ಒಟ್ಟು 95 ಕಡೆಗಳಲ್ಲಿ , 1 ಕವಿಗಳು , 64 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೂಡೆ ವಿರೋಧಿಯಂ ತರಿದು ತದ್ವಶಮಾಂಸದೆ ಭೂತಭೋಜನಂ ಮಾಡದೆ ವೈರಿವಾರವನಿತಾವದನಾಂಬುರುಹಕ್ಕೆ ಬೆಳ ರ್ಮಾಡದ ಬಂಧುಶೋಕದೊಳೆ ಪೊರ್ದಿದ ಬಂಧುಜನಕ್ಕೆ ಸಂತಸಂ ಮಾಡದೆ ಸಂಧಿಮಾಡುವನೆ ಪಾಂಡವರೊಳ್ ಫಣಿರಾಜಕೇತನಂ॥೪೯॥
--------------
ರನ್ನ
ಕೂರಿಸಿ ವೀರ ಶ್ರೀಯಂ ಕೂರದರಂ ಕೊಂದು ಸಮರಜಯಮಂ ಮಾಡಲ್ ಕೂರಸಿಯೊಳ್ ನೆಲಸುಗೆ ಕಂ ಠೀರವವಾಹನೆ ಚಳುಕ್ಯಕಂಠೀರವನಾ
--------------
ರನ್ನ
ಕೆಲರಂ ನುಣ್ಣನೆ ನೊಣೆದಂ ಕೆಲರಂ ಪಿಡಿದಡಸಿ ನುಂಗಿದಂ ಕುರುಕುಲರಂ ಕೆಲರಂ ಸೌಳನೆ ಸೀಳ್ದಂ ಕೆಲರಂ ಮಾರುತಿ ಜವಂಗೆ ಬಾಣಸುಗೆಯ್ದಂ॥೯॥
--------------
ರನ್ನ
ಕೆಳೆಯಂಗಾಯ್ತಸುಮೋಕ್ಷಮಾಗದೆನಗಂ ಬಾಷ್ಮಾಂಬು ಮೋಕ್ಷಂ ಧರಾ ತಳಮಂ ಕೊಟ್ಟನಿವಂ ಜಳಾಂಜಳಿಯುಮಂ ನಾಂ ಕೊಟ್ಟೆನಲ್ಲನ್ಯಮಂ ಡಳಮಂ ಸುಟ್ಟನಿವಂ ಪ್ರತಾಪ ಶಿಖಿಯಿಂದಾನೀತನಂ ಸತ್ಕ್ರಿಯಾ ನಳನಿಂ ಸುಟ್ಟೆನುಮಿಲ್ಲ ಮತ್ಪ್ರಿಯತಮಂ ಕರ್ಣಂಗಿದೇಂ ಕೂರ್ತೆನೋ॥೩೧॥
--------------
ರನ್ನ
ಖಂಡಿತಮೆನಿಪ್ಪ ಪರಮಹಿ ಮಂಡಲಧವಳಾತಪತ್ರಸಂಪದ಼ಮೆನಗೇ ಭಂಡಮದನೊಲ್ವೆನೊಲ್ಲೆನ ಖಂಡಿತಮಭಿಮಾನಮದನೆ ಬಲ್ವಿಡಿವಿಡಿವೆಂ॥೫೩॥
--------------
ರನ್ನ
ಗಳಿತಶರಮಾಯ್ತು ಹಸ್ತಂ ಗಳಿತರಣೋತ್ಸಿಹಮಾಯ್ತು ಹೃದಯಂ ನಯನಂ ಗಳಿತಾಶ್ರುವಾಯ್ತು ಕೌರವ ಕುಲತಿಲಕಂಗೆ ಕುಮಾರನಂ ಕಾಣಲೊಡಂ॥೬೧॥
--------------
ರನ್ನ
ಗುರು ಕವಚಂ ಕರ್ಣಂ ಬಾ ಹುರಕ್ಕೆ ಸುರಸಿಂಧುನಂದನಂ ಸೀಸಕಮಾ ಗಿರೆ ಮೆಯ್ಗೆ ಮುಳಿಯಲರಿಯದೆ ಕುರುರಾಜನ ತೊಡೆಯನುಡಿವೆನೆಂದಂ ಭೀಮಂ॥೨೮॥
--------------
ರನ್ನ
ಗೆಲಲಾರ್ಪೊಡಿರಿದು ಗೆಲ್ವುದು ಗೆಲಲಾರದೊಡಣ್ಮಿ ಸಾವುದಾಳ್ಗಿನಿತೆ ಗುಣಂ ಗೆಲಲುಂ ಸಾಯಲುಮಾರದೆ ತೊಲಗಿದೊಡೆ ನೆಗಳ್ತೆ ತೊಲಗದಿರ್ಕುಮೆ ಮೈಯ್ಯಂ॥೨೧॥
--------------
ರನ್ನ
ಜತುಗೇಹಾನಲದಾಹದಿಂ ವಿಷವಿಶೇಷಲಿಪ್ತಗುಪ್ತಾನ್ನದಿಂ ಕೃತಕದ್ಯೂತವಿನೋದದಿಂ ದ್ರುಪದಜಾಕೇಶಾಂಬರಕೃಷ್ಟಿಯಿಂ ಧೃತರಾಷ್ಟ್ರಾತ್ಮಜ ಪಾಂಡುರಾಜಸುತರಂ ಮುನ್ನಂ ಕೊಲಲ್ ಕೋರಿದಯ್ ಗಥಕಾಲಂ ಲಯಕಾಲಮಾಯ್ತು ನಿನಗಿನ್ನಾಯ್ತಂತ್ಯಕಾಲಂ ಗಡಾ॥೪೧॥
--------------
ರನ್ನ
ಜತುಗೇಹಾನಲಬೀಜಮುಗ್ರವಿಷಸಂಜತಾಂಕುರಂ ಕ್ರೀಡನೋ ದ್ದತಿಕೃದ್ದ್ಯೂತವಿನೋದಪಲ್ಲವಚಯಂ ಪಾಂಚಾಲರಾಜಾತ್ಮಜಾ ಯತಕೇಶಗ್ರಹಪುಷ್ಪಮಾಗೆ ಬೆಳೆದಾ ವೈರದ್ರುಮಂ ಕೌರವ ಕ್ಷಿತಿಪಾಲೋರು ಕಿರೀಟಭಂಗ ಫಲಮಂ ಪೇಳ್ ಮಾಡದೇಂ ಪೋಕುಮೇ॥೫೭॥
--------------
ರನ್ನ
ಜನಕಂಗೆ ಜಲಾಂಜಲಿಯಂ ತನೂಭವಂ ಕುಡುವುದುಚಿತಮದುಗೆಟ್ಟೀಗಳ್ ನಿನಗಾಂ ಕುಡುವಂತಾದುದೆ ತನೂಜ ನೀಂ ಕ್ರಮವಿಪರ್ಯಯಂ ಮಾಡುವುದೇ॥೬೨॥
--------------
ರನ್ನ
ಜನನೀ ಸ್ತನ್ಯಮನುಂಡೆನಾಂ ಬಳಿಕೆ ನೀಂ ಸೋಮಾಮೃತಂ ದಿವ್ಯ ಭೋ ಜನಮೆಂಬಿಂತಿವನುಂಡೆನಾಂ ಬಳಿಕ ನೀಂ ಬಾಲತ್ವದಿಂದೆಲ್ಲಿಯುಂ ವಿನಯೋಲ್ಲಂಘನಮಾದುದಿಲ್ವ ಮರಣಕ್ಕನ್ನಿಂದೆ ನೀಂ ಮುಂಚಿದಯ್ ಮೊನೆಯೊಳ್ ಸೂಳ್ ತಡಮಾಯ್ತಿದೊಂದೆಡೆಯೊಳಂ ಹಾ ವತ್ಸ ದುಶ್ಯಾಸನಾ॥೭॥
--------------
ರನ್ನ
ಜಲದಾನಕ್ರಿಯೆಯಂ ವಾ ಗ್ಜಲದಿಂ ಕೋಪಾಗ್ನಿಯಿಂದೆ ದಹನಕ್ರಿಯೆಯಂ ಕೆಳೆಯಂಗೆ ಮಾಡಿದಯ್ ಕುರು ಕುಲದರ್ಪಣ ಮರೆವುದಿನ್ನಹರ್ಪತಿಸುತನಂ॥೩೨॥
--------------
ರನ್ನ
ತನಯನೆನಗೆಂದು ಮನ್ನಿಸಿ ತನಗುರುಗಜ್ಜಕ್ಕೆ ಪಾಕಶಾಸನನರ್ಧಾ ಸನಮೇರಿಸಿ ನೀರೇರಿಸಿ ಮನುಜಂಗಂ ಮಾನ್ಯ ಪದವಿಯಂ ಮಾಡಿದನೇ॥೪೦॥
--------------
ರನ್ನ
ತರುಣೋತ್ತುಂಗಶಶಾಂಕಖಂಡಮೆ ಭುಜಂಗೇಂದ್ರನಂ ಕುರಮುನ್ಮೀಲಿತಮಟ್ಟಹಾಸಮೆ ದಳಾನೀಕಂ ವೃಷಂ ಪುಷ್ಪ ಮೀ ಶ್ವರಶೈಲಂ ಫಲಮಾಗೆ ಕೋಮಲಮುಖೀಗೌರೀಲತಾಶ್ಲಿಷ್ಟ ಶಂ ಕರಕಲ್ಪದ್ರುಮನೀಗಭೀಷ್ಟ ಫಲಮಂ ಚಾಳುಕ್ಯನಾರಾಯಣಂ
--------------
ರನ್ನ
-->