ಒಟ್ಟು 90 ಕಡೆಗಳಲ್ಲಿ , 1 ಕವಿಗಳು , 73 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಧನೃಪಸುತನೆಯೋ ಜಾ ತ್ಯಂಧನೆಯೋ ಮೆಟ್ಟದಗಲ್ದು ಪೋಗೆನುತುಂ ಕೋ ಪಾಂಧರ್ ಜಡಿದರ್ ಪತಿಯ ಕ ಬಂಧಮನೆಡಗಲಿಸಿ ಪೋಪ ದುರ್ಯೋಧನನಂ॥೧೬॥
--------------
ರನ್ನ
ಅನುಜೇಯನಿತ್ತು ನರಂಗಾ ತನ ತನಯಂಗಿತ್ತು ತನ್ನ ಮಗಳಂ ತಾನಾ ತನ ರದಮನೆಸಗಿ ಧರ್ಮಜ ನನುಜನ ನೆವದಿಂದ‌ಮರಸುಗೆಯ್ವಂ ಕೃಷ್ಣಂ॥೪೨॥
--------------
ರನ್ನ
ಅರಿಗಳ್ ಪಾಂಡವರೊಳ್ ವಿರೋಧಮಂ ಬಿಸುಟು ಸಂಧಿಯಂ ಮಾಡುವುದೆಂ ಬರಮಾತಂ ಕೇಳಿಸಲೆ ನ್ನೆರಡುಂ ಕಿವಿಗಳನದೇಕೆ ಬಿದಿ ಮಿಡಿದನೋ॥೮॥
--------------
ರನ್ನ
ಅರಿಯೆನಿದಂ ನಿನ್ನಿಂದಿನ ತೆರನಂ ನೀನೆನಗದೇಕೆ ಮುಳಿದಿರ್ಪೆಯೊ ಮೇಣ್ ಮರುವಾತುಗುಡದೆ ರವಿಸುತ ಮರಸುಂದಿರ್ದಪೆಯೊ ಮೇಣ್ಬಳಲ್ದಿರ್ದಪೆಯೋ॥೧೫॥
--------------
ರನ್ನ
ಅರೆಮುಗಿದಿರ್ದ ಕಣ್ಗಳುಮಲರ್ದ ಮೊಗಂ ಕಡಿವೋದ ಕೆಯ್ಯುಮಾ ಸುರತರಮಾಗೆ ಕರ್ಚಿದವುಡುಂ ಬೆರಸನ್ಯಶರಪ್ರಹಾರ ಜ ರ್ಜರಿತಶರೀರನಾಗಿ ನವಲೋಹಿತವಾರ್ಧಿಯೊಳಳ್ದು ಬಿಳ್ದನಂ ಕುರುಪತಿ ನೋಡಿ ಕಂಡನಭಿಮನ್ಯುಕುಮಾರನನಾಜಿವೀರನಂ ॥೫೪॥
--------------
ರನ್ನ
ಅಸ಼ಮಬಲ ಭವದ್ವಿಕ್ರಮ ಮಸಂಭವಂ ಪೆರರ್ಗೆ ನಿನ್ನನಾನಿನಿತಂ ಪ್ರಾ ರ್ಥಿಸುವೆನಭಿಮನ್ಯು ನಿಜ ಸಾ ಹಸೈಕದೇಶಾನುಮರಣಮೆಮಗಕ್ಕೆ ಗಡಾ॥೫೭॥
--------------
ರನ್ನ
ಅಸುಹೃತ್ಸೇನೆಗೆ ಸಾಲ್ವನೊರ್ವನೆ ಗಡಂ ಲುದ್ರಾವತಾರಂ ಗಡಂ ನೊಸಲೊಳ್ ಕಣ್ಗಡಮೆಂದು ನಚ್ಚಿ ಪೊರೆದೆಂ ತಾನಕ್ಕೆ ತಮ್ಮಮ್ಮನ ಕ್ಕಿಸಲಂಬಂ ತಿರುವಾಯ್ಗೆ ತಂದರಿವರೇ ತಾಮಿರ್ವರುಂ ಕಯ್ದುವಂ ಬಿಸುಟರ್ ಜೋಳದ ಪಾಳಿಯಂ ಬಗೆದರಿಲ್ಲಾದ್ರೌಣಿಯುಂ ದ್ರೋಣನುಂ
--------------
ರನ್ನ
ಆಮ್ಮಗನೆನಾಗೆ ಧರ್ಮಜ ನೇಮ್ಮಗನಲ್ಲನೆ ಬಳಿಕ್ಕೆ ನೀಮುಂ ತಾಮುಂ ನಿಮ್ಮೊಳ್ ನೇರ್ಪಡುಗಿಡದೆ ಸು ಖಮ್ಮುನ್ನಿನ ತೆರದೆ ಬಾಳ್ವುದಾಂ ಬೆಸಕೆಯ್ಯೆಂ॥೧೨॥
--------------
ರನ್ನ
ಇನಸುತ ಗಾಂಡಿವಿ ಸಂಮೋ ಹನಾಸ್ತ್ರದಿಂದೆಚ್ಚು ನಿದ್ರೆಯಂ ಮಾಡಿದನಂ ದಿನ ಗೋಗ್ರಹಣದೊಳೀಗಳ್ ನಿನಗಿಂತೀ ದೀರ್ಘನಿದ್ರೆಯಂ ಮಾಡಿದನೇ॥೨೧॥
--------------
ರನ್ನ
ಇನಸುತನಿರವಂ ದುಶ್ಯಾ ಸನನಿರವಂ ಕಂಡುಮಿನ್ನುಮೆನ್ನಸುವಿದು ನೆ ಟ್ಟನೆ ಪೋದುದಿಲ್ಲ ಕಲ್ಲೆರ್ದೆ ತನದಿಂದೆನ್ನಂತು ಬರ್ದನಾವನುಮೊಳನೇ॥೨೮॥
--------------
ರನ್ನ
ಇನಿಸಿನಿಸುತಿಂಬೆವೊರ್ಮೆಯೆ ತಿನೆ ತವುಗುಮಿದೆಂದು ತಾಯುಮಾನೆಯ ಪೆಣನಂ ತಿನಲಾರದೆ ಪೆರರ್ಗಿಕ್ಕದೆ ಮನಮಂ ಪಸುತಿರ್ದುವಲ್ಲಿ ಲೋಭಿಮರುಳ್ಗಳ್॥೩೮॥
--------------
ರನ್ನ
ಇರಲಿಂತೀಮಾದ್ರಿಪುತ್ರರ್ ಬಡವುಗಳವರೇಗೆಯ್ವರಿಂ ಧರ್ಮಪುತ್ರಂ ಬೆರಸೀಗಳ್ ಬರ್ಕೆ ಭೀಮಂ ಹರಿಸುತನೊಡನೀ ಮೂವರುಂ ಬರ್ಕೆ ಮೇಣ ಯ್ವರುಮಿಂಬರ್ಕೀ ಕೃತಾಂತಾತ್ಮಜಪವನಜಗಾಂಡೀವಧನ್ವರ್ಕಳೀಮೂ ವರೊಳೊರ್ವಂ ಕೃಷ್ಣ ಬರ್ಕಿಂ ಪೊಣರಲನಿಬರುಂ ಬರ್ಕೆ ಮೇಣ್ ಬನ್ನಮೀವೆಂ॥೪೨॥
--------------
ರನ್ನ
ಇರಿಯೆಂ ಬಿಳ್ದನನೆಂಬೀ ಬಿರುಬಿಂದಂ ಬೀಸೆ ಗದೆಯ ಗಾಳಿಯ ಕೋಳೆ ಳ್ಚರಿಸಿದುದು ಭೀಮನಂ ಮೆ ಯ್ಮರೆದವನಂ ತಂದೆ ಸುತರ್ಗೆ ಕೂರದರೊಳರೇ॥೩೨॥
--------------
ರನ್ನ
ಎನಗಾಜೂದಿನೊಳಗ್ರಜಾನುಜಸಮೇತಂ ಗಂಡುದೊಳ್ತಾಗಿ ಕಾ ನನದೊಳ್ ವಲ್ಕಲಧಾರಿಯಾಗಿ ಹರನೊಳ್ ದಿವ್ಯಾಸ್ತ್ರಮಂ ಬೇಡೆ ಬೆ, ಳ್ತನದಿಂ ತಾಪಸನಾಗಿ ಪೇಡಿಯೆನೆ ಮತ್ಸ್ಯಾವಾಸದೊಳ್ ವಾಸುದೇ ವನನಂಟಂ ನಟನಾಗಿ ಬಾರದ ಭವಂ ಬಂದಂ ಪೃಥಾನಂದನಂ॥೨೯॥
--------------
ರನ್ನ
ಎನಿತುಂ ಪೊಕ್ಕಿರ್ದಪಯ್ ನೀಂ ಪೊರಮಡು ಕೊಳದಿಂ ದ್ರೌಷದೀದ್ರೋಹದುಶ್ಯಾ ಸನದುಷ್ಟಜ್ಯೇಷ್ಠ ಭೀಷ್ಮಪ್ರಮುಖನಿಖಿಲಬಂಧುಕ್ಷಯೋತ್ಪನ್ನದುಃಖ ಧ್ವನಿವಾರಿಚ್ಛಿನ್ನಧೈರ್ಯದ್ರುಮ ಯಮಸುತ ನಿಷ್ಕರಣ ದ್ವೇಷಿ ಭೀಮ ಧ್ವನಿಯಂ ಕೇಳ್ದಿನ್ನುಮಿರ್ದಯ್ ಕುರುಕುಲವಿಲಯೋತ್ಪಾತನೋತ್ಪಾತಕೇತೂ॥೧೫॥
--------------
ರನ್ನ
-->