ಒಟ್ಟು 524 ಕಡೆಗಳಲ್ಲಿ , 1 ಕವಿಗಳು , 174 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಸ಼ಮಬಲ ಭವದ್ವಿಕ್ರಮಮಸಂಭವಂ ಪೆರರ್ಗೆ ನಿನ್ನನಾನಿನಿತಂ ಪ್ರಾರ್ಥಿಸುವೆನಭಿಮನ್ಯು ನಿಜ ಸಾಹಸೈಕದೇಶಾನುಮರಣಮೆಮಗಕ್ಕೆ ಗಡಾ॥೫೭॥
ಅಸುಹೃತ್ಸೇನೆಗೆ ಸಾಲ್ವನೊರ್ವನೆ ಗಡಂ ಲುದ್ರಾವತಾರಂ ಗಡಂನೊಸಲೊಳ್ ಕಣ್ಗಡಮೆಂದು ನಚ್ಚಿ ಪೊರೆದೆಂ ತಾನಕ್ಕೆ ತಮ್ಮಮ್ಮನಕ್ಕಿಸಲಂಬಂ ತಿರುವಾಯ್ಗೆ ತಂದರಿವರೇ ತಾಮಿರ್ವರುಂ ಕಯ್ದುವಂಬಿಸುಟರ್ ಜೋಳದ ಪಾಳಿಯಂ ಬಗೆದರಿಲ್ಲಾದ್ರೌಣಿಯುಂ ದ್ರೋಣನುಂ
ಆನರಿವೆಂ ಪೃಥೆಯರಿವಳ್ದಾನವರಿಪುವರಿವನರ್ಕನರಿವಂ ದಿವ್ಯಜ್ಞಾನಿಸಹದೇವನರಿವಂನೀನಾರ್ಗೆಂದಾರುಮರಿಯರಂಗಾಧಿಪತಿ॥೧೮॥
ಆನುಂ ದುಶ್ಯಾಸನನುಂನೀನುಂ ಮೂವರೆ ದಲಾತನುಂ ಕಳಿದ ಬಳಿಕ್ಕಾನುಂ ನೀನೆ ದಲೀಗಳ್ನೀನುಮಗಲ್ದೆತ್ತವೋದೆಯಂಗಾಧಿಪತಿ॥೧೧॥
ಆಮ್ಮಗನೆನಾಗೆ ಧರ್ಮಜನೇಮ್ಮಗನಲ್ಲನೆ ಬಳಿಕ್ಕೆ ನೀಮುಂ ತಾಮುಂನಿಮ್ಮೊಳ್ ನೇರ್ಪಡುಗಿಡದೆ ಸುಖಮ್ಮುನ್ನಿನ ತೆರದೆ ಬಾಳ್ವುದಾಂ ಬೆಸಕೆಯ್ಯೆಂ॥೧೨॥
ಆರವಮಂನಿರ್ಜಿತಕಂಠೀರವರವಮಂ ನಿರಸ್ತಘನರವಮಂ ಕೋಪಾರುಣನೇತ್ರಂ ಕೇಳ್ದಾನೀರೊಳಗಿರ್ದುಂ ಬೆಮರ್ತನುಲಗಪತಾಕಂ॥೨೨॥
ಆರೊಡನೆ ನುಡಿವೆನಳ್ತಿಯೊಳಾರೊಡನೋಲಗದೊಳಿರ್ಪೆನಾರೊಡನೆ ಸಮಂತಾರೋಗಿಪೆನೇರುವೆನಾನಾರೊಡನೆನ್ನಣುಗರಿಲ್ಲದಿಭವಾಜಿಗಳಂ॥೩೦॥
ಇಂದಾನಿದೆಂ ಮೇಣಿನನಂದನ ಕೇಳ್ ಪಾಂಡುತನಯರಾದರ್ ನಿನ್ನಂಕೊಂದುಂ ದುಶ್ಯಾಸನನಂಕೊಂದುಂ ಬರ್ದುಕುವರೆ ಬರ್ದುಕರಂಗಿಧಿಪತೀ॥೩೭॥
ಇದರೊಳ್ ಮೂರ್ಧಾಭಿಷಿಕ್ತರ್ ಮಣಿಮಕುಟಧರರ್ ಕೃಷ್ಣೆ ಬಾಹಾಬಳಾಗ್ರ್ಯರ್ಕದನಪ್ರೋಚ್ಚಂಡದಂಡಕ್ರಮವಿಜಿತರಿಪುಕ್ಷತ್ರಿಯರ್ ವೀರಲಕ್ಷ್ಮೀಸದನರ್ಸೋಮಾಮೃತಾಸ್ವಾದನಶುಚಿವದನರ್ ಮುನ್ಮಳ್ಕಾಡಿದರ್ ನೋಡಿದು ನಿನ್ನೀ ಕೇಶಪಾಶಂ ಕುರುಕುಲಪತಿಗಾಯ್ತಲ್ತೆ ಕೀನಾಶಪಾಶಂ॥೪೯॥
ಇದು ಲಾಕ್ಷಾಗೇಹದಾಹಕ್ಕಿದು ವಿಷಮವಿಷಾನ್ನಕ್ಕಿದಾ ನಾಡ ಜೂದಿಂಗಿದು ಪಾಂಚಾಲೀಪ್ರಪಂಚಕ್ಕಿದು ಕೃತಕಸಭಾಲೋಕನಭ್ರಾಂತಿಗೆಂದೋವದೆ ಪೊಯ್ದಂ ತೋಳ್ಗ಼ಳನಗಲ್ದುರಮಂ ಕೆನ್ನೆಯಂ ನೆತ್ತಿಯಂ ಕೋಪದೊಳಯ್ದಂ ದುರ್ನಯಕ್ಕಯ್ದೆಡೆಯನುರು ಗದಾದಂಡದಿಂ ಭೀಮಸೇನಂ॥೧೯॥
ಇನಸುತನಿರವಂ ದುಶ್ಯಾಸನನಿರವಂ ಕಂಡುಮಿನ್ನುಮೆನ್ನಸುವಿದು ನೆಟ್ಟನೆ ಪೋದುದಿಲ್ಲ ಕಲ್ಲೆರ್ದೆತನದಿಂದೆನ್ನಂತು ಬರ್ದನಾವನುಮೊಳನೇ॥೨೮॥
ಇನಿಸಿನಿಸುತಿಂಬೆವೊರ್ಮೆಯೆತಿನೆ ತವುಗುಮಿದೆಂದು ತಾಯುಮಾನೆಯ ಪೆಣನಂತಿನಲಾರದೆ ಪೆರರ್ಗಿಕ್ಕದೆಮನಮಂ ಪಸುತಿರ್ದುವಲ್ಲಿ ಲೋಭಿಮರುಳ್ಗಳ್॥೩೮॥
ಇಭಶೈಲಂಗಳನೇರಿಯೇರಿ ರುಧಿರಸ್ರೋತಂಗಳಂ ದಾಂಟಿದಾಂಟಿಭದೋರನೀಲಲತಾ ಪ್ರತಾನವಿಪಿನ ವ್ರಾತಂಗಳೊಳ್ ಸಿಲ್ಕಿ ಸಿಲ್ಕಿ ಭರಂಗೆಯ್ದುರದೆಯ್ದಿ ಸಂಜಯ ಶಿರಸ್ಕಂಧಾವಲಂಬಂ ಕುರುಪ್ರಭು ಕಂಡಂ ಶಲಜಾಲಜರ್ಜರಿತ ಗಾತ್ರತ್ರಾಣನಂ ದ್ರೋಣನಂ॥೪೮॥
ಇರಲಿಂತೀಮಾದ್ರಿಪುತ್ರರ್ ಬಡವುಗಳವರೇಗೆಯ್ವರಿಂ ಧರ್ಮಪುತ್ರಂಬೆರಸೀಗಳ್ ಬರ್ಕೆ ಭೀಮಂ ಹರಿಸುತನೊಡನೀ ಮೂವರುಂ ಬರ್ಕೆ ಮೇಣಯ್ವರುಮಿಂಬರ್ಕೀ ಕೃತಾಂತಾತ್ಮಜಪವನಜಗಾಂಡೀವಧನ್ವರ್ಕಳೀಮೂವರೊಳೊರ್ವಂ ಕೃಷ್ಣ ಬರ್ಕಿಂ ಪೊಣರಲನಿಬರುಂ ಬರ್ಕೆ ಮೇಣ್ ಬನ್ನಮೀವೆಂ॥೪೨॥
ಈ ದೊರೆಯರಮಗನುಂ ಮೃಷವಾದಂ ನೋಡೆಂದು ಧರ್ಮನಂ ಮೂದಲಿಸಲ್ಪೋದಂ ಪುತ್ರನನಲಸಲ್ಪೋದನೆ ಯಮಪುರಕೆ ಮುಕ್ಥಬಾಣಂ ದ್ರೋಣಂ॥೨೫॥