ಒಟ್ಟು 72 ಕಡೆಗಳಲ್ಲಿ , 1 ಕವಿಗಳು , 56 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೊಣೆಯಿಂದಂ ತೆಗೆವಾಗಳೊಂದು ತುಡುವಾಗಳ್ ಪತ್ತುಬಾಣಂ ಧನು ರ್ಗುಣದಿಂದಂ ಬಿಡುವಲ್ಲಿ ನೂರು ಪರಿವಾಗಳ್ ಸಾಸಿರಂ ವೈರಿಮಾ ರ್ಗಣಮಂ ಛೇದಿಸುವಲ್ಲಿ ಲಕ್ಕೆ ನಡುವಾಗಳ್ ಕೋಟಿ ಸೇನಾಂಗದೊಳ್ ಗಣನಾತೀತಮಿದೆಂದೊಡೇವೊಗಳ್ವುದೋ ಬಿಲ್ಬಲ್ಮೆಯಂ ಪಾರ್ಥನಾ॥೩॥
--------------
ರನ್ನ
ದೊರೆ ಯಮಪುತ್ರನಿರ್ದಿರವು ವಾಯುಜನಿರ್ದಿರವಗ್ನಿಪುತ್ರಿಯಿಎ ರ್ದಿರವಮಳರ್ಕಳಿರ್ದಿರವು ಮತ್ಸ್ಯನಿವಾಸದೊಳೆಲ್ಲ‌ಮಂತೆ ಮೆ ಯ್ಗರೆದಿರೆ ಗಂಡುಗೆಟ್ಟುಬಳೆದೊಟ್ಟು ಬೃಹನ್ನಳೆಯಾಗಿ ಪಾರ್ಥನಿ ರ್ದಿರವುಮೆನಲ್ಕೆ ಪಾರ್ಥನದು ರಂಭೆಯ ಶಾಪಮೊ ತನ್ನ ಪಾಪಮೋ॥೩೦॥
--------------
ರನ್ನ
ಧೃತರಾಷ್ಟ್ರಂ ದ್ರುಮಮಾದುದು ಶತಶಾಖಂ ಪಂಚಶಾಖಮಾದುದು ಪಾಂಡು ಕ್ಷಿತಿರುಹಮಕ್ಷಯಮಾಯ್ತಾ ದ್ವಿತೀಯಮಾಯ್ತೇಕಶಾಖಮಿವನಿಂದಾದ್ಯಂ॥೨೯॥
--------------
ರನ್ನ
ನರಲೋಕ‌ಮನನುಭೋಗಿಸಿ ಸುರಲೋಕದ ಸುಖಮನಾತ್ಮ ವಿಭವದೆ ತಳೆದಾ ಕುರುಪತಿ ವೈಶಂಪಾಯನ ಸರಮಂ ಪುಗುವಂತೆ ನಾಗಲೋಕವ ಪೊಕ್ಕಂ॥೧೪॥
--------------
ರನ್ನ
ನೆಗಪಿ ವರೂಥಮಂ ವಸುಧೆ ನುಂಗಿದುದುಂ ಸಮಪಾದ ಶೋಭೆಯುಂ ಬಗೆಗೊಳೆ ತನ್ನ ಮುಂ ತೆಗೆದ ದಕ್ಷಿಣ ಮುಷ್ಟಿಯೆ ಕರ್ಣಮೂಲದೊಳ್ ಸೊಗಯಿಸೆ ಪಾಳಿಯಂ ನೆರಪದಾಳ್ದನ ಕಜ್ಜಮನೊಕ್ಕು ಸತ್ತರಂ ನಗುವವೊಲಿರ್ದನಂಗಪತಿ ನೆಮ್ಮಿ ನಿಜೋನ್ನತಕೇತುದಂಡಮಂ॥೧೦॥
--------------
ರನ್ನ
ನೆಗಳ್ದಾಭಾರತಮಲ್ಲ ಶಕ್ರಸುತ ಬಾಣಾಘಾತದಿಂ ಭೀಮಭೀ ಮಗದಾದಂಡವಿಘಾತದಿಂ ಕುರುನೃಪಾನೀಕಂ ಪಡಲ್ವಟ್ಟು ಜೀ ರಿಗೆಯೋಕ್ಕಲ್ಗೆಣೆಯಾಗಿ ಬಿಳ್ದಭಟರಿಂ ಬಿಳ್ದಶ್ವದಿಂ ಬಿಳ್ದದಂ ತಿಗಳಿಂದಂ ಜವನುಂಡು ಕಾರಿದವೊಲಾಯ್ತೆತ್ತಂ ಕುರುಕ್ಷೇತ್ರದೊಳ್॥೨॥
--------------
ರನ್ನ
ನೆಗಳ್ದೇಕಾದಶರುದ್ರನಿದಿಪುರುಷಂ ದೇವಂ ಲಲಾಟೇಕ್ಷಣಂ ನಗರಾಜಪ್ರಿಯನಂದನಾ ಪ್ರಿಯತಮಂ ದ್ರೋಣಂಗೆ ಕಾರ್ಯಾರ್ಥದಿಂ ಮಗನಾದಂ ಸ್ಮರಘಸ್ಮರಂ ದಯೆಯಿನಶ್ವತ್ಥಾಮನೆಂದೆಂದೊಡಾ ತ್ಮಗತಂ ಸತ್ತ್ವದಿನೇಂ ಪರೀಕ್ಷಿಪನೊ ಪಿಂಗಾಕ್ಷಂ ವಿರೂಪಾಕ್ಷನಂ॥೨೫॥
--------------
ರನ್ನ
ನೆಲಕಿರಿವೆನೆಂದು ಬಗೆದಿರೆ ಚಲಕಿರಿವೆಂ ಪಾಂಡುಸುತರೊಳೀನೆಲನಿದು ಪಾ ಳ್ನೆಲನೆನಗೆ ದಿನಪಸುತನಂ ಕೊಲಿಸಿದ ನೆಲನೊಡನೆ ಪುದುವಾಳ್ದಪೆನೇ॥೪೭॥
--------------
ರನ್ನ
ಪವನಂಗೆ ಪುಟ್ಟಿದಂ ರಾ ಘವನಣುಗಾಳ್ ತ್ರಿಣಯನಾಂಶಮೆನಿಪಣುವಂ ಪಾಂ ಡವಕೇತುದಂಡದೊಳ್ ನೆಲ ಸುವುದಾವಗ್ಗಳಿಕೆ ಕಪಿಗೆ ಚಪಲತೆ ಸಹಜಂ॥೪೧॥
--------------
ರನ್ನ
ಪಸೆಯೊಳ್ ಪಸುರ್ವಂದರೊಳ ಗ್ನಿಸಾಕ್ಷಿಯೊಳ್ ಕೊಂಡ ಪಾಂಡುಪತಿಯಿರೆ ದೋಷಾ ವಸಥರ್ ಪಾದರದಿಂ ಜನಿ ಯಿಸಿದರ್ ಪಾಂಡವರೊಳಲ್ಲದೆಮ್ಮೊಳಮುಂಟೆ॥೩೮॥
--------------
ರನ್ನ
ಪುಟ್ಟಿದ ನೂರ್ವರುಮೆನ್ನೊಡ ವುಟ್ಟಿದ ನೂರ್ವರುಮಿದಿರ್ಚಿ ಸತ್ತೊಡೆ ಕೋಪಂ ಪುಟ್ಟಿ ಪೊದಳ್ದುದು ಸತ್ತರ್ ಪುಟ್ಟರೆ ಪಾಂಡವರೊಳಿರಿದು ಛಲಮನೆ ಮೆರೆವೆಂ॥೫೪॥
--------------
ರನ್ನ
ಬಂದಂ ಬಕಾಂತಕಂ ಪೋ ಕೊಂದಂಬಕವೆಸರ್ಗೆ ಮುನಿದು ನಮ್ಮುಮನಿನ್ನೆಂ ಬಂದದೊಳೆ ಪಾರಿಪೋದುವು ನಿಂದಿರದುರವಣಿಸಿ ಬಕನಿಕಾಯಕಮದರೊಳ್॥೧೯॥
--------------
ರನ್ನ
ಬಡಿಗೊಂಡು ಗೋಣಿಪಣ್ಣಂ ಬಡಿವಂತಿರೆ ಪವನಸೂನು ಪೆಂಕುಳಿನಾಯಂ ಬಡಿವಂತಿರೆ ಪಾಳುಡುವಂ ಬಡಿವಂತಿರೆ ಬಡಿದನನಿಬರಂ ಕೌರವರಂ॥೧೧॥
--------------
ರನ್ನ
ಬಿಡದಾರಾಧಿಸೆ ಮುನ್ನಮೆ ಕುಡಲಾರದೆ ಬಳಿಕೆ ಗಂಟಲಂ ಮೆಟ್ಟಿದೊಡಿ ಟ್ಟೆಡೆಯೊಳ್ ಕೊಟ್ಟಂ ಗೆಲ್ಲಂ ಗುಡುವಂತೆ ನರಂಗೆ ಪಾಶುಪತಮನೆ ರುದ್ರಂ॥೩೯॥
--------------
ರನ್ನ
ಭರತಾನ್ವಾಯದೋಳಂದಿನಿಂದುವರೆಗಂ ಸಾಪತ್ನರೊಳ್ ಬದ್ಧಮ ತ್ಸರಮಿಲ್ಲೆಮ್ಮನಕಾರಣಂ ಕದಡಿದಯ್ ಸಾವೆಯ್ದಿದಯ್ ನಷ್ಟಸೋ ದರಮಾದತ್ತೆನಗಂ ಸ್ವಗೋತ್ರವಧೆಯಪ್ಪಾಪಾತಕಂ ಕೌರವೇ ಶ್ವರ ನೀಂ ಸಂಧಿಗೊಡಂಬಡಿಂತು ಕೊಳನಂ ಪೊಕ್ಕಿರ್ದುದೇಂ ತಕ್ಕುದೇ॥೯॥
--------------
ರನ್ನ
-->