ಒಟ್ಟು 204 ಕಡೆಗಳಲ್ಲಿ , 1 ಕವಿಗಳು , 115 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಡವುಟ್ಟಿದನೆಂದರಿದೊಡೆ ಕುಡುಗುಂ ರಾಜ್ಯಮನೆ ಧರ್ಮತನಯಂ ನಿನಗಾಂ ಕುಡಲಾರ್ತೆನಿಲ್ಲ ರಾಜ್ಯ ಕ್ಕೊಡೆಯನನರಿಯುತ್ತುಮಿರ್ದೆನಂಗಾಧಿಪತಿ॥೧೯॥
--------------
ರನ್ನ
ಒಡವುಟ್ಟಿದರಂ ಕೊಂದವ ರಡಗಂ ತಿಂದವರ ನೆತ್ತರಂ ಬೆಲಗಸೆಯೊಳ್ ಕುಡಿವೀ ನಿಸ್ತ್ರಿಂಶತೆಯಂ ಹಿಡಿಂಬಿಯಂ ಪೊರ್ದಿ ಕಲ್ತನಾಗನೆ ಭೀಮಂ॥೨೮॥
--------------
ರನ್ನ
ಒಳಗಾದಂ ಪಗೆವಂ ಸರೋವರದೊಳಿರ್ದಿನ್ನೆತ್ತವೋಪಂ ಸರೋ ಜಳಮಂ ತವೆ ಪೀರ್ದು ಪೀರ್ವೆನಸುಹೃದ್ರಕ್ತಾಂಬುವಂ ತೋರ್ಪೆನೆ ನ್ನಳವಂ ಮತ್ಪತಿಗೆಂದು ಸಂತಸದೆ ಬಾಹಾಸ್ಭಾಲನಂಗೆಯ್ದು ದಿ ಗ್ವಳಯಂ ಮಾರ್ದನಿಯಿಟ್ಟವೊಲ್ ಗಜರಿದಂ ಚಾಳುಕ್ಯ ಕಂಠೀರವಂ॥೪೭॥
--------------
ರನ್ನ
ಒಳಪೊಕ್ಕು ನೋಡೆ ಭಾರತ ದೊಳಗಣ ಕಥೆಯೆಲ್ಲಮೀ ಗದಾಯುದ್ಧದೊಳಂ ತೊಳಕೊಂಡತ್ತೆನೆ ಸಿಂಹಾ ವಳೋಕನಕ್ರಮದಿನರಿಪಿದಂ ಕವಿರನ್ನಂ
--------------
ರನ್ನ
ಓಜಂ ಗಡ ಚಿಃ ಭಾರ ದ್ವಾಜಂ ಗಡ ಬಿಲ್ಲ ಬಲ್ಮೆಯುಂ ಕುಲಮುಂ ನಿ ರ್ವ್ಯಾಜಂ ಮಸುಳ್ದುವು ಪಾಂಡುತ ನೂಜರ ಪಕ್ಕದೊಳೆ ಪಾಳಿಗಿಡೆ ನೆಗ಼ಳ್ದುದರಿಂ॥೧೮॥
--------------
ರನ್ನ
ಕದನದೊಳುಣ್ಮಿದೊಳ್ಮಿದುಳ ಕರ್ದಮದೊಳ್ ಜಗುಳ್ದಂಘ್ರಿ ಜಾರಿ ಪೋ ಪುದುಮೊಡನಿರ್ದ ಸಂಜಯನಿಳೇಶ್ವರನಂ ಪಿಡಿದೂರುಭಂಗಮಾ ಗದೆ ವಲಮೆಂದೊಡಾಗದೆನೆ ಪುಲ್ಮರುಳೊಂದೆಡೆವೋಗಿ ಭೀಮ ಕೋ ಪದೆ ನಿನಗೂರುಭಂಗಭಯಮಾಗದೆ ಪೋಕುಮೆ ಕೌರವೇಶ್ವರಾ॥೪೪॥
--------------
ರನ್ನ
ಕನ್ನಡಮೆರಡರುನೂರರ ಕನ್ನಡಮಾತಿರುಳ ಕನ್ನಡಂ ಮಧುರಮ್ಯೋ ತ್ಪನ್ನಂ ಸಂಸ್ಕೃತಮೆನೆ ಸಂ ಪನ್ನಂ ನೆಗಳ್ದುಭಯ ಕವಿತೆಯೊಳ್ ಕವಿರನ್ನಂ
--------------
ರನ್ನ
ಕರಿಯಂ ನುಂಗಿ ಕಳಿಂಗನಂ ನೊಣೆದ ದರ್ಪಕ್ಕೊಂದುಗೊಳ್ ಮತ್ಸಹೋ ದರರಂ ಕೋಪದೆ ತಿಂದುದರ್ಕೆರಡುಗೊಳ್ ದುಶ್ಯಾಸನೋರುಸ್ಸ್ಥಳ ಕ್ಷರದಸ್ರಾಂಬುವನಾರ್ದು ಪೀರ್ದ ಮುಳಿಸಿಂಗಂ ಮೂರುಗೊಳ್ಳೆಂದು ಮ ಚ್ಚರದಿಂದೋವದೆ ಪೊಯ್ದನೆತ್ತಿಗದೆಯಂ ದುರ್ಯೋಧನಂ ಭೀಮನಂ॥೧೮॥
--------------
ರನ್ನ
ಕಲಿಗಂ ಶಂಕೆಯೆ ಚಾಗಿಗಂ ಬೆರಗೆ ಮೇಣ್ ಕಟ್ಟಾಳ್ ನೆರಂಬಾರ್ವನೇ ಕುಲಜಂಗಂ ಮರುವಾಳೆ ಸಜ್ಜನಿಕೆಗಂ ಕಲ್ವೋಜೆಯೇ ಧರ್ಮಿಗಂ ಕೊಲೆಯೇ ಮಂತ್ರಿಗಮಿಚ್ಚೆಕಾರತನಮೇ ತಕ್ಕಂ ಪಿಸುಣ್ಬೇಳ್ವನೇ ಚಲಮಂ ಗಂಡುಮನಪ್ಪುಕೆಯ್ವೆನಗಮಾ ಕೌಂತೇಯರೊಳ್ ಸಂಧಿಯೇ॥೪೬॥
--------------
ರನ್ನ
ಕಳಶಜನನಿಂತು ಕೊಲಿಸಿದ ಖಳನೆ ಗಡಂ ಧರ್ಮನಂದನಂ ಕ್ರೂರದಿನಂ ಗಳ ಪೆಸರಂ‌ ಮರೆಯಿಸಿ ಮಂ ಗಳವಾರಂ ಕಡ್ಡವಾರಮೆಂಬಂತೆ ವಲಂ॥೨೬॥
--------------
ರನ್ನ
ಕಿರಿಕಿರಿದೆ ಮೆಟ್ಟಿ ಮುಂದಂ ಕಿರಿಕಿರಿದನೆ ಸಾರ್ಚಿ ತಮ್ಮಗದೆಗಳನಾಗಳ್ ಕಿರಿಕಿರಿದೆ ತಿರುಪಿ ಮಾಣದೆ ಕಿರಿಕಿರಿದನೆ ತೂಂಕಿ ತೂಂಕಿ ನೂಂಕಿದರೆನಸು॥೭॥
--------------
ರನ್ನ
ಕುರುಪತಿ ನಿನ್ನ ಪೊಕ್ಕತೊರೆಗಳ್ ಮೊದಲಾಗಿಯೆ ಬತ್ತುತಿರ್ಪುವೀ ದೊರೆಯ ದುರಾತ್ಮನಂ ಖಳನನಾನೊಳಕೊಂಡೊಡೆ ಭೀಮನೀ ಸರೋ ವರಮುಮನೆಮ್ಮುಮಂ ಕದಡುಗುಂ ಪುಗದಿರ್ ತೊಲಗೆಂದು ಬಗ್ಗಿಪಂ ತಿರೆ ನೆಗೆದತ್ತನೇಕಬಕಕೋಕಮರಾಳವಿಹಂಗಮಸ್ವನಂ॥೧೨॥
--------------
ರನ್ನ
ಕುರುರಾಜಂ ವಿದ್ಯಾಧರ ಕರಣದೆ ನೆಗೆದಂಬರಕ್ಕೆ ಗದೆಯಂ ಕ್ರಮದಿಂ ತಿರುಪೆ ಧರಾಚಕ್ರಂ ಕೋ ವರಚಕ್ರಂ ತಿರಿವ ತೆರದಿ ತಿರಿದತ್ತೆನಸುಂ॥೨೪॥
--------------
ರನ್ನ
ಕೂಡೆ ವಿರೋಧಿಯಂ ತರಿದು ತದ್ವಶಮಾಂಸದೆ ಭೂತಭೋಜನಂ ಮಾಡದೆ ವೈರಿವಾರವನಿತಾವದನಾಂಬುರುಹಕ್ಕೆ ಬೆಳ ರ್ಮಾಡದ ಬಂಧುಶೋಕದೊಳೆ ಪೊರ್ದಿದ ಬಂಧುಜನಕ್ಕೆ ಸಂತಸಂ ಮಾಡದೆ ಸಂಧಿಮಾಡುವನೆ ಪಾಂಡವರೊಳ್ ಫಣಿರಾಜಕೇತನಂ॥೪೯॥
--------------
ರನ್ನ
ಕೂರಿಸಿ ವೀರ ಶ್ರೀಯಂ ಕೂರದರಂ ಕೊಂದು ಸಮರಜಯಮಂ ಮಾಡಲ್ ಕೂರಸಿಯೊಳ್ ನೆಲಸುಗೆ ಕಂ ಠೀರವವಾಹನೆ ಚಳುಕ್ಯಕಂಠೀರವನಾ
--------------
ರನ್ನ
-->