ಒಟ್ಟು 74 ಕಡೆಗಳಲ್ಲಿ , 1 ಕವಿಗಳು , 60 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೂರಿಸಿ ವೀರ ಶ್ರೀಯಂ ಕೂರದರಂ ಕೊಂದು ಸಮರಜಯಮಂ ಮಾಡಲ್ ಕೂರಸಿಯೊಳ್ ನೆಲಸುಗೆ ಕಂ ಠೀರವವಾಹನೆ ಚಳುಕ್ಯಕಂಠೀರವನಾ
--------------
ರನ್ನ
ಕೃತಿ ನೆಗಳ್ದ ಗದಾಯುದ್ಧಂ ಕೃತಿಗೀಶಂ ಚಕ್ರವರ್ತಿ ಸಾಹಸಭೀಮಂ ಕೃತಿಯಂ ವಿರಚಿಸಿದನಲಂ ಕೃತಿಯಂ ಕವಿರತ್ನನೆಂದೊಡೇವಣ್ಣಿಪುದೋ
--------------
ರನ್ನ
ಕೆಲರಂ ನುಣ್ಣನೆ ನೊಣೆದಂ ಕೆಲರಂ ಪಿಡಿದಡಸಿ ನುಂಗಿದಂ ಕುರುಕುಲರಂ ಕೆಲರಂ ಸೌಳನೆ ಸೀಳ್ದಂ ಕೆಲರಂ ಮಾರುತಿ ಜವಂಗೆ ಬಾಣಸುಗೆಯ್ದಂ॥೯॥
--------------
ರನ್ನ
ಗಗನಂ ಬಿಳ್ದುದೊ ಮೇಣ್ ನೆಲಕ್ಕೆ ನೆಲನೇಂಪತ್ತಿತ್ತೊ ಮೇಣಿಲ್ಲಿ ಪ ನ್ನಗವೃಂದಾರಕರೆಂದುಮಿರ್ಪ ಬಿಲನೋ ಮೇಣಿಲ್ಲಿ ದಿಙ್ನಾಗರಾ ಜಗೆ ಮೆಯ್ಗರ್ಚಿಕೊಳಲ್ಕಜ ಸಮೆದ ತೋಯೋದ್ದೇಶಮೋ ಸಂದೆಯಂ ಬಗೆಗಾದತ್ತೆನಿಸಿರ್ದುದೇಂ ಪಿರಿದೊ ವೈಶಂಪಾಯನಾಬ್ಜಾಕರಂ॥೧೧॥
--------------
ರನ್ನ
ಗಳಿತಶರಮಾಯ್ತು ಹಸ್ತಂ ಗಳಿತರಣೋತ್ಸಿಹಮಾಯ್ತು ಹೃದಯಂ ನಯನಂ ಗಳಿತಾಶ್ರುವಾಯ್ತು ಕೌರವ ಕುಲತಿಲಕಂಗೆ ಕುಮಾರನಂ ಕಾಣಲೊಡಂ॥೬೧॥
--------------
ರನ್ನ
ಗುರಃವಂ ದ್ವಿಜನ್ಮನಂ ಸುತ ವಿರಹಾಗ್ನಿಗ್ರಸ್ತನಂ ನಿರಾಯುಧನಂ ಸಂ ಹರಿಸಿದ ಶಕ್ರಸುತಂಗಾ ಗುರುವಧಮೆ ಯಶೋವಧಕ್ಕೆ ಕಾರಣಮಲ್ತೆ॥೩೧॥
--------------
ರನ್ನ
ಗುರು ಕವಚಂ ಕರ್ಣಂ ಬಾ ಹುರಕ್ಕೆ ಸುರಸಿಂಧುನಂದನಂ ಸೀಸಕಮಾ ಗಿರೆ ಮೆಯ್ಗೆ ಮುಳಿಯಲರಿಯದೆ ಕುರುರಾಜನ ತೊಡೆಯನುಡಿವೆನೆಂದಂ ಭೀಮಂ॥೨೮॥
--------------
ರನ್ನ
ಗುರುದೀಕ್ಷಾವಿಧಿಗಳ್ಗೆ ಮಂತ್ರಿ ಹಿತಕಾರ್ಯಾಳೋಚನಕ್ಕಾಳ್ದನು ರ್ವರೆಯ ಕಾವ ಗುಣಕ್ಕೆ ನರ್ಮಸಚಿವಂ ಕ್ರೀರಸಕ್ಕಾನೆಯಾಳ್ ಗುರುಭಾರಕ್ಕಿರಿವಾಳ್ ರಣಕ್ಕೆ ತುಳಿಲಾಳ್ ಕಟ್ಟಾಯದೊಳ್ ಮೇಳದಾಳ್ ಪರಿಹಾಸಕ್ಕೆನಿಸಿರ್ದನೆಂತು ಮರೆವಂ ದುರ್ಯೋಧನಂ ಕರ್ಣನಂ॥೩೫॥
--------------
ರನ್ನ
ಗುರುವಂ ಪ್ರೋ ಜ್ಝಿತಚಾಪನಂ ಪುಸಿದುಕೊಂದಾ ಭೀರಮಂ ಭೀಷ್ಮರಂ ಶರಶಯ್ಯಾಗತರಂ ಕರುತ್ತು ಗುರಿಯೆಚ್ಚಾ ಪೊಚ್ಚರಂ ಕರ್ಣನಂ ವಿರಥಜ್ಯಾಯುಧನೆನ್ನದೆಚ್ಚು ತಲೆಗೊಂಡಾ ಶೌರ್ಯಮಂ ಪಾಂಡುಪು ತ್ರರೆ ಬಲ್ಲರ್ ಮೆರೆಯಲ್ಕೆ ಸಾಹಸಧನಂ ಧುರ್ಯೋಧನಂ ಬಲ್ಲನೇ॥೩೩॥
--------------
ರನ್ನ
ಗುರುವಿನ ನೆತ್ತರಂ ಕುಡಿವೆನಪ್ಪೊಡೆ ದ್ವಿಜವಂಶಜಂ ನಿಜಾ ವರಜನ ನೆತ್ತರಂ ಕುಡಿವೆನಪ್ಪೊಡೆ ಭೀಮನೆ ಪೀರ್ದನೆಯ್ದೆ ಭೀ ಷ್ಮರ ಬಿಸುನೆತ್ತರಂ ಕುಡಿವೊಡಿನ್ನುಮೊಳಂ ಕುರುರಾಜ ನಿನ್ನ ನೆ ತ್ತರ ಸವಿನೋಳ್ಪೊಡಾಂ ಬಯಸಿ ಬಂದಪೆನೆಂದದೊಂದು ಪುಲ್ಮರುಳ್॥೪೩॥
--------------
ರನ್ನ
ಜಲಧಿಗಳೇಳುಂ ಭೂಭೃ ತ್ಕುಲಂಗಳಂ ರಿಪುಗೆ ಸಿರಿಯನೀವಂತೆತ್ತಂ ತಳಮಳವಿಗಳಿಯೆ ಕುರುಕುಲ ತಿಳಕಂ ರಿಪುಗೆಂತುಮೀವನಲ್ಲಂ ಶ್ರೀಯಂ॥೫೬॥
--------------
ರನ್ನ
ತನಯನೆನಗೆಂದು ಮನ್ನಿಸಿ ತನಗುರುಗಜ್ಜಕ್ಕೆ ಪಾಕಶಾಸನನರ್ಧಾ ಸನಮೇರಿಸಿ ನೀರೇರಿಸಿ ಮನುಜಂಗಂ ಮಾನ್ಯ ಪದವಿಯಂ ಮಾಡಿದನೇ॥೪೦॥
--------------
ರನ್ನ
ತರುಣ ಯುವ ವೃದ್ಧ ವಿಕ್ರಮ ಪರಿಣತರುರದಿಕ್ಕಿ ಸಿಂಹಾಸಾಹಸನಿವನುಂ ತರುಣನೆ ಆನುಂ ಯುವನೆನೆ ಸುರಪಗಾನಂದನಂ ಮಹಾಜರ್ಜರನೇ॥೫೯॥
--------------
ರನ್ನ
ತೆರಪಂ ನಿಟ್ಟಿಸಿ ಕುರುಪತಿ ಬರಸಿಡಿಲೆರಗುವವೊಲೆರಗಿಪೊಯ್ಯಲೊಡಂ ಮೆ ಯ್ಯರಿದು ಪವನಜನು ಮೇನೆಂ ದರಿಯದೆ ಮತಿವಿಕಳನಾಗಿ ಮೂರ್ಚ್ಛೆಗೆ ಸಂದಂ॥೨೬॥
--------------
ರನ್ನ
ದೊಣೆಯಿಂದಂ ತೆಗೆವಾಗಳೊಂದು ತುಡುವಾಗಳ್ ಪತ್ತುಬಾಣಂ ಧನು ರ್ಗುಣದಿಂದಂ ಬಿಡುವಲ್ಲಿ ನೂರು ಪರಿವಾಗಳ್ ಸಾಸಿರಂ ವೈರಿಮಾ ರ್ಗಣಮಂ ಛೇದಿಸುವಲ್ಲಿ ಲಕ್ಕೆ ನಡುವಾಗಳ್ ಕೋಟಿ ಸೇನಾಂಗದೊಳ್ ಗಣನಾತೀತಮಿದೆಂದೊಡೇವೊಗಳ್ವುದೋ ಬಿಲ್ಬಲ್ಮೆಯಂ ಪಾರ್ಥನಾ॥೩॥
--------------
ರನ್ನ
-->