ಒಟ್ಟು 60 ಕಡೆಗಳಲ್ಲಿ , 1 ಕವಿಗಳು , 43 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಲದೇವಾದಿಗಳಾಗದಾಗದೊದೆಯಲ್ಕೇಕಾದಶಾಕ್ಷೋಹಿಣೀ ಬಲಲಕ್ಷ್ಮೀಪತಿಯಂ ಪರಾಭವಿಸದಿರ್ ಚಿಃ ತಕ್ಕುದಲ್ಲೆಂದು ಮಾ ರ್ಕೊಳೆಯುಂ ಮಾಣದೆ ಭೀಮಸೇನನೊದೆದಂ ವಾಮಾಂಘ್ರಿಯಿಂ ರತ್ನಮಂ ಡಲರಶ್ಮಿಪ್ರಕಟಜ್ವಲನ್ಮಕುಟಮಂ ಕೌರವರಾಜೇಂದ್ರನಾ॥೩೯॥
--------------
ರನ್ನ
ಬಲವದ್ವೈರಿತಮೋಹರಾತಿಪಟುಗಳ್ ಪದ್ಮಾಸನಸ್ಪರ್ಶಸ ಲ್ಲಲಿತಂಗಳ್ ಜಿತಚಕ್ರವಾಕನಿವಹಪ್ರೇಮಾಹವಂಗಳ್ ಮಹೀ ವಲಯೋದ್ದ್ಯೋತಕರಂಗಳಾನತ ಜನಕ್ಕಾನಂದಮಂ ಮಾಳ್ಕ ಮಂ ಗಲಮುಚ್ಚಂಡಕರಂ ಮಹೀವಲಯದೊಳ್ ಚಾಳುಕ್ಯಮಾರ್ತಾಂಡನಾ
--------------
ರನ್ನ
ಬೆಸಕೆಯ್ವೆಂ ಬಿಡಿಮಜ್ಜ ಮಂಗಳಮಹಾಶ್ರೀ ಸಂಧಿಕಾರ್ಯಕ್ಕೆ ಲಂ ಘಿಸಿದೆಂ ನಿಮ್ಮಯಮಾತನೊರ್ಮೆಗೆಮದಾಜ್ಞಾಲಂಘನಂ ದೋಷಮೊಂ ದಿಸದಿನ್ನಾಗ್ರಹಮಂ ಬಿಸುಳ್ಪುದೆನೆ ಸತ್ತ್ವಕ್ಕಂ ತದೇಕಾಂಗ ಸಾ ಹಸಕಂ ವಿಸ್ಮಯಮುತ್ತು ಮೆಚ್ಚಿ ಪೊಗಳ್ದಂ ಮಂದಾಕಿನೀ ನಂದನಂ॥೫॥
--------------
ರನ್ನ
ಭರತಾನ್ವಾಯದೋಳಂದಿನಿಂದುವರೆಗಂ ಸಾಪತ್ನರೊಳ್ ಬದ್ಧಮ ತ್ಸರಮಿಲ್ಲೆಮ್ಮನಕಾರಣಂ ಕದಡಿದಯ್ ಸಾವೆಯ್ದಿದಯ್ ನಷ್ಟಸೋ ದರಮಾದತ್ತೆನಗಂ ಸ್ವಗೋತ್ರವಧೆಯಪ್ಪಾಪಾತಕಂ ಕೌರವೇ ಶ್ವರ ನೀಂ ಸಂಧಿಗೊಡಂಬಡಿಂತು ಕೊಳನಂ ಪೊಕ್ಕಿರ್ದುದೇಂ ತಕ್ಕುದೇ॥೯॥
--------------
ರನ್ನ
ಭವದಹಿತನಿಲ್ಲಿದಂ ಕೌ ರವಾರಿ ನೋಡೆಂದು ಮೂಡಿ‌ಮುಳ್ಕಾಡಿಯೆ ತೋ ರ್ಪವೋಲಲ್ಲಿ ಮೂಡಿ ಮುಳ್ಕಾ ಡುವ ವಿಹಗಾವಳಿಗಳೇಂ ಮನಂಗೊಳಿಸಿದುವೋ॥೪೪॥
--------------
ರನ್ನ
ಮೀರಿದ ಪಗೆವನ ಪಟ್ಟಂ ಪಾರಿಸುವೆನೊ ಮುನ್ನಮಮರುಂಡಮೃತಮನೇಂ ಕಾರಿಸುವೆನೊ ಖಚರರನಡ ರ್ದೇರಿಸುವೆನೊ ಮೇರುಗಿರಿರ ತೂರಲ ತುದಿಯಂ॥೧೭॥
--------------
ರನ್ನ
ಮುಳಿದಾಂಪರ್ ಧರಣೀಶ್ವರರ್ ಮಿಗೆ ಪೆರರ್ ಬಿಲ್ಗೊಂಡುಮೇಗೆಯ್ವರೆ ನ್ನೊಳಮಿಂ ತೀರದ ಕಾರ್ಯಭರಮಂ ತೀರ್ಚಲ್ ಪೆರರ್ ಗಂಡರಿ ನ್ನೊಳರೇ ಪಾಂಡವರೆಂಬರೇಗಹನಮೆಂಬಾದರ್ಪದಂತಾಜಿಯೊಳ್ ಸುಳರಂಬೆತ್ತಿರೆ ಸತ್ತರೆನ್ನಿನಿಬರುಂ ತಮ್ಮಂದಿರುಂ ಮಕ್ಕಳುಂ ॥೧೨॥
--------------
ರನ್ನ
ಮೃದು ಪದ್ಯರಚನೆಯೊಳ್ ಕಾ ಳಿದಾಸನುಂ ಗದ್ಯರಚನೆಯೊಳ್ ಬಾಣನುಮಂ ಕದ ಕವಗಳೆನಿಸಿ ನೆಗಳ್ದಿ ರ್ದುದರಿಂ ಸತ್ಕವಿಗಳಿರ್ವರೆಮಗಭಿವಂದ್ಯರ್
--------------
ರನ್ನ
ವಿನುತವಿರೋಧಿಮಂಡಳಿಕಮೌಳಿ ವಿರಾಜಿತ ಪಾದಪೀಠ ಕಾಂ ಚನಕಮಳಾಯಮಾನಮಿವು ನಿಮ್ಮಯ ಮೆಲ್ಲಡಿ ಭಿಂಡಿವಾಳದಂ ಬಿನ ಕರವಾಳ ಕಕ್ಕಡೆಯ ಕೊಂತದ ಧಾರೆಗಳುರ್ಚೆ ಸಂಯುಗಾ ವನಿತಳದೊಳ್ ವಿಧಾತ್ರವಶದಿಂ ನಿಮಗಂ ನಡೆವಂತುಟಾದುದೇ॥೧೮॥
--------------
ರನ್ನ
ಶ್ರೀಯುವತೀಪ್ರಿಯಂ ಬಲಯುತಂ ಬಲಿದರ್ಪಹರಂ ಜಿತಾರಿದೈ ತೇಯನನಂತಭೋಗನಿಲಯಂ ಪ್ರತಿಪಾಲಿತಧರ್ಮಚಕ್ರನ ಬ್ಜಜಾಯತನೇತ್ರನಾದಿಪುರುಷಂ ಪುರುಷೋತ್ತಮನೀಚಳುಕ್ಯನಾ ರಾಯಣದೇವನೀಗೆಮಗೆ ಮಂಗಳಕಾರಣಮುತ್ಸವಂಗಳಂ
--------------
ರನ್ನ
ಸೂನುಗಳಳಿವಂ ಪ್ರಿಯಮಿ ತ್ರಾನುಜರರಿವಂ ವಿಧಾತ್ರ ನೀಂ ಕಾಣಿಸಿ ಮುಂ ದೇನಂ ಕಾಣಿಸಲಿರ್ದಪೆ ನೀನೆನ್ನಂ ಪಾಪಕರ್ಮನಂ ನಿರ್ಗುಣನಂ॥೨೯॥
--------------
ರನ್ನ
ಸ್ಥಿರಸತ್ಯವ್ರತಿಯೆಂದು ಧರ್ಮರುಚಿಯೆಂದಾ ಧರ್ಮಪುತ್ರಂ ದಯಾ ಪರನೆಂದೆಲ್ಲರ ಪೇಳ್ದ ಮಾತು ಪುಸಿಯಾಯ್ತೀ ಕಾರ್ಮುಕಾಚಾರ್ಯನಂ ಗುರುವಂ ಬ್ರಾಹ್ಮಣನಂ ತೊದಳ್ನುಡಿದು ಕೊಂದದಾ ಮೃಷಾಪಾತಕಂ ಪರಮೆಂಬೀ ನುಡಿಯಿಂ ಪೃಥಾಪ್ರಿಯಸುತಂ ಪಾಪಕ್ಕೆ ಪಕ್ಕಾಗನೇ॥೨೩॥
--------------
ರನ್ನ
ಹರಿಸಂಧಾನಕ್ಕೆ ವಂದಂದವಗಡಿಸಿದಹಂಕಾರಮೇನಾಯ್ತೊ ಕೃಷ್ಣಾಂ ಬರಕೇಶಾಕೃಷ್ಟಿಯಂ ಮಾಡಿಸಿದ ಮದಮದೇನಾಯ್ತೊ ಕೌಂತೇಯರಂ ಮ ಚ್ಚರದಿಂ ಕಾಂತಾರದೊಳ್ ತಿರ್ರನೆ ತಿರಿಪಿದ ಸೊರ್ಕೀಗಳೇನಾದುದೆಂದಾ ಕುರುವಂಶಾಧೀಶನಂ ಮೂದಲಿಸಿದನದಟಂ ಭೀಮನುದ್ದಾಮಭೀಮಂ॥೧೪॥
--------------
ರನ್ನ
-->