ಒಟ್ಟು 90 ಕಡೆಗಳಲ್ಲಿ , 1 ಕವಿಗಳು , 73 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನಣುಗಾಳನೆನ್ನಣುಗದಮ್ಮನನಿಕ್ಕಿದ ಪಾರ್ಥಭೀಮರು ಳ್ಳನ್ನೆಗಮೊಲ್ಲೆನೆನ್ನೊಡಲೊಳೆನ್ನಸುವುಳ್ಳಿನಮಜ್ಜ ಸಂಧಿಯಂ ಮುನ್ನಮವಂದಿರಿರ್ಬರುಮನಿಕ್ಕುವೆನಿಕ್ಕಿ ಬಳಿಕ್ಕೆ ಸಂಧಿಗೆ ಯ್ವೊನ್ನೆಗಳ್ದಂತಕಾತ್ಮಜನೊಳೆನ್ನಳಲಿರಿದೊಡಾಗದೆಂಬೆನೇ॥೫೧॥
--------------
ರನ್ನ
ಒಂದೆರಡು ಮತ್ತರಂತರ ದಿಂದಂ ಪೊರಮಟ್ಟಪಜ್ಜೆಯಿಂ ಸಲೆ ಕೊಳನಂ ಪಿಂದು ಪೆರಗಾಗಿ ಪುಗೆ ಚಿಃ ಎಂದವನಂ ರಾಜ್ಯಲಕ್ಪ್ಮಿ ಪೇಸಿ ಬಿಸುಟ್ಟಳ್॥೯॥
--------------
ರನ್ನ
ಒಳಗಾದಂ ಪಗೆವಂ ಸರೋವರದೊಳಿರ್ದಿನ್ನೆತ್ತವೋಪಂ ಸರೋ ಜಳಮಂ ತವೆ ಪೀರ್ದು ಪೀರ್ವೆನಸುಹೃದ್ರಕ್ತಾಂಬುವಂ ತೋರ್ಪೆನೆ ನ್ನಳವಂ ಮತ್ಪತಿಗೆಂದು ಸಂತಸದೆ ಬಾಹಾಸ್ಭಾಲನಂಗೆಯ್ದು ದಿ ಗ್ವಳಯಂ ಮಾರ್ದನಿಯಿಟ್ಟವೊಲ್ ಗಜರಿದಂ ಚಾಳುಕ್ಯ ಕಂಠೀರವಂ॥೪೭॥
--------------
ರನ್ನ
ಒಸೆದರ್ಜುನಂಗೆ ಮುಂ ಕಳ ಶಸಂಭವಂ ಮಾನ್ಯಪದವಿಯಂ ಮಾಡಿದೊಡಂ ಬೆಸುಗೆಗಿಡೆ ಪಾಳಿಗಿಡೆ ತ ನ್ನಸುವಂ ತೆಲ್ಲಟಿಗೆಗುಡುವ ತೆರದೊಳ್ ಕೊಟ್ಟಂ॥೧೫॥
--------------
ರನ್ನ
ಓಜಂ ಗಡ ಚಿಃ ಭಾರ ದ್ವಾಜಂ ಗಡ ಬಿಲ್ಲ ಬಲ್ಮೆಯುಂ ಕುಲಮುಂ ನಿ ರ್ವ್ಯಾಜಂ ಮಸುಳ್ದುವು ಪಾಂಡುತ ನೂಜರ ಪಕ್ಕದೊಳೆ ಪಾಳಿಗಿಡೆ ನೆಗ಼ಳ್ದುದರಿಂ॥೧೮॥
--------------
ರನ್ನ
ಕಲಿಗಂ ಶಂಕೆಯೆ ಚಾಗಿಗಂ ಬೆರಗೆ ಮೇಣ್ ಕಟ್ಟಾಳ್ ನೆರಂಬಾರ್ವನೇ ಕುಲಜಂಗಂ ಮರುವಾಳೆ ಸಜ್ಜನಿಕೆಗಂ ಕಲ್ವೋಜೆಯೇ ಧರ್ಮಿಗಂ ಕೊಲೆಯೇ ಮಂತ್ರಿಗಮಿಚ್ಚೆಕಾರತನಮೇ ತಕ್ಕಂ ಪಿಸುಣ್ಬೇಳ್ವನೇ ಚಲಮಂ ಗಂಡುಮನಪ್ಪುಕೆಯ್ವೆನಗಮಾ ಕೌಂತೇಯರೊಳ್ ಸಂಧಿಯೇ॥೪೬॥
--------------
ರನ್ನ
ಕಸವರಮಂ ದ್ವಿಜದಾನಕೆ ಪೂಸಜೌವನಮಂ ಸ್ವದಾರ ಸಂತೋಷಕೆ ನಿ ನ್ನಸುವಂ ಪತಿಕಾರ್ಯಕೆ ವೆ ಚ್ಚಿಸಿದಯ್ ನಿನ್ನನ್ನನಾವನಂಗಾಧಿಪತಿ॥೨೨॥
--------------
ರನ್ನ
ಕಿರಿಕಿರಿದೆ ಮೆಟ್ಟಿ ಮುಂದಂ ಕಿರಿಕಿರಿದನೆ ಸಾರ್ಚಿ ತಮ್ಮಗದೆಗಳನಾಗಳ್ ಕಿರಿಕಿರಿದೆ ತಿರುಪಿ ಮಾಣದೆ ಕಿರಿಕಿರಿದನೆ ತೂಂಕಿ ತೂಂಕಿ ನೂಂಕಿದರೆನಸು॥೭॥
--------------
ರನ್ನ
ಕುಪಿತಮರುತ್ಸುತರವಕ ಳ್ಕಿ ಪರಮೇಶ್ವರನಿಕರಸಂಭ್ರಮೋಲ್ಲಹರಿಕೆ ಭಾ ವಿಪೊಡೆ ಜನಕ್ಕೆ ಕೊಳಂ ಕಿ ಳ್ತು ಪಾರುವಂತಾಯ್ತು ಕಮಲಜಾಂಡಂಬರೆಗಂ॥೨೦॥
--------------
ರನ್ನ
ಕುರುಕುಲಕದಳೀಕಾನನ ಕರಿಕಳಭಂ ಶತ್ರುಶಲಭಸಂಪಾತನವಿ ಸ್ಫುರಿತಪ್ರದೀಪನಾಕುರು ಧರೆಯೊಳ್ ಕುರುಪತಿಯನರಸಿದಂ ಪವನಸುತಂ॥೨೭॥
--------------
ರನ್ನ
ಕುರುರಾಜಂ ವಿದ್ಯಾಧರ ಕರಣದೆ ನೆಗೆದಂಬರಕ್ಕೆ ಗದೆಯಂ ಕ್ರಮದಿಂ ತಿರುಪೆ ಧರಾಚಕ್ರಂ ಕೋ ವರಚಕ್ರಂ ತಿರಿವ ತೆರದಿ ತಿರಿದತ್ತೆನಸುಂ॥೨೪॥
--------------
ರನ್ನ
ಕೂರಿಸಿ ವೀರ ಶ್ರೀಯಂ ಕೂರದರಂ ಕೊಂದು ಸಮರಜಯಮಂ ಮಾಡಲ್ ಕೂರಸಿಯೊಳ್ ನೆಲಸುಗೆ ಕಂ ಠೀರವವಾಹನೆ ಚಳುಕ್ಯಕಂಠೀರವನಾ
--------------
ರನ್ನ
ಕೆಲರಂ ನುಣ್ಣನೆ ನೊಣೆದಂ ಕೆಲರಂ ಪಿಡಿದಡಸಿ ನುಂಗಿದಂ ಕುರುಕುಲರಂ ಕೆಲರಂ ಸೌಳನೆ ಸೀಳ್ದಂ ಕೆಲರಂ ಮಾರುತಿ ಜವಂಗೆ ಬಾಣಸುಗೆಯ್ದಂ॥೯॥
--------------
ರನ್ನ
ಕೆಳೆಯಂಗಾಯ್ತಸುಮೋಕ್ಷಮಾಗದೆನಗಂ ಬಾಷ್ಮಾಂಬು ಮೋಕ್ಷಂ ಧರಾ ತಳಮಂ ಕೊಟ್ಟನಿವಂ ಜಳಾಂಜಳಿಯುಮಂ ನಾಂ ಕೊಟ್ಟೆನಲ್ಲನ್ಯಮಂ ಡಳಮಂ ಸುಟ್ಟನಿವಂ ಪ್ರತಾಪ ಶಿಖಿಯಿಂದಾನೀತನಂ ಸತ್ಕ್ರಿಯಾ ನಳನಿಂ ಸುಟ್ಟೆನುಮಿಲ್ಲ ಮತ್ಪ್ರಿಯತಮಂ ಕರ್ಣಂಗಿದೇಂ ಕೂರ್ತೆನೋ॥೩೧॥
--------------
ರನ್ನ
ಗುರಃವಂ ದ್ವಿಜನ್ಮನಂ ಸುತ ವಿರಹಾಗ್ನಿಗ್ರಸ್ತನಂ ನಿರಾಯುಧನಂ ಸಂ ಹರಿಸಿದ ಶಕ್ರಸುತಂಗಾ ಗುರುವಧಮೆ ಯಶೋವಧಕ್ಕೆ ಕಾರಣಮಲ್ತೆ॥೩೧॥
--------------
ರನ್ನ
-->