ಒಟ್ಟು 66 ಕಡೆಗಳಲ್ಲಿ , 1 ಕವಿಗಳು , 41 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವಿನ ನೆತ್ತರಂ ಕುಡಿವೆನಪ್ಪೊಡೆ ದ್ವಿಜವಂಶಜಂ ನಿಜಾ ವರಜನ ನೆತ್ತರಂ ಕುಡಿವೆನಪ್ಪೊಡೆ ಭೀಮನೆ ಪೀರ್ದನೆಯ್ದೆ ಭೀ ಷ್ಮರ ಬಿಸುನೆತ್ತರಂ ಕುಡಿವೊಡಿನ್ನುಮೊಳಂ ಕುರುರಾಜ ನಿನ್ನ ನೆ ತ್ತರ ಸವಿನೋಳ್ಪೊಡಾಂ ಬಯಸಿ ಬಂದಪೆನೆಂದದೊಂದು ಪುಲ್ಮರುಳ್॥೪೩॥
--------------
ರನ್ನ
ಜಳದೊಳ್ ಮೀನಿರ್ಪವೊಲ್ ನೀಂ ಕೊಳದೊಳೆ ಮುಳುಗಿರ್ದಕಟಾ ಕೋಡಸೇಡಿಂ ಗೊಳಗಾದಯ್ ನಿನ್ನ ದುರ್ಯೋಧನವೆಸರ್ಗಿದು ಲಜ್ಜಾಕರಂ ತೋರಿದಯ್ ನಿ ನ್ನಳವಂ ಚಿಃ ಸತ್ತರೇಂ ಪುಟ್ಟರೆ ಪೊರಮಡು ನೀಂ ಕಯ್ದುಗೊಳ್ ಕೌರವೇಂದ್ರಾ ಚಳವಜ್ರಂ ಬಂದನೀಗಳ್ ಕುರುಕುಲಮಥನೋದ್ಭೀಕರಂ ಭೀಮಸೇನಂ॥೧೩॥
--------------
ರನ್ನ
ತನ್ನೊಡವುಟ್ಟಿದರ್ ಪೆಸರ ನಾಲ್ವರೊಳೊರ್ವರುಮಿಲ್ಲದಿರ್ದೊಡಂ ತನ್ನಸುವಂ ನಿವೇದಿಸುವನಗ್ನಿಗೆ ಧರ್ಮತನೂಜನೆಂದೊಡಾ ನೆನ್ನೊಡವುಟ್ಟಿದರ್ ಪೆಸರ ನೂರ್ವರೊಳೊರ್ವರುಮಿಲ್ಲ ಬಾಳ್ವೆನೆಂ ಬೆನ್ನಳಿಯಾಸೆಯಂ ಬಿಸುಟೆನಿನ್ನವರಾದುದನಾಗದಿರ್ಪೆನೇ॥೯॥
--------------
ರನ್ನ
ತರಣಿತನಯಾನನೇಂದು ಸ್ಮರಣದೆ ಕಯ್ಗಣ್ಮುವೆನ್ನ ಶೋಕಮಹಾಸಾ ಗರಮಂ ತವೆಪೀರ್ದುದು ಭೀ ಕರಮತ್ಕೋಪಾಗ್ನಿ ಬಾಡಬಾಗ್ನಿ ತೆರದಿಂ॥೩೭॥
--------------
ರನ್ನ
ತುರುಗೋಳೊಳ್ ಪೆಣ್ಬುಯ್ಯಲೊ ಳರಿವೆಸದೊಳ್ ನಂಟನೆಡರೊಳೂರಳಿವಿನೊಳಂ ತರಿಸಂದು ಗಂಡುತನಮನೆ ನೆರಪದವಂ ಗಂಡನಲ್ಲನೆಂತುಂ ಷಂಡಂ॥೨೪॥
--------------
ರನ್ನ
ತುರುವಂ ಕಳಿಸುವ ಕೃಷ್ಣೆಯ ನಿರಿಯಂ ಪಿಡಿದುರ್ಚವೇಳ್ವ ಕೊಳನಂ ಪಿಂದುಂ ಪೆರಗಾಗಿ ಪುಗುವ ದುರ್ನಯ ಮರಿಪವೆ ಕೌರವನ ರಾಜ್ಯದಾಯದ ಕುಂದಂ॥೧೦॥
--------------
ರನ್ನ
ದಾಂಟುವೆನೊ ಕುಲನಗಂಗಳ ನೀಂಟುವೆನೊ ಚತುಸ್ಸಮುದ್ರಮಂ ರವಿ ಶಶಿಯಂ ಮೀಂಟುವೆನೊ ಗಗನತಳದಿಂ ಗಂಟಲನೊತ್ತುವೆನೊ ಸಕಲ ದಿಕ್ಪಾಲಕರಂ॥೧೯॥
--------------
ರನ್ನ
ದಿವಿಜತನಯಂಗೆ ಮುಖ್ಯಂ ರವಿಜಂಜಯಕಾದನೆನಗೆ ಕಣ್ಣೊಳ್ ಕಾಣಂ ಕಿವಿಯೊಳ್ ಕೇಳಂ ಕಾಣ್ಬಂ ದವೆಂತು ಕೇಳ್ವಂದಮೆಂತು ತಲೆಯಿಲ್ಲದನಾ॥೩೬॥
--------------
ರನ್ನ
ನಿನ್ನೀ ಕೆಳೆಯ ಸುಯೋಧನ ನನ್ನೋಡದೆ ನುಡಿಯದಪ್ಪಿಕೊಳ್ಳದೆ ಬೆಸನೇ ನೆನ್ನದೆ ಜೀಯೆನ್ನದೆ ದೇ ವೆನ್ನದದೇಕುಸಿರದಿರ್ಪೆಯಂಗಾಧಿಪತಿ॥೧೬॥
--------------
ರನ್ನ
ನೀನಿಲ್ಲದರಸುಗೆಯ್ವೆನೆ ನೀನಿಲ್ಲದೆ ಬಾಳ್ವೆನೆಂದು ಬಗೆದಪ್ಪೆನೆ ಪೇಳ್ ನೀನಿಲ್ಲದಹಿತರೊಳ್ ಸಂ ಧಾನಂ ಮಾಡುವೆನೆ ಕೂಡೆನಂಗಾಧಿಪತಿ॥೧೨॥
--------------
ರನ್ನ
ನೀನುಳ್ಳೊಡುಂಟು ರಾಜ್ಯಂ ನೀನುಳ್ಳೊಡೆ ಪಟ್ಟಮುಂಟು ಬೆಳ್ಗೊಡೆಯುಂಟಯ್ ನೀನುಳ್ಳೊಡುಂಟು ಪೀಳಿಗೆ ನೀನಿಲ್ಲದಿವೆಲ್ಲಮೊಳವೆ ಅಂಗಾಧಿಪತಿ॥೨೦॥
--------------
ರನ್ನ
ನೆನೆ ಚಿತ್ರಾಂಗದನಿಂದಮಂದು ನಿನಗಾದಾಪತ್ತನಾ ಬನ್ನಮಂ ನೆನೆ ನೀಂ ಗೋಗ್ರಹಣ ಪ್ರಪಂಚದೊಳೆ ಮೆಯ್ವೆತ್ತಿರ್ದುದಂ ನಿನ್ನ ತ ಮ್ಮನ ಕೆನ್ನೆತ್ತರನೀಂಟುವಲ್ಲಿ ಭಯದಿಂದಳ್ಕುತ್ತೆ ಬೆನ್ನಿತ್ತುದಂ ನೆನೆ ಪಿಂತಿಕ್ಕಿದ ನಿನ್ನ ಮುನ್ನಿನ ಕವಲ್ಬನ್ನಂಗಳಂ ಕೌರವಾ॥೪೦॥
--------------
ರನ್ನ
ನೆಲಕಿರಿವೆನೆಂದು ಬಗೆದಿರೆ ಚಲಕಿರಿವೆಂ ಪಾಂಡುಸುತರೊಳೀನೆಲನಿದು ಪಾ ಳ್ನೆಲನೆನಗೆ ದಿನಪಸುತನಂ ಕೊಲಿಸಿದ ನೆಲನೊಡನೆ ಪುದುವಾಳ್ದಪೆನೇ॥೪೭॥
--------------
ರನ್ನ
ಪಡೆಯೆಡೆಯ ಕಡೆಯ ಬಡವರ್ ಕುಡೆ ಪಡೆದನೊ ಚಕ್ರವರ್ತಿಯೊಳ್ ತೈಲಪನೊಳ್ ಪಡೆದಂ ಮಹಿಮೋನ್ನತಿಯಂ ಪಡೆದಂ ಕವಿಚಕ್ರವರ್ತಿವೆಸರಂ ರನ್ನಂ
--------------
ರನ್ನ
ಪಲರಿರ್ದು ಕಾದಿದರ್ ಮೆ ಯ್ಗಲಿಗಳ್ ನಿನ್ನೊಂದೆ ಮೆಯ್ಯೊಳಂ ತವೆ ಕೊಂದೈ ಪಲರಂ ನಿನ್ನಂ ಪೆತ್ತಳ್ ಮೊಲೆವೆತ್ತಳೆ ವೀರಜನನಿವೆಸರಂ ಪೆತ್ತಳ್॥೫೬॥
--------------
ರನ್ನ
-->