ಒಟ್ಟು 18 ಕಡೆಗಳಲ್ಲಿ , 1 ಕವಿಗಳು , 18 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೊನೆಯೊಳಿದಿರ್ಚಿ ಸತ್ತಭಟನಂ ಗಜದೃಷ್ಟಿಯೊಳಣ್ಮಿ ಬೀ ರನನದಟಿಂ ಸಹಸ್ರಭಟರಂ ರಣದೊಳ್ ಪೊಣರ್ದಿಕ್ಕಿ ಸತ್ತ ಗಂ ಡನನರಸುತ್ತೆ ಬರ್ಪ ಸುರಸುಂದರಿಯರ್ಕಳನೀಕ್ಷಿಸುತ್ತುಮೊ ಯ್ಯನೆ ನಡೆದಂ ಪರಾಕ್ರಮನಿಕೇತನನಾ ಫಣಿರಾಜಕೇತನಂ॥೨೦॥
--------------
ರನ್ನ
ಯಮವಾಯುತ್ರಿದಶಾಶ್ವಿನನೀತನಯರುಂ ತಾವಾದರೀಯಯ್ವರುಂ ಹಿಮಕೃದ್ವಂಶಕಳಂಕರಂತವರ್ಗಮಾ ಪಾಂಚಾಲ ಭೂಪಾಲ ಪು ತ್ರಿಮನೋವಲ್ಲಭೆಯಾದಳೆಂದೊಡೆ ಗಡಂ ಕೇಳಲ್ಕದೇಂ ಕ್ಷತ್ರಧ ರ್ಮಮೊ ಭೂಲೋಕಕೆ ಪೇಳಿಮೀ ದೊರೆಯ ಚಾರಿತ್ರಂ ಪೃಥಾಪುತ್ರರಾ॥೩೭॥
--------------
ರನ್ನ
ಸುತಶತಕಮುಂ ಸಹೋದರ ಶತಕಮುಮೆಲ್ಲಿತ್ತೊ ಮಗನೆ ಪೇಳೆಲ್ಲಿತ್ತೋ ಚತುರಂಗ ಸೈನ್ಯಮೆಲ್ಲಿದ ರತಿರಥಸಮರಥಮಹಾರಥಾರ್ಧರಥರ್ಕಳ್॥೪೪॥
--------------
ರನ್ನ
-->