ಒಟ್ಟು 24 ಕಡೆಗಳಲ್ಲಿ , 1 ಕವಿಗಳು , 17 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಧನೃಪಸುತನೆಯೋ ಜಾ ತ್ಯಂಧನೆಯೋ ಮೆಟ್ಟದಗಲ್ದು ಪೋಗೆನುತುಂ ಕೋ ಪಾಂಧರ್ ಜಡಿದರ್ ಪತಿಯ ಕ ಬಂಧಮನೆಡಗಲಿಸಿ ಪೋಪ ದುರ್ಯೋಧನನಂ॥೧೬॥
--------------
ರನ್ನ
ಇನಸುತನಿರವಂ ದುಶ್ಯಾ ಸನನಿರವಂ ಕಂಡುಮಿನ್ನುಮೆನ್ನಸುವಿದು ನೆ ಟ್ಟನೆ ಪೋದುದಿಲ್ಲ ಕಲ್ಲೆರ್ದೆ ತನದಿಂದೆನ್ನಂತು ಬರ್ದನಾವನುಮೊಳನೇ॥೨೮॥
--------------
ರನ್ನ
ಈ ದೊರೆಯರಮಗನುಂ ಮೃಷ ವಾದಂ ನೋಡೆಂದು ಧರ್ಮನಂ ಮೂದಲಿಸಲ್ ಪೋದಂ ಪುತ್ರನನಲಸಲ್ ಪೋದನೆ ಯಮಪುರಕೆ ಮುಕ್ಥಬಾಣಂ ದ್ರೋಣಂ॥೨೫॥
--------------
ರನ್ನ
ಕದನದೊಳುಣ್ಮಿದೊಳ್ಮಿದುಳ ಕರ್ದಮದೊಳ್ ಜಗುಳ್ದಂಘ್ರಿ ಜಾರಿ ಪೋ ಪುದುಮೊಡನಿರ್ದ ಸಂಜಯನಿಳೇಶ್ವರನಂ ಪಿಡಿದೂರುಭಂಗಮಾ ಗದೆ ವಲಮೆಂದೊಡಾಗದೆನೆ ಪುಲ್ಮರುಳೊಂದೆಡೆವೋಗಿ ಭೀಮ ಕೋ ಪದೆ ನಿನಗೂರುಭಂಗಭಯಮಾಗದೆ ಪೋಕುಮೆ ಕೌರವೇಶ್ವರಾ॥೪೪॥
--------------
ರನ್ನ
ಚಾತುರ್ವಣ್ ರ್ಣ್ಯದೊಳಂ ದ್ವಿಜ ಜಾತಿಗೆ ದರ್ಭಾಧಿಕಾರಮಲ್ಲದೆ ವಂಶೋ ದ್ಭೂತ ನೃಪೋಚಿತಮರಿಯಂ ಘಾತಿಪ ಶಸ್ತ್ರಾಸ್ತ್ರಮವರ್ಗೆ ಜಾತಿವಿರುದ್ಧಂ॥೧೭॥
--------------
ರನ್ನ
ಜತುಗೇಹಾನಲಬೀಜಮುಗ್ರವಿಷಸಂಜತಾಂಕುರಂ ಕ್ರೀಡನೋ ದ್ದತಿಕೃದ್ದ್ಯೂತವಿನೋದಪಲ್ಲವಚಯಂ ಪಾಂಚಾಲರಾಜಾತ್ಮಜಾ ಯತಕೇಶಗ್ರಹಪುಷ್ಪಮಾಗೆ ಬೆಳೆದಾ ವೈರದ್ರುಮಂ ಕೌರವ ಕ್ಷಿತಿಪಾಲೋರು ಕಿರೀಟಭಂಗ ಫಲಮಂ ಪೇಳ್ ಮಾಡದೇಂ ಪೋಕುಮೇ॥೫೭॥
--------------
ರನ್ನ
ತನಗೆ ಹತೋಶ್ವತ್ಥಾಮೋ ಯೆನಲಕ್ಕು‌ಮೆ ಯಮಪುರಕ್ಕೆ ಗುರು ಪೋಪೆಡೆಯೊಳ್ ಘನಕುಂಜರ ಎಂದೆಂಗುಮೇ ಜನರಂಜನೆಗರಿಯಲಾದುದಿಲ್ಲಲಮಗನಂ
--------------
ರನ್ನ
ನಡುವುಡಿವನ್ನಮೇರಿ ಬರಿಯೆಲ್ವುಡಿವನ್ನೆಗಮೊತ್ತಿ ಮೆಟ್ಟಿ ಮೆ ಯ್ಯಡಗಡಗಾಗೆ ಮುನ್ನುರಮನಿರ್ಬಗಿಯಾಗಿರೆ ಪೋಳ್ದು ನೆತ್ತರಂ ಕುಡಿಕುಡಿದಾರ್ದ ವೈರಿಯುಳಿದನ್ನೆಗಮೆನ್ನಳಲೆಂತು ಪೋಕುಮೆಂ ದಡಿಗಡಿಗಳ್ತು ತನ್ನಣುಗದಮ್ಮನನೀಕ್ಷಿಸಿದಂ ಸುಯೋಧನಂ॥೪॥
--------------
ರನ್ನ
ನಿಜಜೀವಂ ಪರಲೋಕದೊಳ್ ನಿಜಮಹಾಮಾಂಸಂ ಪಿಶಾಚಾಸ್ಯದೊಳ್ ನಿಜರಕ್ತಂ ರಿಪುಕುಕ್ಷಿಯೊಳ್ ನಿಜಶಿರಂ ನಕ್ತಂಚರೀ ಹಸ್ತದೊಳ ನಿಜಕಾಯಂ ಕುರುಭೂಮಿಯೊಳ್ ನೆಲಸೆ ಗಾಂಧಾರೀಜ ದುರ್ಯೋಧನಾ ನುಜ ದುಶ್ಯಾಸನ ಭೀಮ ಭೀಮಗದೆಯಿಂ ಪಂಚತ್ವಮಂ ಪೋರ್ದಿದಯ್॥೫॥
--------------
ರನ್ನ
ನಿಮಗೆ ಪೊಡಮಟ್ಟು ಪೋಪೀ ಸಮಕಟ್ಟಿಂ ಬಂದೆನಹಿತರೊಳ್ ಸಂಧಿಯನೇಂ ಸಮಕೊಳಿಸಲೆಂದು ಬಂದೆನೆ ಸಮರದೊಳೆನಗಜ್ಜ ಪೇಳಿಮಾವುದು ಕಜ್ಜಂ॥೪೫॥
--------------
ರನ್ನ
ನುಡಿಯದೆ ಪೋಗಲೀಯೆನೆಲೆ ಪೋದೊಡೆ ಧೂರ್ಜಟಿಯಾಣೆ ಮೀರಿ ಪೋ ದೊಡೆ ಕಲಿಭೀಮನಾಣೆ ಧೂರ್ಜಟಿಯಾಣೆಗೆ ನಿಂದು ಭೀಮನೆಂ ದೊಡೆ ಮುಳಿದಟ್ಟಿ ಕುಟ್ಟಲರಸಂ ಗದೆಗೊಂಡೊಡೆ ಭೂತಕೋಟಿಯುಂ ಬಡಿಗೊಳೆ ಸಂಜಯಂ ನಯದೆ ಬಗ್ಗಿಸಿದಂ ಫಣಿರಾಜಕೇತುವಂ॥೪೬॥
--------------
ರನ್ನ
ಪಗೆ ಚಿತ್ರಿಂಗದನುಯ್ಯಲ್ ಗಗನದೊಳುರೆ ತನ್ನ ತಂದ ಬಾಂಧವಕೃತಮಂ ಬಗೆಯದಹಿತಮನೆ ಬಗೆದಂ ಪುಗದಿರ್ಕುಮೆ ಪೋಗಿ ಕೌರವಂ ರೌರವಮಂ॥೨೬॥
--------------
ರನ್ನ
ಪದುಳಂ ಕುಳ್ಳಿರ್ದೆಮಗಾ ಯದ ಮಾತಂ ತಗುಳೆ ಗಳಪಿ ಪೋದಂ ಸಂಧಿ ರ್ದದಟರೊಳಿರಿದರಿಯಂ ತ ಪ್ಪದೆ ಕಮ್ಮರಿಯೋಜನೆನಿಸಿದಂ ಬಿಲ್ಲೋಜಂ ॥೧೩॥
--------------
ರನ್ನ
ಬಂದಂ ಬಕಾಂತಕಂ ಪೋ ಕೊಂದಂಬಕವೆಸರ್ಗೆ ಮುನಿದು ನಮ್ಮುಮನಿನ್ನೆಂ ಬಂದದೊಳೆ ಪಾರಿಪೋದುವು ನಿಂದಿರದುರವಣಿಸಿ ಬಕನಿಕಾಯಕಮದರೊಳ್॥೧೯॥
--------------
ರನ್ನ
ಬೆಳಗುವ ಸೊಡರೊಳ್ ಸೊಡರಂ ಬೆಳಗಿ ಪಲರ್ ಕೊಂಡುಪೋಗೆಯುಂ ಕುಂದದೆ ಪ ಜ್ಜಳಿಸುವವೊಲ್ ಜಗಮೆಲ್ಲಂ ಕೊಳಲುಂ ತವದಿತ್ತು ಮೆರೆವನಿರಿವ ಬೆಡಂಗಂ
--------------
ರನ್ನ
-->