ಒಟ್ಟು 19 ಕಡೆಗಳಲ್ಲಿ , 1 ಕವಿಗಳು , 19 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೊಣೆಯಿಂದಂ ತೆಗೆವಾಗಳೊಂದು ತುಡುವಾಗಳ್ ಪತ್ತುಬಾಣಂ ಧನು ರ್ಗುಣದಿಂದಂ ಬಿಡುವಲ್ಲಿ ನೂರು ಪರಿವಾಗಳ್ ಸಾಸಿರಂ ವೈರಿಮಾ ರ್ಗಣಮಂ ಛೇದಿಸುವಲ್ಲಿ ಲಕ್ಕೆ ನಡುವಾಗಳ್ ಕೋಟಿ ಸೇನಾಂಗದೊಳ್ ಗಣನಾತೀತಮಿದೆಂದೊಡೇವೊಗಳ್ವುದೋ ಬಿಲ್ಬಲ್ಮೆಯಂ ಪಾರ್ಥನಾ॥೩॥
--------------
ರನ್ನ
ನುಡಿಯದೆ ಪೋಗಲೀಯೆನೆಲೆ ಪೋದೊಡೆ ಧೂರ್ಜಟಿಯಾಣೆ ಮೀರಿ ಪೋ ದೊಡೆ ಕಲಿಭೀಮನಾಣೆ ಧೂರ್ಜಟಿಯಾಣೆಗೆ ನಿಂದು ಭೀಮನೆಂ ದೊಡೆ ಮುಳಿದಟ್ಟಿ ಕುಟ್ಟಲರಸಂ ಗದೆಗೊಂಡೊಡೆ ಭೂತಕೋಟಿಯುಂ ಬಡಿಗೊಳೆ ಸಂಜಯಂ ನಯದೆ ಬಗ್ಗಿಸಿದಂ ಫಣಿರಾಜಕೇತುವಂ॥೪೬॥
--------------
ರನ್ನ
ಪುಟ್ಟಿದ ನೂರ್ವರುಮೆನ್ನೊಡ ವುಟ್ಟಿದ ನೂರ್ವರುಮಿದಿರ್ಚಿ ಸತ್ತೊಡೆ ಕೋಪಂ ಪುಟ್ಟಿ ಪೊದಳ್ದುದು ಸತ್ತರ್ ಪುಟ್ಟರೆ ಪಾಂಡವರೊಳಿರಿದು ಛಲಮನೆ ಮೆರೆವೆಂ॥೫೪॥
--------------
ರನ್ನ
ರಸೆಗಿಳಿದನೊ ಮೇಣ್ ನಾಲ್ಕುಂ ದೆಸೆಗಳ ಕೋಣೆಗಳೊಳುಳಿದನೋ ಖಳನಿಲ್ಲೀ ವಸುಮತಿಯೊಳ್ ಗಾಂಧಾರಿಯ ಬಸಿರಂ ಮೇಣ್ ಮಗುಳೆ ಪೋಗಿ ಪೊಕ್ಕಿರ್ದನೋ॥೨೦॥
--------------
ರನ್ನ
-->