ಒಟ್ಟು 35 ಕಡೆಗಳಲ್ಲಿ , 1 ಕವಿಗಳು , 32 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಳದೊಳ್ ಮೀನಿರ್ಪವೊಲ್ ನೀಂ ಕೊಳದೊಳೆ ಮುಳುಗಿರ್ದಕಟಾ ಕೋಡಸೇಡಿಂ ಗೊಳಗಾದಯ್ ನಿನ್ನ ದುರ್ಯೋಧನವೆಸರ್ಗಿದು ಲಜ್ಜಾಕರಂ ತೋರಿದಯ್ ನಿ ನ್ನಳವಂ ಚಿಃ ಸತ್ತರೇಂ ಪುಟ್ಟರೆ ಪೊರಮಡು ನೀಂ ಕಯ್ದುಗೊಳ್ ಕೌರವೇಂದ್ರಾ ಚಳವಜ್ರಂ ಬಂದನೀಗಳ್ ಕುರುಕುಲಮಥನೋದ್ಭೀಕರಂ ಭೀಮಸೇನಂ॥೧೩॥
--------------
ರನ್ನ
ತನುಜಾನುಜರ ವಿಯೋಗದ ಮನಃಕ್ಷತಂ ನೋಯಿಸಲ್ಕೆ ನೆರೆಯದೆ ಸಮರಾ ವನಿಜಾತ ಚರಣಕ್ಷತ ಮಿನಿಸು ನೋಯಿಕುಮೆ ವಜ್ರಮನನಪ್ಪೆನ್ನಂ॥೧೯॥
--------------
ರನ್ನ
ತಪನಸುತಂ ಬೇರಾಂ ಬೇ ರೆ ಪೊಲ್ಲದಂ ನುಡಿದನಾವಗಂ ರ ಕ್ಷಿಪ ಕಯ್ದುವನೆನಲಾ ಮರೆ ಯಪಾಂಡವಂ ಬಗೆದು ನೋಳ್ಪೊಡಶ್ವತ್ಥಾಮಂ॥೨೦॥
--------------
ರನ್ನ
ದಿನಕರ ತನಯನ ದುಶ್ಯಾ ಸನನವಿಯೋಗದೊಳಮಿಂದುವರೆಗಂ ನೋವಿ ಲ್ಲೆನಗಹಿತರೊಡನೆ ಸಂಧಿಗು ಡೆನೆ ನೊಂದೆಂ ಸ್ವಜನಗುರುಜನಾಭಾಯರ್ಥನೆಯಿಂ॥೭॥
--------------
ರನ್ನ
ಧವಳ ಗಜೇಂದ್ರಮುಂ ಧವಳಚಾಮರಮುಂ ಧವಳಾತಪತ್ರಮುಂ ಧವಳವಿಲೋಚನೋತ್ಪಲ ವಧೂಜನಮುಂ ಬೆಲಸಷ್ಟದಿಕ್ತಟಂ ಧವಳಿಸೆ ಕೀರ್ತಿಯಿಂ ಧವಳ ಮಂಗಳಗೇಯದಿನೊಪ್ಪಿ ಬರ್ಪ ಕೌ ರವಧವಳಂಗೆ ದೇಸಿಗನೆ ಬರ್ಪವೊಲೊರ್ವನೆ ಬರ್ಪುದಾದುದೆ॥೪೧॥
--------------
ರನ್ನ
ನಿನ್ನೀ ಕೆಳೆಯ ಸುಯೋಧನ ನನ್ನೋಡದೆ ನುಡಿಯದಪ್ಪಿಕೊಳ್ಳದೆ ಬೆಸನೇ ನೆನ್ನದೆ ಜೀಯೆನ್ನದೆ ದೇ ವೆನ್ನದದೇಕುಸಿರದಿರ್ಪೆಯಂಗಾಧಿಪತಿ॥೧೬॥
--------------
ರನ್ನ
ಪುದುವಾಳಲ್ಕಣಮಾಗದೆಂತುಮವರೊಳ್ ಸಂಧಾನಮಂ ಮಿಡಲಾ ಗದು ನೀಮಿಲ್ಲದೇಯಜ್ಜ ಬಿಲ್ಲಗುರುಗಳ್ ತಾಮಿಲ್ಲದಾ ಕರ್ಣನಿ ಲ್ಲದೆ ದುಶ್ಯಾಸನನಿಲ್ಲದಾರೊಡನೆ ರಾಜ್ಯಂಗೆಯ್ವೆನಾರ್ಗೆನ್ನ ಸಂ ಪದಮಂ ತೋರುವೆನಾರ್ಗೆತೋರಿ ಮೆರೆವೆಂ ನಾನಾ ವಿನೋದಂಗಳಂ॥೫೨॥
--------------
ರನ್ನ
ಪ್ರಿಯಮಿತ್ರನೆನಗೆ ಕಮಲ ಪ್ರಿಯನಂದನನವನನೆನ್ನ ಪಕ್ಕದೆ ಪಳಿದ ಪ್ರಿಯಮಂ ಮಾಡಿದನಾ ಕಳ ಶಯೋನಿ ನೆಗ಼ಳ್ದಿಂದ್ರಸುತನಿನೇಗುಂದಿದನೋ॥೧೯॥
--------------
ರನ್ನ
ಭವದಹಿತನಿಲ್ಲಿದಂ ಕೌ ರವಾರಿ ನೋಡೆಂದು ಮೂಡಿ‌ಮುಳ್ಕಾಡಿಯೆ ತೋ ರ್ಪವೋಲಲ್ಲಿ ಮೂಡಿ ಮುಳ್ಕಾ ಡುವ ವಿಹಗಾವಳಿಗಳೇಂ ಮನಂಗೊಳಿಸಿದುವೋ॥೪೪॥
--------------
ರನ್ನ
ಮಲುದಾತ್ಮಜ ನಿಜರಿಪು ತಲೆ ಗರೆದಿರ್ದಪನಿಲ್ಲಿ ನೋಡು ಕೊಳದೊಳಗೆಂಬಂ ತಿರೆ ಪೊಳೆದು ತೋರ್ಪ ಜಲಚರ ಪರಿಕರಮರಿಪಿದುವು ತಾಮೆ ದುರ್ಯೋಧನನಂ॥೪೬॥
--------------
ರನ್ನ
ಮಹಿಭೂಭೃಚ್ಛತ್ರಶೂನ್ಯಂ ಕನಕಮಹಿಧರಂ ದ್ರೋಣವೃಕ್ಷಿದಿಶೂನ್ಯಂ ಗುಹೆ ಸಿಂಹಾನೀಕ ಶೂನ್ಯಂ ದೆಸೆದಿಗಿಭಟಾಶೂನ್ಯಮಾದಂತೆ ವಾಯು ಸ್ಪ್ಹಹಭೀಮೋದ್ದಾಮ ಬಾಹಾಬಲ ದಳಿತಕುಭೃದ್ವರ್ಗಶೂನ್ಯಂ ವಿಷಾದಾ ವಹಮಕ್ಕುಂ ಮುನ್ನಮೆನ್ನಿರ್ಪರಿಕೆಯ ಸಭೆ ಮತ್ತೆಂತದಂ ಪೊಕ್ಕು ನೋಳ್ಪೆಂ॥೭೨॥
--------------
ರನ್ನ
ಮೀಂಗುಲಿಗವಕ್ಕಿ ಕೊಳನೊಳ್ ಮೀಂಗೆರಗುವ ತೆರದಿನೆರಗಿ ನೋಡಿಲ್ಲಿರ್ದಂ ಪಿಂಗಾಕ್ಷನೆಂದು ಪವನಸು ತಂಗರಿಪುವ ತೆರದಿನಂತದೇಂ ಸೊಗಯಿಸಿತೋ॥೪೫||
--------------
ರನ್ನ
ಮುಳಿಸಿಂ ನಂಜಕ್ಕಿಕೊಂದಂದಿನ ಜತುಗೃಹದೊಳ್ ಸುಟ್ಟುಕೊಂದಂದಿನುರ್ವೀ ತಳಮಂ ಜೂದಾಡಿ ಗೆಲ್ದಂದಿನ ನಿಜಕಬರೀನೀವಿಬಂಧಂಗಳಂ ದೋ ರ್ವಳದಿಂದಂ ತಮ್ಮನಿಂದಂ ತೆಗೆಯಿಸಿ ನಡೆದಾ ನೀಚನಾ ದ್ರೋಹನಾ ಸಂ ಚಳನಾ ಚಂಡಾಲನಾ ಪಾತಕನಿರವನಿದಂ ನೋಡು ಪಂಕೇಜವಕ್ತ್ರೇ॥೪೫॥
--------------
ರನ್ನ
ಯಮವಾಯುತ್ರಿದಶಾಶ್ವಿನನೀತನಯರುಂ ತಾವಾದರೀಯಯ್ವರುಂ ಹಿಮಕೃದ್ವಂಶಕಳಂಕರಂತವರ್ಗಮಾ ಪಾಂಚಾಲ ಭೂಪಾಲ ಪು ತ್ರಿಮನೋವಲ್ಲಭೆಯಾದಳೆಂದೊಡೆ ಗಡಂ ಕೇಳಲ್ಕದೇಂ ಕ್ಷತ್ರಧ ರ್ಮಮೊ ಭೂಲೋಕಕೆ ಪೇಳಿಮೀ ದೊರೆಯ ಚಾರಿತ್ರಂ ಪೃಥಾಪುತ್ರರಾ॥೩೭॥
--------------
ರನ್ನ
ರಸೆಗಿಳಿದನೊ ಮೇಣ್ ನಾಲ್ಕುಂ ದೆಸೆಗಳ ಕೋಣೆಗಳೊಳುಳಿದನೋ ಖಳನಿಲ್ಲೀ ವಸುಮತಿಯೊಳ್ ಗಾಂಧಾರಿಯ ಬಸಿರಂ ಮೇಣ್ ಮಗುಳೆ ಪೋಗಿ ಪೊಕ್ಕಿರ್ದನೋ॥೨೦॥
--------------
ರನ್ನ
-->