂ ಗಡ ಬಿಲ್ಲ ಬಲ್ಮೆಯುಂ ಕುಲಮುಂ ನಿರ್ವ್ಯಾಜಂ ಮಸುಳ್ದುವು ಪಾಂಡುತನೂಜರ ಪಕ್ಕದೊಳೆ ಪಾಳಿಗಿಡೆ ನೆಗ಼ಳ್ದುದರಿಂ॥೧೮॥
ಕದನದೊಳುಣ್ಮಿದೊಳ್ಮಿದುಳ ಕರ್ದಮದೊಳ್ ಜಗುಳ್ದಂಘ್ರಿ ಜಾರಿ ಪೋಪುದುಮೊಡನಿರ್ದ ಸಂಜಯನಿಳೇಶ್ವರನಂ ಪಿಡಿದೂರುಭಂಗಮಾಗದೆ ವಲಮೆಂದೊಡಾಗದೆನೆ ಪುಲ್ಮರುಳೊಂದೆಡೆವೋಗಿ ಭೀಮ ಕೋಪದೆ ನಿನಗೂರುಭಂಗಭಯಮಾಗದೆ ಪೋಕುಮೆ ಕೌರವೇಶ್ವರಾ॥೪೪॥
ಕನ್ನಡಮೆರಡರುನೂರರಕನ್ನಡಮಾತಿರುಳ ಕನ್ನಡಂ ಮಧುರಮ್ಯೋತ್ಪನ್ನಂ ಸಂಸ್ಕೃತಮೆನೆ ಸಂಪನ್ನಂ ನೆಗಳ್ದುಭಯ ಕವಿತೆಯೊಳ್ ಕವಿರನ್ನಂ
ಕರವಾಳಂ ಮಸೆವಂದದೆಮರವಾಳಂ ಮಸೆಯೆ ಕೂರಿತಕ್ಕುಮೆ ಕಲಿಯಂಪೊರೆದೊಡೆ ಕೂರ್ಪಂ ತೋರ್ಪಂತಿರೆ ತೋರ್ಕುಮೆ ಪಂದೆ ಪತಿಗೆ ಸಂಗರದೆಡೆಯೊಳ್॥೨೩॥
ಕರಿಯಂ ನುಂಗಿ ಕಳಿಂಗನಂ ನೊಣೆದ ದರ್ಪಕ್ಕೊಂದುಗೊಳ್ ಮತ್ಸಹೋದರರಂ ಕೋಪದೆ ತಿಂದುದರ್ಕೆರಡುಗೊಳ್ ದುಶ್ಯಾಸನೋರುಸ್ಸ್ಥಳಕ್ಷರದಸ್ರಾಂಬುವನಾರ್ದು ಪೀರ್ದ ಮುಳಿಸಿಂಗಂ ಮೂರುಗೊಳ್ಳೆಂದು ಮಚ್ಚರದಿಂದೋವದೆ ಪೊಯ್ದನೆತ್ತಿಗದೆಯಂ ದುರ್ಯೋಧನಂ ಭೀಮನಂ॥೧೮॥
ಕಲಿಗಂ ಶಂಕೆಯೆ ಚಾಗಿಗಂ ಬೆರಗೆ ಮೇಣ್ ಕಟ್ಟಾಳ್ ನೆರಂಬಾರ್ವನೇಕುಲಜಂಗಂ ಮರುವಾಳೆ ಸಜ್ಜನಿಕೆಗಂ ಕಲ್ವೋಜೆಯೇ ಧರ್ಮಿಗಂಕೊಲೆಯೇ ಮಂತ್ರಿಗಮಿಚ್ಚೆಕಾರತನಮೇ ತಕ್ಕಂ ಪಿಸುಣ್ಬೇಳ್ವನೇಚಲಮಂ ಗಂಡುಮನಪ್ಪುಕೆಯ್ವೆನಗಮಾ ಕೌಂತೇಯರೊಳ್ ಸಂಧಿಯೇ॥೪೬॥
ಕಳಶಜನನಿಂತು ಕೊಲಿಸಿದಖಳನೆ ಗಡಂ ಧರ್ಮನಂದನಂ ಕ್ರೂರದಿನಂಗಳ ಪೆಸರಂ ಮರೆಯಿಸಿ ಮಂಗಳವಾರಂ ಕಡ್ಡವಾರಮೆಂಬಂತೆ ವಲಂ॥೨೬॥
ಕಸವರಮಂ ದ್ವಿಜದಾನಕೆಪೂಸಜೌವನಮಂ ಸ್ವದಾರ ಸಂತೋಷಕೆ ನಿನ್ನಸುವಂ ಪತಿಕಾರ್ಯಕೆ ವೆಚ್ಚಿಸಿದಯ್ ನಿನ್ನನ್ನನಾವನಂಗಾಧಿಪತಿ॥೨೨॥
ಕಾದದಿರೆನಜ್ಜ ಪಾಂಡವರಾದರ್ ಮೇಣಿಂದಿನೊಂದೆ ಸಮರದೊಳಾಂ ಮೇಣಾದೆನದರಿಂದೆ ಪಾಂಡವರ್ಗಾದುದು ಮೇಣಾಯ್ತು ಕೌರವಂಗವನಿತಳಂ॥೫೫॥
ಕಾರ್ಯಸಖಂ ಶಕುನಿ ಗಡಾಶೌರ್ಯಸಖಂ ಸೂತಜಂ ಗಡಾ ಭೀಷ್ಮ ಶರಾಚಾರ್ಯರ ನುಡಿ ಕಯ್ಪೆ ಗಡಮಕಾರ್ಯಂಗಹಿಕೇತನಂಗೆ ವಿಧಿವಿಳಸನದಿಂ॥೨೭॥
ಕಿರಿಕಿರಿದೆ ಮೆಟ್ಟಿ ಮುಂದಂಕಿರಿಕಿರಿದನೆ ಸಾರ್ಚಿ ತಮ್ಮಗದೆಗಳನಾಗಳ್ಕಿರಿಕಿರಿದೆ ತಿರುಪಿ ಮಾಣದೆಕಿರಿಕಿರಿದನೆ ತೂಂಕಿ ತೂಂಕಿ ನೂಂಕಿದರೆನಸು॥೭॥
ಕುಪಿತಮರುತ್ಸುತರವಕಳ್ಕಿ ಪರಮೇಶ್ವರನಿಕರಸಂಭ್ರಮೋಲ್ಲಹರಿಕೆ ಭಾವಿಪೊಡೆ ಜನಕ್ಕೆ ಕೊಳಂ ಕಿಳ್ತು ಪಾರುವಂತಾಯ್ತು ಕಮಲಜಾಂಡಂಬರೆಗಂ॥೨೦॥
ಕುರುಕುಲಕದಳೀಕಾನನಕರಿಕಳಭಂ ಶತ್ರುಶಲಭಸಂಪಾತನವಿಸ್ಫುರಿತಪ್ರದೀಪನಾಕುರುಧರೆಯೊಳ್ ಕುರುಪತಿಯನರಸಿದಂ ಪವನಸುತಂ॥೨೭॥
ಕುರುಪತಿ ನಿನ್ನ ಪೊಕ್ಕತೊರೆಗಳ್ ಮೊದಲಾಗಿಯೆ ಬತ್ತುತಿರ್ಪುವೀದೊರೆಯ ದುರಾತ್ಮನಂ ಖಳನನಾನೊಳಕೊಂಡೊಡೆ ಭೀಮನೀ ಸರೋವರಮುಮನೆಮ್ಮುಮಂ ಕದಡುಗುಂ ಪುಗದಿರ್ ತೊಲಗೆಂದು ಬಗ್ಗಿಪಂತಿರೆ ನೆಗೆದತ್ತನೇಕಬಕಕೋಕಮರಾಳವಿಹಂಗಮಸ್ವನಂ॥೧೨॥
ಕುರುರಾಜಂ ವಿದ್ಯಾಧರಕರಣದೆ ನೆಗೆದಂಬರಕ್ಕೆ ಗದೆಯಂ ಕ್ರಮದಿಂತಿರುಪೆ ಧರಾಚಕ್ರಂ ಕೋವರಚಕ್ರಂ ತಿರಿವ ತೆರದಿ ತಿರಿದತ್ತೆನಸುಂ॥೨೪॥