ಒಟ್ಟು 33 ಕಡೆಗಳಲ್ಲಿ , 1 ಕವಿಗಳು , 19 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಮೀಂಗುಲಿಗವಕ್ಕಿ ಕೊಳನೊಳ್ಮೀಂಗೆರಗುವ ತೆರದಿನೆರಗಿ ನೋಡಿಲ್ಲಿರ್ದಂಪಿಂಗಾಕ್ಷನೆಂದು ಪವನಸುತಂಗರಿಪುವ ತೆರದಿನಂತದೇಂ ಸೊಗಯಿಸಿತೋ॥೪೫||
ವನಿತೆಯ ಕೇಶಮಂ ಸಭೆಯೊಳೆನ್ನನುಜಂ ತೆಗೆವಲ್ಲಿ ಗಂಡನಾಗನೆ ಭಗದತ್ತನಾನೆ ಬರಿಯೆಲ್ವುಡಿವನ್ನೆಗಮೊತ್ತೆ ಗಂಡನಾಗನೆ ಕೊಲಲೊಲ್ಲದಂಗಪತಿ ಬಿಲ್ಲೊಳೆ ಕೊಂಡೆಳೆವಲ್ಲಿ ಗಂಡನಾಗನೆ ಕುರುಬಾಲಸಂಹರಣ ಮಾತ್ರದೆ ಮಾರುತಿ ಗಂಡನಾದನೇ॥೨೭॥
ಸಭೆಯೊಳ್ ತಮ್ಮಯ ಪಕ್ಕದೆನ್ನನುಜನಾ ಪಾಂಚಾಲಿಯಂ ಪಂಚವಲ್ಲಭೆಯಂ ಮೋದೆಯುಮಲ್ಲಿ ಮಿಳ್ಮಿಳನೆ ನೋಡುತಿರ್ದ ಬಲ್ಲಾಳ್ಗಳಿಲ್ಲಿ ಭರಂಗೆಯ್ದಪರೀಪರಾಕ್ರಮಮುಮೀಪೆರ್ಮಾತುಮೀಗಂಡುಮೀಸುಭಟಾಲಾಪಮುಮೆಲ್ಲಮಾನೃಪತಿಗಳ್ಗೇನೆಂಬೆನೆಲ್ಲರ್ದುದೋ॥೩೬॥
ಸುತಶತಕಮುಂ ಸಹೋದರಶತಕಮುಮೆಲ್ಲಿತ್ತೊ ಮಗನೆ ಪೇಳೆಲ್ಲಿತ್ತೋಚತುರಂಗ ಸೈನ್ಯಮೆಲ್ಲಿದರತಿರಥಸಮರಥಮಹಾರಥಾರ್ಧರಥರ್ಕಳ್॥೪೪॥