ಒಟ್ಟು 22 ಕಡೆಗಳಲ್ಲಿ , 1 ಕವಿಗಳು , 20 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಮೀರಿದ ಪಗೆವನ ಪಟ್ಟಂಪಾರಿಸುವೆನೊ ಮುನ್ನಮಮರುಂಡಮೃತಮನೇಂಕಾರಿಸುವೆನೊ ಖಚರರನಡರ್ದೇರಿಸುವೆನೊ ಮೇರುಗಿರಿರ ತೂರಲ ತುದಿಯಂ॥೧೭॥
ಯಮವಾಯುತ್ರಿದಶಾಶ್ವಿನನೀತನಯರುಂ ತಾವಾದರೀಯಯ್ವರುಂಹಿಮಕೃದ್ವಂಶಕಳಂಕರಂತವರ್ಗಮಾ ಪಾಂಚಾಲ ಭೂಪಾಲ ಪುತ್ರಿಮನೋವಲ್ಲಭೆಯಾದಳೆಂದೊಡೆ ಗಡಂ ಕೇಳಲ್ಕದೇಂ ಕ್ಷತ್ರಧರ್ಮಮೊ ಭೂಲೋಕಕೆ ಪೇಳಿಮೀ ದೊರೆಯ ಚಾರಿತ್ರಂ ಪೃಥಾಪುತ್ರರಾ॥೩೭॥
ವನರುಹವಿಷ್ಟರಂ ರುಚಿರಂ ರೇಚಕ ಪೂರಕ ಕುಂಭಕಕ್ರಿಯಾಮನಮಿರೆ ನೆತ್ತಿಯೊಳ್ ದರನಿಮೀಲಿತ ದೃಷ್ಷಿ ನಿವಿಷ್ಟ ಮಾಗೆ ಮೂಗಿನತುದಿಯೊಳ್ ನೀರುದ್ಧ ಮಂತ್ರ ಪದಾಕ್ಷರಂಗಳಂಜಿನುಗುತಲಿರ್ದನಾ ಪರಮಯೋಗಿಯವೊಲ್ ಫಣಿರಾಜಕೇತನಂ॥೧೫॥
ವಳಿತಶಿಳೀಮುಖಮುತ್ಪಳದಳನಯನಂ ಕಂಜರಂಜಿತ ಜಯಲಕ್ಷ್ಮೀವಿಳಸಿತಮೆನೆ ದಿಟ್ಟಿಗೆ ಕೊಳುಗುಳಮಂ ಪೋಲ್ದತ್ತು ಪೂಗೊಳಂ ಕೌರವನಾ॥೧೩॥
ಸಭೆಯೊಳ್ ತಮ್ಮಯ ಪಕ್ಕದೆನ್ನನುಜನಾ ಪಾಂಚಾಲಿಯಂ ಪಂಚವಲ್ಲಭೆಯಂ ಮೋದೆಯುಮಲ್ಲಿ ಮಿಳ್ಮಿಳನೆ ನೋಡುತಿರ್ದ ಬಲ್ಲಾಳ್ಗಳಿಲ್ಲಿ ಭರಂಗೆಯ್ದಪರೀಪರಾಕ್ರಮಮುಮೀಪೆರ್ಮಾತುಮೀಗಂಡುಮೀಸುಭಟಾಲಾಪಮುಮೆಲ್ಲಮಾನೃಪತಿಗಳ್ಗೇನೆಂಬೆನೆಲ್ಲರ್ದುದೋ॥೩೬॥