ಒಟ್ಟು 33 ಕಡೆಗಳಲ್ಲಿ , 1 ಕವಿಗಳು , 25 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನಯನೆನಗೆಂದು ಮನ್ನಿಸಿ ತನಗುರುಗಜ್ಜಕ್ಕೆ ಪಾಕಶಾಸನನರ್ಧಾ ಸನಮೇರಿಸಿ ನೀರೇರಿಸಿ ಮನುಜಂಗಂ ಮಾನ್ಯ ಪದವಿಯಂ ಮಾಡಿದನೇ॥೪೦॥
--------------
ರನ್ನ
ತೆರಪಂ ನಿಟ್ಟಿಸಿ ಕುರುಪತಿ ಬರಸಿಡಿಲೆರಗುವವೊಲೆರಗಿಪೊಯ್ಯಲೊಡಂ ಮೆ ಯ್ಯರಿದು ಪವನಜನು ಮೇನೆಂ ದರಿಯದೆ ಮತಿವಿಕಳನಾಗಿ ಮೂರ್ಚ್ಛೆಗೆ ಸಂದಂ॥೨೬॥
--------------
ರನ್ನ
ನಡುವುಡಿವನ್ನಮೇರಿ ಬರಿಯೆಲ್ವುಡಿವನ್ನೆಗಮೊತ್ತಿ ಮೆಟ್ಟಿ ಮೆ ಯ್ಯಡಗಡಗಾಗೆ ಮುನ್ನುರಮನಿರ್ಬಗಿಯಾಗಿರೆ ಪೋಳ್ದು ನೆತ್ತರಂ ಕುಡಿಕುಡಿದಾರ್ದ ವೈರಿಯುಳಿದನ್ನೆಗಮೆನ್ನಳಲೆಂತು ಪೋಕುಮೆಂ ದಡಿಗಡಿಗಳ್ತು ತನ್ನಣುಗದಮ್ಮನನೀಕ್ಷಿಸಿದಂ ಸುಯೋಧನಂ॥೪॥
--------------
ರನ್ನ
ನಿಜಮಕುಟಸ್ಫುರನ್ಮಣಿಗಣಚ್ಛವಿಯಿಂ ಸುರಚಾಪಲೀಲೆ ಪಂ ಕಜವನದೊಳ್ ಮನಂಗೊಳಿಸೆ ತನ್ನಯ ಮೇಗೊಗೆದಿರ್ದ ನೀಲನೀ ರಜವನದಿಂ ಕರಂಗಿ ಕಮಲಾಕರದಿಂ ಪೊರಮಟ್ಟನಾಗಳಾ ಭುಜಯುಗತೋರಣಾಯಿತಗದಾಪರಿಘಂ ಫಣಿರಾಜಕೇತನಂ॥೨೭॥
--------------
ರನ್ನ
ಪಳಿಯಂ ಕೇಳ್ದೆನೊ ಮೇಣ್ನಡೆ ವಳಿಯಂ ತಪ್ಪಿದೆನೊ ಕಾಣೆನಣ್ಮಿಂದಂ ಕೂ ರ್ತಳಿದಿವರಂ ಪಗದೆನೊ ಪ ಚ್ಛಳಿದೆನೊ ಪೇಳ್ ಕೂಡಿ ನಿನ್ನೊಳಂಗಾಧಿಪತಿ॥೧೪॥
--------------
ರನ್ನ
ಮೀರಿದ ಪಗೆವನ ಪಟ್ಟಂ ಪಾರಿಸುವೆನೊ ಮುನ್ನಮಮರುಂಡಮೃತಮನೇಂ ಕಾರಿಸುವೆನೊ ಖಚರರನಡ ರ್ದೇರಿಸುವೆನೊ ಮೇರುಗಿರಿರ ತೂರಲ ತುದಿಯಂ॥೧೭॥
--------------
ರನ್ನ
ಮುಳಿದಾಂಪರ್ ಧರಣೀಶ್ವರರ್ ಮಿಗೆ ಪೆರರ್ ಬಿಲ್ಗೊಂಡುಮೇಗೆಯ್ವರೆ ನ್ನೊಳಮಿಂ ತೀರದ ಕಾರ್ಯಭರಮಂ ತೀರ್ಚಲ್ ಪೆರರ್ ಗಂಡರಿ ನ್ನೊಳರೇ ಪಾಂಡವರೆಂಬರೇಗಹನಮೆಂಬಾದರ್ಪದಂತಾಜಿಯೊಳ್ ಸುಳರಂಬೆತ್ತಿರೆ ಸತ್ತರೆನ್ನಿನಿಬರುಂ ತಮ್ಮಂದಿರುಂ ಮಕ್ಕಳುಂ ॥೧೨॥
--------------
ರನ್ನ
ರಸೆಗಿಳಿದನೊ ಮೇಣ್ ನಾಲ್ಕುಂ ದೆಸೆಗಳ ಕೋಣೆಗಳೊಳುಳಿದನೋ ಖಳನಿಲ್ಲೀ ವಸುಮತಿಯೊಳ್ ಗಾಂಧಾರಿಯ ಬಸಿರಂ ಮೇಣ್ ಮಗುಳೆ ಪೋಗಿ ಪೊಕ್ಕಿರ್ದನೋ॥೨೦॥
--------------
ರನ್ನ
ಸೊಕಮಿರ್ಕಕ್ಕಟ ದರ್ಭಪಾಣಿ ಯಮಜಂ ದರ್ವೀಕರ ವಾಯುಪು ತ್ರಕನುಂ ಜರ್ಜರಹಸ್ತನಿಂದ್ರತನಯಂ ದಸ್ರಾತ್ಮಜರ್ ದಂಡಮು ಷ್ಟಿಕರರ್ ಶಸ್ತ್ರವಿಡಂಬಮೇವುದವರ್ಗೆ ಪಾಂಚಾಲಿಯುಂ ಗಂಧದಾ ಯಕಿಯಾಗಿರ್ಪಿನಮಂದು ಮತ್ಸ್ಯಗೃಹದಿಂದೀನಿಗ್ರಹಂ ಪೊಲ್ಲದೇ॥೩೪॥
--------------
ರನ್ನ
ಹರಿಸಂಧಾನಕ್ಕೆ ವಂದಂದವಗಡಿಸಿದಹಂಕಾರಮೇನಾಯ್ತೊ ಕೃಷ್ಣಾಂ ಬರಕೇಶಾಕೃಷ್ಟಿಯಂ ಮಾಡಿಸಿದ ಮದಮದೇನಾಯ್ತೊ ಕೌಂತೇಯರಂ ಮ ಚ್ಚರದಿಂ ಕಾಂತಾರದೊಳ್ ತಿರ್ರನೆ ತಿರಿಪಿದ ಸೊರ್ಕೀಗಳೇನಾದುದೆಂದಾ ಕುರುವಂಶಾಧೀಶನಂ ಮೂದಲಿಸಿದನದಟಂ ಭೀಮನುದ್ದಾಮಭೀಮಂ॥೧೪॥
--------------
ರನ್ನ
-->