ಒಟ್ಟು 24 ಕಡೆಗಳಲ್ಲಿ , 1 ಕವಿಗಳು , 20 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಪೆಣದಿನಿಗಳ ತಂಡಂ ಬಲ್ವೆಣಗಳನರಸುತ್ತುಮಲ್ಲಿ ಬರೆವರೆ ಸಾರಲ್ಕಣಮೀಯದೆ ತಮ್ಮಾಳ್ದನಪೆಣನಂ ಕಾದಿರ್ದರಲ್ಲಿ ಬಿಳ್ದ ಭಟರ್ಕಳ್॥೧೫॥
ಬೆಸಕೆಯ್ವೆಂ ಬಿಡಿಮಜ್ಜ ಮಂಗಳಮಹಾಶ್ರೀ ಸಂಧಿಕಾರ್ಯಕ್ಕೆ ಲಂಘಿಸಿದೆಂ ನಿಮ್ಮಯಮಾತನೊರ್ಮೆಗೆಮದಾಜ್ಞಾಲಂಘನಂ ದೋಷಮೊಂದಿಸದಿನ್ನಾಗ್ರಹಮಂ ಬಿಸುಳ್ಪುದೆನೆ ಸತ್ತ್ವಕ್ಕಂ ತದೇಕಾಂಗ ಸಾಹಸಕಂ ವಿಸ್ಮಯಮುತ್ತು ಮೆಚ್ಚಿ ಪೊಗಳ್ದಂ ಮಂದಾಕಿನೀ ನಂದನಂ॥೫॥
ಭರತಾನ್ವಾಯದೋಳಂದಿನಿಂದುವರೆಗಂ ಸಾಪತ್ನರೊಳ್ ಬದ್ಧಮತ್ಸರಮಿಲ್ಲೆಮ್ಮನಕಾರಣಂ ಕದಡಿದಯ್ ಸಾವೆಯ್ದಿದಯ್ ನಷ್ಟಸೋದರಮಾದತ್ತೆನಗಂ ಸ್ವಗೋತ್ರವಧೆಯಪ್ಪಾಪಾತಕಂ ಕೌರವೇಶ್ವರ ನೀಂ ಸಂಧಿಗೊಡಂಬಡಿಂತು ಕೊಳನಂ ಪೊಕ್ಕಿರ್ದುದೇಂ ತಕ್ಕುದೇ॥೯॥
ಸಾಧಿಸುವೆಂ ಫಲ್ಗುಣನಂಸಾಧಿಸುವೆಂ ಪವನಸುತನ ಬಸಿರಿಂ ಹಾ ಕರ್ಣಾ ದುಶ್ಯಾಸನ ತೆಗೆವೆಂಸಾಧಿಸಿದಿಂ ಬಳಿಕೆ ಯಮಜನೊಳ್ ಪುದುವಾಳ್ವೆಂ॥೧೦॥