ಒಟ್ಟು 74 ಕಡೆಗಳಲ್ಲಿ , 1 ಕವಿಗಳು , 63 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನುಜಾನುಜರ ವಿಯೋಗದ ಮನಃಕ್ಷತಂ ನೋಯಿಸಲ್ಕೆ ನೆರೆಯದೆ ಸಮರಾ ವನಿಜಾತ ಚರಣಕ್ಷತ ಮಿನಿಸು ನೋಯಿಕುಮೆ ವಜ್ರಮನನಪ್ಪೆನ್ನಂ॥೧೯॥
--------------
ರನ್ನ
ತನ್ನೊಡವುಟ್ಟಿದರ್ ಪೆಸರ ನಾಲ್ವರೊಳೊರ್ವರುಮಿಲ್ಲದಿರ್ದೊಡಂ ತನ್ನಸುವಂ ನಿವೇದಿಸುವನಗ್ನಿಗೆ ಧರ್ಮತನೂಜನೆಂದೊಡಾ ನೆನ್ನೊಡವುಟ್ಟಿದರ್ ಪೆಸರ ನೂರ್ವರೊಳೊರ್ವರುಮಿಲ್ಲ ಬಾಳ್ವೆನೆಂ ಬೆನ್ನಳಿಯಾಸೆಯಂ ಬಿಸುಟೆನಿನ್ನವರಾದುದನಾಗದಿರ್ಪೆನೇ॥೯॥
--------------
ರನ್ನ
ತಪನಸುತಂ ಬೇರಾಂ ಬೇ ರೆ ಪೊಲ್ಲದಂ ನುಡಿದನಾವಗಂ ರ ಕ್ಷಿಪ ಕಯ್ದುವನೆನಲಾ ಮರೆ ಯಪಾಂಡವಂ ಬಗೆದು ನೋಳ್ಪೊಡಶ್ವತ್ಥಾಮಂ॥೨೦॥
--------------
ರನ್ನ
ತರುಣೋತ್ತುಂಗಶಶಾಂಕಖಂಡಮೆ ಭುಜಂಗೇಂದ್ರನಂ ಕುರಮುನ್ಮೀಲಿತಮಟ್ಟಹಾಸಮೆ ದಳಾನೀಕಂ ವೃಷಂ ಪುಷ್ಪ ಮೀ ಶ್ವರಶೈಲಂ ಫಲಮಾಗೆ ಕೋಮಲಮುಖೀಗೌರೀಲತಾಶ್ಲಿಷ್ಟ ಶಂ ಕರಕಲ್ಪದ್ರುಮನೀಗಭೀಷ್ಟ ಫಲಮಂ ಚಾಳುಕ್ಯನಾರಾಯಣಂ
--------------
ರನ್ನ
ತುಂಗ ಕುರುವಂಶಮಯಶೋ ಭಂಗಂ ಛಿದ್ರಿತಮದೆನ್ನ ದೂಸರಿನಾಯ್ತಾ ನುಂ ಗಡ ಕುರುರಾಜನೆ ನೀ ಮುಂ ಗಡ ಸಂಧಾನವೇಳ್ದಿರೆನಗರಸು ಗಡಾ॥೩॥
--------------
ರನ್ನ
ತುರುವಂ ಕಳಿಸುವ ಕೃಷ್ಣೆಯ ನಿರಿಯಂ ಪಿಡಿದುರ್ಚವೇಳ್ವ ಕೊಳನಂ ಪಿಂದುಂ ಪೆರಗಾಗಿ ಪುಗುವ ದುರ್ನಯ ಮರಿಪವೆ ಕೌರವನ ರಾಜ್ಯದಾಯದ ಕುಂದಂ॥೧೦॥
--------------
ರನ್ನ
ದರಹಾಸಪೇಶಲಂ ದಿ ಕ್ಕರಿಗಮನಂ ಕನಕಪರ್ವತ ಪ್ರಾಂಶುದಿನೇ ಶ್ವರಸುತನ ರೂಪು ಚಿತ್ರಂ ಬರೆದಂತಿರ್ದಪುದು ಚಿತಾತಭಿತ್ತಿಯೊಳೆನ್ನಾ॥೩೪
--------------
ರನ್ನ
ಧೃತರಾಷ್ಟ್ರಂ ದ್ರುಮಮಾದುದು ಶತಶಾಖಂ ಪಂಚಶಾಖಮಾದುದು ಪಾಂಡು ಕ್ಷಿತಿರುಹಮಕ್ಷಯಮಾಯ್ತಾ ದ್ವಿತೀಯಮಾಯ್ತೇಕಶಾಖಮಿವನಿಂದಾದ್ಯಂ॥೨೯॥
--------------
ರನ್ನ
ನಿಜಮಕುಟಸ್ಫುರನ್ಮಣಿಗಣಚ್ಛವಿಯಿಂ ಸುರಚಾಪಲೀಲೆ ಪಂ ಕಜವನದೊಳ್ ಮನಂಗೊಳಿಸೆ ತನ್ನಯ ಮೇಗೊಗೆದಿರ್ದ ನೀಲನೀ ರಜವನದಿಂ ಕರಂಗಿ ಕಮಲಾಕರದಿಂ ಪೊರಮಟ್ಟನಾಗಳಾ ಭುಜಯುಗತೋರಣಾಯಿತಗದಾಪರಿಘಂ ಫಣಿರಾಜಕೇತನಂ॥೨೭॥
--------------
ರನ್ನ
ನೀನುಳ್ಳೊಡುಂಟು ರಾಜ್ಯಂ ನೀನುಳ್ಳೊಡೆ ಪಟ್ಟಮುಂಟು ಬೆಳ್ಗೊಡೆಯುಂಟಯ್ ನೀನುಳ್ಳೊಡುಂಟು ಪೀಳಿಗೆ ನೀನಿಲ್ಲದಿವೆಲ್ಲಮೊಳವೆ ಅಂಗಾಧಿಪತಿ॥೨೦॥
--------------
ರನ್ನ
ನುಡಿಯದೆ ಪೋಗಲೀಯೆನೆಲೆ ಪೋದೊಡೆ ಧೂರ್ಜಟಿಯಾಣೆ ಮೀರಿ ಪೋ ದೊಡೆ ಕಲಿಭೀಮನಾಣೆ ಧೂರ್ಜಟಿಯಾಣೆಗೆ ನಿಂದು ಭೀಮನೆಂ ದೊಡೆ ಮುಳಿದಟ್ಟಿ ಕುಟ್ಟಲರಸಂ ಗದೆಗೊಂಡೊಡೆ ಭೂತಕೋಟಿಯುಂ ಬಡಿಗೊಳೆ ಸಂಜಯಂ ನಯದೆ ಬಗ್ಗಿಸಿದಂ ಫಣಿರಾಜಕೇತುವಂ॥೪೬॥
--------------
ರನ್ನ
ನೆಗಳ್ದುದು ರಾಮಾಯಣಮುಂ ನೆಗಳ್ದುದು ಭಾರತಮುಮಾಮಹಾ ಕವಿಗಳಿನಾ ನೆಗಳ್ದರ್ ವ್ಯಾಸರ್ ವಾಲ್ಮೀ ಕಿಗಳೆನೆ ನೆಗಳ್ದುಭಯ ಕವಿಗಳೆಮಗಭಿವಂದ್ಯರ್
--------------
ರನ್ನ
ನೆಗಳ್ದೇಕಾದಶರುದ್ರನಿದಿಪುರುಷಂ ದೇವಂ ಲಲಾಟೇಕ್ಷಣಂ ನಗರಾಜಪ್ರಿಯನಂದನಾ ಪ್ರಿಯತಮಂ ದ್ರೋಣಂಗೆ ಕಾರ್ಯಾರ್ಥದಿಂ ಮಗನಾದಂ ಸ್ಮರಘಸ್ಮರಂ ದಯೆಯಿನಶ್ವತ್ಥಾಮನೆಂದೆಂದೊಡಾ ತ್ಮಗತಂ ಸತ್ತ್ವದಿನೇಂ ಪರೀಕ್ಷಿಪನೊ ಪಿಂಗಾಕ್ಷಂ ವಿರೂಪಾಕ್ಷನಂ॥೨೫॥
--------------
ರನ್ನ
ನೆನೆ ಚಿತ್ರಾಂಗದನಿಂದಮಂದು ನಿನಗಾದಾಪತ್ತನಾ ಬನ್ನಮಂ ನೆನೆ ನೀಂ ಗೋಗ್ರಹಣ ಪ್ರಪಂಚದೊಳೆ ಮೆಯ್ವೆತ್ತಿರ್ದುದಂ ನಿನ್ನ ತ ಮ್ಮನ ಕೆನ್ನೆತ್ತರನೀಂಟುವಲ್ಲಿ ಭಯದಿಂದಳ್ಕುತ್ತೆ ಬೆನ್ನಿತ್ತುದಂ ನೆನೆ ಪಿಂತಿಕ್ಕಿದ ನಿನ್ನ ಮುನ್ನಿನ ಕವಲ್ಬನ್ನಂಗಳಂ ಕೌರವಾ॥೪೦॥
--------------
ರನ್ನ
ಪದಘಾತಕ್ಕಗಿದಳ್ಕಿ ಬಳ್ಕಿದುದಧೋಲೋಕಂ ಭಯಂಮರ್ತ್ಯಲೋ ಕದೊಳಂ ಪೊಣ್ಮಿದುದೂರ್ಧ್ವಲೋಕದೊಳೆ ಮತ್ತಾಯ್ತದ್ಭುತಭ್ರಾಂತಿಯೆಂ ಬುದನೆಂಬಂತಿರೆಯಂತದೇಂ ಭುವನಂ ಪರ್ಯಾಕುಲಂ ಮಾಡಲಾ ರ್ತುದೊ ದುರ್ಯೋಧನಭೀಮಸೇನರ ಗದಾಯುದ್ಧಂ ತ್ರಿಧಾಭ್ರಾಂತಿಯಂ॥೧೦॥
--------------
ರನ್ನ
-->